ದೇಶದಲ್ಲಿ ಅತೀ ಹೆಚ್ಚು ದಿನಗಳ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸಿಂಧನೂರಿನ ಆರಾಧ್ಯದೈವ ಶ್ರೀ ಆದಿಶೇಷನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಿದ್ಧರಾಮೇಶ ಮನ್ನಾಪುರ, ನಗರಸಭೆ ಮಾಜಿ ಸದಸ್ಯ ಕೆ.ರಾಜಶೇಖರ, ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಧ್ವರಾಜ ಆಚಾರ್ಯ ಇತರರಿದ್ದರು.  
ರಾಜ್ಯ

ಜನ ಕಲ್ಯಾಣ ಕೇಂದ್ರಿತ ಯೋಜನೆ ಜಾರಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ ಹೇಳಿಕೆ
  • ಪ್ರಧಾನಿ ಮೋದಿ ಸುದೀರ್ಘ ಸೇವೆಗಾಗಿ ಪೂಜೆ
ಸಿಂಧನೂರು: ದೇಶದಲ್ಲಿ ಅತೀ ಹೆಚ್ಚು ದಿನಗಳ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ನಗರದ ಆರಾಧ್ಯದೈವ ಶ್ರೀ ಆದಿಶೇಷನ ದೇವಸ್ಥಾನದಲ್ಲಿ ಪೂಜೆ, ಮಂಗಳಾರತಿಯೊಂದಿಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ ಮಾತನಾಡಿ, ಭಾರತದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಕೀರ್ತಿ  ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ. 
ಜನ ಕಲ್ಯಾಣ ಕೇಂದ್ರಿತ ಯೋಜನೆಗಳನ್ನು ಜಾರಿಗೊಳಿಸಿದ್ದು, ಜನಧನ್, ಸ್ವಚ್ಛ ಭಾರತ್ ಮಿಷನ್, ಪ್ರಧಾನಮಂತ್ರಿ ಅವಾಸ್, ಜಲಜೀವನ್, ಆಯುಷ್ಮಾನ್ ಭಾರತ್‌ಗಳಿಂದ ಜನರಿಗೆ ಅನುಕೂಲವಾಗಿವೆ ಎಂದರು. 
ಪ್ರಮುಖರಾದ ರವಿ ರಾಠೋಡ್, ರವಿ ಉಪ್ಪಾರ್, ಶರಣಬಸವ, ಸೋಮನಾಥ ಪತ್ತಾರ್, ನಾಗರಾಜ ದೇವರಗುಡಿ, ಪ್ರಶಾಂತ ಶೆಟ್ಟಿ, ಫಕೀರಪ್ಪ ಬಾಗೋಡಿ, ಶಿವು ಹಿರೇಮಠ, ರಾಮಕೃಷ್ಣ ಉಪ್ಪಾರ, ಶರಣಪ್ಪ ಬಂಡಿ, ಯುವ ಮೋರ್ಚಾ ಅಧ್ಯಕ್ಷ ಮತ್ತು ಬರ್ಸಿ, ಹಸೇನಪ್ಪ ಸೂಲಂಗಿ, ಬಸವರಾಜ ನಾಯಕ, ಮುದಿಯಪ್ಪ ಕಟ್ಟಿಮನಿ, ಅಂಬರಿಷ್ ಕಡಬೂರ, ನಾಗರಾಜ ಕಡಬೂರ, ಮೌನೇಶ ಹೊಸಮನಿ, ಕಾಶಿನಾಥ ಹಿರೇಮಠ, ಶ್ರೀನಿವಾಸ ಮೇಸ್ತ್ರಿ, ಯಲ್ಲುಸಾ ಬದಿ, ಆನಂದಯ್ಯ ಕೊಂಡ, ಸಂಗಪ್ಪ ಬೊಮ್ಮನಾಳ, ರಾಮು ಸುಕಾಲಪೇಟೆ,  ಸಹನಾ ಹಿರೇಮಠ, ಮಮತಾ ಹಿರೇಮಠ, ಶಿವಮ್ಮ ಅಂಬಿಗರ, ರೇಣಮ್ಮ ನಾಯಕ ಇದ್ದರು.