ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜನವಾದಿ ಮಹಿಳಾ ಸಂಘಟನೆ ಸಭೆಯಲ್ಲಿ ಸಂಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಂಡ್ಯಾಮಾತನಾಡಿದರು. ಚಂದ್ರಕುಮಾರಿ ಬಳ್ಳಾರಿ, ವಿಜಯಲ್ಮ ಗಡ್ಡೆ, ರೇಷ್ಮಾ ಕುಂದನ, ಮಹಾನಂದಾ ಬೊಕ್ಕೆ ಇತರರಿದ್ದರು.
- ದೇವಿ ಮಂಡ್ಯಾ ಒತ್ತಾಯ
- ಕಲ್ಯಾಣದಲ್ಲಿ ಜನವಾದಿ ಮಹಿಳಾ ಸಂಘಟನೆ ಸಭೆ
ಬಸವಕಲ್ಯಾಣ: ಮಹಿಳಾ ಮೀಸಲಾತಿಯನ್ನು ಬರುವ ಲೋಕಸಭಾ ಅಧಿವೇಶನದಲ್ಲಿ ಜಾರಿ ಮಾಡಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಂಡ್ಯಾಒತ್ತಾಯಿಸಿದ್ದಾರೆ.
ನಗರದ ಹರಳಯ್ಯನವರ ಗವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜನವಾದಿ ಮಹಿಳಾ ಸಂಘಟನೆ ಸಭೆಯಲ್ಲಿ ಮಾತನಾಡಿದ ಅವರು, ಜನಗಣತಿ, ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಇವು ಒಂದಕ್ಕೊಂದು ಸಂಬಂಧವೇ ಇಲ್ಲ. ಈಗಿರುವ ಲೋಕ ಸಭೆ ಸ್ಥಾನಗಳಲ್ಲಿಯೇ ಮಹಿಳಾ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಸಂಘಟನೆಯಿಂದ ದೇಶಾದ್ಯಂತ ಹೋರಾಟ ಮಾಡಲಾಗುತ್ತಿದೆ ಎಂದರು.
ಪಂಚ ರಾಜ್ಯ ಚುನಾವಣೆಗೂ ಮುನ್ನ ವಿಶೇಷ ಅಧಿವೇಶನ ಕರೆದು ಮಹಿಳಾ ಮೀಸಲಾತಿಯ ಜತೆಗೆ ಕ್ಷೇತ್ರ ಪುನರ್ವಿಂಗಡಣೆಗೆ ಮುಂದಾದ ಕೇಂದ್ರ ಸರ್ಕಾರದ ನಡೆ ಚುನಾವಣೆಯಲ್ಲಿ ಮಹಿಳಾ ಮತದಾರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗಿತ್ತು. ಇದು ಜನರಿಗೆ ದಾರಿ ತಪ್ಪಿಸುವ ತಂತ್ರ ಎಂದು ಆರೋಪಿಸಿದರು.
ರಾಜ್ಯದಲ್ಲಿ ಜೂನ್ 30ರಿಂದ ಎಸ್ಐಆರ್ ಆರಂಭವಾಗಲಿದೆ. ಈಗಾಗಲೇ 12 ರಾಜ್ಯಗಳಲ್ಲಿ ಎಸ್ಐಆರ್ ನಡೆಸಿ ಸುಮಾರು 7 ಕೋಟಿಗೂ ಅಧಿಕ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಬಹುತೇಕ ಮಹಿಳೆಯರು, ಹಿಂದುಳಿದ ವರ್ಗದ ಕೂಲಿ ಕಾರ್ಮಿಕರು, ಉದ್ಯೋಗಕ್ಕಾಗಿ ಹೊರ ರಾಜ್ಯಕ್ಕೆ ಹೋದವರು ಸೇರಿದ್ದಾರೆ. ದಾಖಲೆ ಇಲ್ಲದ ಕಾರಣ ಪಟ್ಟಿಯಿಂದ ಹೊರಗಿಡಲಾಗಿತ್ತಿದೆ. ಎಸ್ಐಆರ್ ಸಂದರ್ಭದಲ್ಲಿ ಅಗತ್ಯ ದಾಖಲೆ ನೀಡಿವ ಸಂಬಂಧ ಜಾಗೃತಿ ಮೂಡಿಸುವ ಕಾರ್ಯ ಸಂಘಟನೆ ಮಾಡಿತ್ತಿದೆ ಎಂದರು. ಉದ್ಘಾಟನೆ ನೆರವೇರಿಸಿದ ಜನವಾದಿ ಸಂಟನೆ ರಾಜ್ಯಾಧ್ಯೆ ಚಂದ್ರಕುಮಾರಿ ಬಳ್ಳಾರಿ ಮಾತನಾಡಿ, ಮಹಿಳೆಯಲ್ಲಿ ಜಾಗೃತಿ ಮೂಡಿಸುವುದೆ ಸಂಟನೆಯ ಮೂಲ ಉದ್ದೇಶ. ಮಹಿಳೆಯರ ಮೇಲಾಗುವ ಅನ್ಯಾಯದ ವಿರುದ್ಧ ಸಂತರಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.
ಸಂಟನೆ ಜಿಲ್ಲಾಧ್ಯೆ ವಿಜಯಲ್ಮ ಗಡ್ಡೆ ಮಾತನಾಡಿ,ಸಂಟನೆ ಕಾರ್ಯಚಟುವಟಿಕೆಯ ಮಾಹಿತಿ ನೀಡಿದರು. ರಾಜ್ಯ ಉಪಾಧ್ಯೆ ರೇಷ್ಮಾ ಕುಂದನ, ತಾಲೂಕು ಅಧ್ಯೆಕ್ಷ ಮಹಾನಂದಾ ಬೊಕ್ಕೆ, ಅಂಗನವಾಡಿ ನೌಕರರ ಸಂದ ಜಯಶ್ರೀ ಮೆಂಡೋಳೆ, ಸಿಐಟಿಯು ಒಕ್ಕೂಟದ ಶ್ರೀದೇವಿ ಚಿವಡೆ, ಪ್ರಮುಖರಾದ ಅಂಬುಬಾಯಿ ಮಾಳಗೆ, ಲೀಲಾ ಸಂಗ್ರಾಮ, ಇಂದು ಪಾಟೀಲ್ ಇತರರಿದ್ದರು.