ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ ರೆಮ್ಸ್​ (ಆರ್​ಇಎಂಎಸ್​) ಮೂಲಕ ಟೆಂಡರ್​ ಪದ್ಧತಿ ಅಳವಡಿಸಬೇಕು ಎಂದು ಆಗ್ರಹಿಸಿ ಆಹಾರಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂದ ಪದಾಧಿಕಾರಿಗಳು ನೆಹರು ಗಂಜ್​ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಸಂದ ಅಧ್ಯಕ್ಷ ಸಂತೋಷ ಲಂಗರ್​, ಕಾರ್ಯದರ್ಶಿ ಬಸವರಾಜ ಹೆಚ್​.ತಡಕಲ್​, ಶರಣಪ್ಪ ಬಾಳಿ, ಮಲ್ಲಿಕಾರ್ಜುನ ಕಕ್ಕಳಮೇಲಿ, ಮಲ್ಲಿಕಾರ್ಜುನ ಮಾನಕರ್​ ಸೇರಿದಂತೆ ಅನೇಕ ವರ್ತಕರು, ಸಾರ್ವಜನಿಕರು ಪಾಲ್ಗೊಂಡಿದ್ದರು. 
ರಾಜ್ಯ

ಟೆಂಡರ್​ಗೆ ರೆಮ್ಸ್​ ಪದ್ಧತಿ ಅಳವಡಿಸಿ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಆಹಾರಧಾನ್ಯ, ಬೀಜ ವ್ಯಾಪಾರಿಗಳ ಪ್ರತಿಭಟನೆ
  • ಜಾನುವಾರು ಸಂತೆ ಸುಲ್ತಾನಪೂರ್​ಗೆ ಸ್ಥಳಾಂತರಿಸಿ
ಕಲಬುರಗಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ ರೆಮ್ಸ್​ (ಆರ್​ಇಎಂಎಸ್​) ಮೂಲಕ ಟೆಂಡರ್​ ಪದ್ಧತಿ ಅಳವಡಿಸಬೇಕು ಎಂದು ಆಗ್ರಹಿಸಿ ಆಹಾರಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂದ ಪದಾಧಿಕಾರಿಗಳು ನೆಹರು ಗಂಜ್​ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರಸಕ್ತ ಸಮಿತಿಯಲ್ಲಿ ಇನಾಮ್​ (ಇಎನ್​ಎಎಂ) ಮೂಲಕ ಆನ್​ಲೈನ್​ ಟೆಂಡರ್​ ನಡೆಯುತ್ತಿದ್ದು, ಇದರಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿನ ವ್ಯಾಪಾರಿಗಳಿಗೆ ಅನೇಕ ತೊಂದರೆ ಎದುರಾಗಿವೆ. ಶಾಶ್ವತ ಪರಿಹಾರವಾಗಿ ಕಲಬುರಗಿ ಎಪಿಎಂಸಿ ಮಾರುಕಟ್ಟೆ ಸಮಿತಿಯಲ್ಲೂ ರೆಮ್ಸ್​ ಮೂಲಕ ಟೆಂಡರ್​ ಪದ್ದತಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಿಮ್ಸ್​ ತಂತ್ರಜ್ಞಾನದಲ್ಲಿ ವ್ಯವಹಾರ ಮಾಡುವಾಗ ರಾಜ್ಯದ ಇತರೆ ಎಪಿಎಂಸಿ ವರ್ತಕರ ಜತೆಗೆ ಸುಗಮ ವಹಿವಾಟು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.
ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಟ್ರಾಫಿಕ್​ ಸಮಸ್ಯೆ ತಲೆದೋರಿದೆ. ಕೆಲ ಅಂಗಡಿಗಳಲ್ಲಿ ಲೋಡಿಂಗ್​, ಅನ್​ಲೋಡಿಂಗ್​ಗೆ ನಿಗದಿತ ಸಮಯವಿಲ್ಲ. ಹೀಗಾಗಿ ತೊಂದರೆ ಎದುರಾಗಿದೆ. ಇದಕ್ಕಾಗಿ ಪ್ರತ್ಯೇಕ ಸಮಯ ನಿಗದಿ ಮಾಡಬೇಕು. ಮಾರುಕಟ್ಟೆಯ ಮುಖ್ಯದ್ವಾರದ ಒಳಗೆ ಕೆಲ ಟಂಟಂಗಳು ಮತ್ತು ಗಾಡಿಗಳು ರಸ್ತೆಯಲ್ಲೇ ಪಾರ್ಕಿಂಗ್​ ಮಾಡಿಕೊಳ್ಳುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಮಾರುಕಟ್ಟೆ ಆವರಣದಲ್ಲಿ ಬೀದಿ ದೀಪ ಮತ್ತು ನೀರು ಸರಬರಾಜಿಗಾಗಿ ರಸ್ತೆ ಹಡ್ಡಿದ್ದರಿಂದ ನಾಲೆ ಭರ್ತಿಯಾಗಿದ್ದು, ಶ್ರೀ ಸ್ವಚ್ಛತೆ ಮಾಡಬೇಕು ಎಂದು ಒತ್ತಾಯಿಸಿದರು.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮಾರುಕಟ್ಟೆ ಆವರಣದ ಕಾಟನ್​ ಮಾರ್ಕೆಟ್​ ರಸ್ತೆಗಳ ಮಧ್ಯದಲ್ಲಿ ಶನಿವಾರಕ್ಕೊಮ್ಮೆ ನಡೆಯುವ ಜಾನುವಾರು ಸಂತೆಗಳಿಂದ ವ್ಯಾಪಾರಸ್ಥರು, ರೈತರು, ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ ಪರಿಹಾರ ಶೂನ್ಯ. ಇದೀಗ ಜಾನುವಾರು ಸಂತೆಯನ್ನು ಸುಲ್ತಾನಪೂರ್​ ತರಕಾರಿ ಮಾರುಕಟ್ಟೆ ಬಳಿ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದರು.
ಎಪಿಎಂಸಿ ಕಾರ್ಯದರ್ಶಿಗೆ ಮನವಿಪತ್ರ ಸಲ್ಲಿಸಿದರು. ಸಂದ ಅಧ್ಯಕ್ಷ ಸಂತೋಷ ಲಂಗರ್​, ಕಾರ್ಯದರ್ಶಿ ಬಸವರಾಜ ಹೆಚ್​.ತಡಕಲ್​, ಶರಣಪ್ಪ ಬಾಳಿ, ಮಲ್ಲಿಕಾರ್ಜುನ ಕಕ್ಕಳಮೇಲಿ, ಮಲ್ಲಿಕಾರ್ಜುನ ಮಾನಕರ್​ ಸೇರಿದಂತೆ ಅನೇಕ ವರ್ತಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
"

ಕಲಬುರಗಿ ನಗರದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೃಷಿ ಮಾರುಕಟ್ಟೆಗೆ ಬರುವ ರೈತರು, ಸಾರ್ವಜನಿಕರು, ಹಮಾಲರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸಂಚಾರ ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಬೇಕು.

ಸಂತೋಷ ಲಂಗರ್​,

ಅಧ್ಯಕ್ಷ, ಆಹಾರಧಾನ್ಯ, ಬೀಜ ವ್ಯಾಪಾರಿಗಳ ಸಂ.