ಭಾವಿಯ ಉತ್ತರಾದಿ ಮಠದಲ್ಲಿ ಶುಕ್ರವಾರ ರಾಮನವಮಿ ನಿಮಿತ್ತ ಶ್ರೀರಾಮಚಂದ್ರ ದೇವರ ತೊಟ್ಟಿಲೋತ್ಸವ ನಡೆಯಿತು. ತಿರುಮಲಾಚಾರ್ಯ ಜೋಷಿ, ಮೋಹನರಾವ ಕುಲಕರ್ಣಿ, ಹಣಮಂತ್ರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಚಂದ್ರಕಲಾ, ಭೂದೇವಿ, ಸುಮಂಗಲಾ ಇದ್ದರು. 
ರಾಜ್ಯ

ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ ರಾಮಾಯಣ

ಪ್ರಮುಖ ಮುಖ್ಯಾಂಶಗಳು

  • ನಮ್ಮ ಜೀವನದಲ್ಲಿರಲಿ ರಾಮಾಯಣ ಸಾರ
ಕೆಂಭಾವಿ: ಮರ್ಯಾದಾ ಪುರುಷೋತ್ತಮನೆಂದು ಕರೆಸಿಕೊಳ್ಳುವ ಶ್ರೀರಾಮಚಂದ್ರ ಹುಟ್ಟಿದ ಈ ಭಾರತ ದೇಶದ ಸನಾತನ ಸಂಸತಿ ಉಳಿಯಬೇಕಾದರೆ ಶ್ರೀರಾಮನ ಕಥೆ ಸಾರುವ ರಾಮಾಯಣವನ್ನು ನಾವು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಜ್ಯೋತಿಷಿ ಬಾಳಕೃಷ್ಣರಾವ ಕುಲಕರ್ಣಿ ಹೇಳಿದರು.
ಪಟ್ಟಣದ ಉತ್ತರಾದಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡ ರಾಮನವಮಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಮ ದೇವರು ಅವತರಿಸಿದ ಪವಿತ್ರ ದಿನದಂದು ನಾವೆಲ್ಲರೂ ಅವನ ಸ್ಮರಣೆ ಮಾಡಿ ಅವನ ಅನುಗ್ರಕ್ಕೆ ಪಾತ್ರರಾಗೋಣ ಎಂದರು.
ಅರ್ಚಕ ರಾವೇಂದ್ರಾಚಾರ್ಯ ಜೋಷಿ ನೇತೃತ್ವದಲ್ಲಿ ಶ್ರೀ ರಾಮದೇವರ ತೊಟ್ಟಿಲೋತ್ಸವ, ಯತಿಚತುಷ್ಠಯರ ವೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ, ಭಜನೆ ಕಾರ್ಯಕ್ರಮ ನಡೆಯಿತು. ತಿರುಮಲಾಚಾರ್ಯ ಜೋಷಿ, ಮೋಹನರಾವ ಕುಲಕರ್ಣಿ, ಹಣಮಂತ್ರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ವೆಂಕಟೇಶ ನಾಡಿಗೇರ, ಹಳ್ಳೇರಾವ ಕುಲಕರ್ಣಿ, ಗುರುರಾಜ ಕುಲಕರ್ಣಿ, ಸುಮಂಗಲಾ, ಭೂದೇವಿ, ಡಾ. ಲ್ಮ ಕುಲಕರ್ಣಿ, ಚಂದ್ರಕಲಾ ಕುಲಕರ್ಣಿ, ಉಷಾ, ಭಾರತಿ, ಶಾಂಭವಿ ನಡಿಗೇರ ಹಲವರಿದ್ದರು.
ಯುಕೆಪಿ ಕ್ಯಾಂಪ್​ ಸಿದ್ದಿ ಮಾರುತಿ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ಅರ್ಚಕ ಶೀಪಾದ ಕುಲಕರ್ಣಿ ನೇತೃತ್ವದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಸುಮಂಗಲೆಯರಿಂದ ತೊಟ್ಟಿಲೋತ್ಸವ ನಡೆಯಿತು. ಸಂಜೀವನಗರ ಬಡಾವಣೆಯ ಸಂಜೀವಾಂಜನೆಯ ದೇವಸ್ಥಾನದಲ್ಲಿ ಅರ್ಚಕ ಆನಂದ ಕುಲಕರ್ಣಿ ನೇತೃತ್ವದಲ್ಲಿ ರಾಮನವಮಿ ಉತ್ಸವ ನಡೆಯಿತು. ಪಟ್ಟಣದ ಲ್ಮ ನಗರದಲ್ಲಿ ರಾಮ ನವಮಿ ಉತ್ಸವವನ್ನು ಅತೀ ವಿಜೃಂಬಣೆಯಿಂದ ಆಚರಿಸಲಾಯಿತು. ನವೀನ, ರಾವೇಂದ್ರ, ಶೀನಿವಾಸ, ಸಿದ್ದಮ್ಮ ಡಿಗ್ಗಾವಿ, ಪ್ರಿಯಾಂಕಾ, ವೀಣಾ ಪಾಟೀಲ್​ ಇದ್ದರು.