ಬೇಲೂರಿನ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. 
ರಾಜ್ಯ

ವಿಷ್ಣು ಸಮುದ್ರ ಕೆರೆಯಲ್ಲಿ ಗಣೇಶ ಮುರ್ತಿ ವಿಸರ್ಜನೆ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಕುಂಬಾರ ಬೀದಿ ಬಾಯ್ಸ ಬಳಗ
  • ಶ್ರೀ ಆಂಜನೇಯಸ್ವಾಮಿ ದೇಗುಲ
ಬೇಲೂರು: ಕುಂಬಾರ ಬೀದಿ ಬಾಯ್ಸ ಬಳಗದಿಂದ ಪಟ್ಟಣದ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಭಾನುವಾರ ವಿಷ್ಣು ಸಮುದ್ರ ಕೆರೆಯಲ್ಲಿ ವಿಸರ್ಜಿಸಲಾಯಿತು.
ಗಣಪತಿ ಮೂರ್ತಿಯನ್ನು ವಿಸರ್ಜನೆಗೂ ಮುನ್ನ ಮೆರವಣಿಗೆ ಮಾಡಲಾಯಿತು. ಕುಂಬಾರ ಬೀದಿ ನಿವಾಸಿಗಳು ಮತ್ತು ಬಳಗದ ಯುವಕರು ಭಕ್ತಿಗೀತೆಗಳು ಹಾಗೂ ಜೈ ಗಣೇಶ ಘೋಷಣೆ ಕೂಗಿ ಸಂಭ್ರಮಿಸಿದರು. ವಿಶೇಷವಾಗಿ ಪುಟಾಣಿ ಮಕ್ಕಳು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ್ದು ಗಮನ ಸೆಳೆಯಿತು. ಮಹಿಳೆಯರು, ಮಕ್ಕಳು ಸೇರಿದಂತೆ ನಿವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ. ಶಿವರಾಜು, ವಾರ್ಡ್‌ನ ನಿವಾಸಿಗಳಾದ ಬಸವರಾಜು, ಶ್ರೀಧರ್, ಚೇತನ್, ಗಣೇಶ್, ರೇಣುಕಮ್ಮ, ಶಕುಂತಲಾ, ಪುಟ್ಟಮ್ಮ, ಪುಷ್ಪ, ರೋಜಿ, ರೇಖಾ, ಸೌಮ್ಯಾ, ವೀಣಾ, ಸವಿತಾ, ಚಿನ್ನು, ಲಕ್ಷ್ಯ, ಧರ್ಮೇಂದ್ರ ಇತರರಿದ್ದರು.