ಗಣಿ ಶಿಕ್ಷಣ ಕಾಲೇಜಿಗೆ ಅಪಾರ ಕೊಡುಗೆ Mines Education 
ರಾಜ್ಯ

ಗಣಿ ಶಿಕ್ಷಣ ಕಾಲೇಜಿಗೆ ಅಪಾರ ಕೊಡುಗೆ Mines Education

ಕೆಜಿಎಫ್​: ರಾಜ್ಯದಲ್ಲೇ ಉತ್ತಮ ಗಣಿ ಶಿಕ್ಷಣ ಕಾಲೇಜು ಎಂದು ಹೆಸರು ಪಡೆಯಲು ರಿಜಿಸ್ಟ್ರಾರ್​ ಗಿರೀಶ್​ ಅವರ ಸೇವೆ ಗಮನಾರ್ಹವಾಗಿದೆ. ಈ ಸಂಸ್ಥೆಯನ್ನು 37 ವರ್ಷ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥ ಸೇವೆ ನೀಡಿದ್ದಾರೆ ಎಂದು ಸರ್ಕಾರಿ ಗಣಿ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಲಕ್ಷಿ$್ಮಕಾಂತ್​ ಹೇಳಿದರು.Mines Education
ನಗರದ ಸರ್ಕಾರಿ ಗಣಿ ಶಿಕ್ಷಣ ಕಾಲೇಜಿನ ರಿಜಿಸ್ಟ್ರಾರ್​ ಎಂ.ಎನ್​.ಗಿರೀಶ್​ ನಿವೃತ್ತರಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ಪಾಲಿಟೆಕ್ನಿಕ್​ ಪ್ರಾಂಶುಪಾಲ ವಾಸಗಿ ಮಾತನಾಡಿ, ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ನುಡಿಮುತ್ತು ತಿಳಿಸಿ, ಅರವತ್ತರ ನಂತರ ಮರಳಿ ಅರಳಬೇಕು. ಆಸರೆಗೊಂದು ವ್ಯವಸ್ಥೆ, ಕೇಳಲಿಕ್ಕೊಂದು ಕಿವಿ ಇದ್ದರೆ ಬದುಕು ನೆಮ್ಮದಿಯಾಗಿರುತ್ತದೆ ಎಂದರು.
ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕವಾಗಿ ಸಲ್ಲಿಸಿದ ಸೇವೆ ನಮ್ಮ ನೆನಪಿನಲ್ಲಿ ಉಳಿದಿರುತ್ತದೆ. ಜತೆಗೆ ವಿದ್ಯಾಸಂಸ್ಥೆಗೆ ನೀಡಿದ ಕೊಡುಗೆ ನೆನಪಿಸುವ ದಿನವಾಗಿದೆ ಎಂದರು.