ಬಾಗಲಕೋಟೆ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಸುಮಿತ್ರಾ ಗುರಬಾಳ, ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಂಜುಳಾ ಕಮತಗಿ ಮತ್ತಿತರರು ಇದ್ದರು. 
ರಾಜ್ಯ

ತಕ್ಷಣವೇ ಶೇ.೩೩ ಮಹಿಳಾ ಮೀಸಲಾತಿಜಾರಿಗೆ ತನ್ನಿ

ಬಾಗಲಕೋಟೆ: ದೇಶದಲ್ಲಿ ಶೇ. ೩೩ ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದಿಂದ ಮಂಗಳವಾರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನವನಗರದ ಕಾಂಗ್ರೆಸ್ ಕಚೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುಮಿತ್ರಾ ಗುರಬಾಳ, ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಯಾವತ್ತೂ ವಿರೋಧ ಮಾಡಿಲ್ಲ. ಆದರೆ, ಬಿಜೆಪಿಯ ದುರುದ್ಧೇಶಕ್ಕೆ ಮಾತ್ರ ವಿರೋಧ ಮಾಡಿದೆ ಎಂದರು.
ಕಾAಗ್ರೆಸ್ ಪಕ್ಷ ಯಾವತ್ತಿನಿಂದಲೂ ಮಹಿಳಾ ಪರವಾಗಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುತ್ತ ಬಂದಿದೆ. ಆದರೆ, ಬಿಜೆಪಿ ದಿಢೀರನೇ ಬೇರೊಂದು ಅಜಂಡ ಇಟ್ಟುಕೊಂಡು ಮೀಸಲಾತಿಯನ್ನು ನೆಪ ಮಾಡಿತ್ತು. ಇದರಿಂದ ಬಿಲ್ ಪಾಸು ಆಗಲಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡು ಬಿಜೆಪಿ ವಿರೋಧ ಪಕ್ಷಗಳು ಮಹಿಳಾ ವಿರೋಽಗಳು ಎಂದು ಬಿಂಬಿಸಲು ಹೊರಟಿದೆ. ಶೇ. ೩೩ ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಪಕ್ಷದ ವಿರೋಧ ಇಲ್ಲವೇ ಇಲ್ಲ. ಈಗ ಇರುವ ಸ್ಥಾನಗಳಿಗೆ ಅನ್ವಯಿಸುವಂತೆ ತಕ್ಷಣವೇ ಮೀಸಲಾತಿ ಜಾರಿಗೆ ತರಬೇಕು ಎಂದು ತಮ್ಮ ಒತ್ತಾಯ ಇದೆ. ಇದಕ್ಕಾಗಿ ದೇಶದ್ಯಂತ ಹೋರಾಟ ಮಾಡಲಾಗುತ್ತದೆ. ಅದರ ಭಾಗವಾಗಿ ಇದೀಗ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. ೫೦ ಮೀಸಲಾತಿ ತಂದಿದ್ದು ಕಾಂಗ್ರೆಸ್ ಪಕ್ಷ. ಕೆಲವೊಮ್ಮೆ ಅದು ಶೇ.೫೧ ಕೂಡ ಆಗುತ್ತದೆ. ದೇಶದಲ್ಲಿ ಪ್ರಥಮ ಮಹಿಳಾ ಪ್ರಧಾನಮಂತ್ರಿ ಮಾಡಿದ್ದು ಕಾಂಗ್ರೆಸ್. ಸಂವಿಧಾನ ರಚನಾ ಸಮಿತಿಯಲ್ಲಿ ಮಹಿಳೆಯರು ಇದ್ದರು. ಇಷ್ಟೆಲ್ಲ ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಆದ್ಯತೆ ನೀಡಿದ್ದರೂ ಬಿಜೆಪಿ ದುರುದ್ಧೇಶದಿಂದ ತರಾತುರಿಯಲ್ಲಿ ಕ್ಷೇತ್ರ ಪುರನ್ ವಿಂಗಡನೆಯ ಜೊತೆಗೆ ಮಹಿಳಾ ಮೀಸಲಾತಿ ಬಿಲ್ ಪಾಸು ಮಾಡಿಕೊಳ್ಳಲು ಬಂದಿದ್ದು ಯಾವ ಸಮಯದಲ್ಲಿ ಎಂದು ಪ್ರಶ್ನಿಸಿದರು.
ಪಂಚರಾಜ್ಯ ಚುನಾವಣೆಗಳು ನಡೆದ ವೇಳೆ ಮೂರು ದಿನಗಳ ವಿಶೇಷ ಅಽವೇಶನ ಕರೆಯುವ ಅವಶ್ಯಕತೆ ಏನಿತ್ತು? ದೇಶದಲ್ಲಿ ಗಣತಿಯೇ ಆಗದೇ ಕ್ಷೇತ್ರ ಪುನರ್ ವಿಂಗಡನೆ ಯಾವ ಆಧಾರದ ಮೇಲೆ ಮಾಡುತ್ತಾರೆ? ಅಂದರೆ ಬಿಜೆಪಿ ಒಂದು ಅಜಂಡ ಇಟ್ಟುಕೊಂಡಿತ್ತು. ಬಿಲ್ ಪಾಸ್ ಆದರೆ ಅದರು ಶ್ರೇಯಸ್ಸು ಪಡೆದುಕೊಳ್ಳುವುದು, ಬಿಲ್ ಬಿದ್ದರೆ ಅದನ್ನು ವಿಪಕ್ಷಗಳ ತಲೆ ಕಟ್ಟಿ, ಪಂಚರಾಜ್ಯ ಚುನಾವಣೆ ಗೆಲ್ಲುವ ದುರ್ಬುದ್ಧಿ ಹೊಂದಿತ್ತು ಎಂದು ಕಿಡಿಕಾರಿದರು.
ವಿಽ ವಿಧಾನಗಳ ಪ್ರಕಾರ, ಕಾನೂನು ಬದ್ಧವಾಗಿ ಸಂವಿಧಾನಾತ್ಮಕವಾಗಿ ಮಸೂದೆ ಮಂಡಿಸಿದರೆ ಅದಕ್ಕೆ ಮನ್ನಣೆ ಇರುತ್ತದೆ. ಈಗಲೂ ಸಹ ಕಾಂಗ್ರೆಸ್ ಪಕ್ಷ ಶೇ. ೩೩ ಮಹಿಳಾ ಮೀಸಲಾತಿ ಜಾರಿಗೆ ಬರಬೇಕು ಎನ್ನುವ ಒತ್ತಾಯ ಮಾಡುತ್ತದೆ. ಆದರೆ, ಅದು ಬೇರೆ ಬೇರೆ ಉದ್ಧೇಶ ಇಟ್ಟುಕೊಂಡು ಅಲ್ಲ. ಈಗ ಇರುವ ಕ್ಷೇತ್ರಗಳಿಗೆ ಮೀಸಲಾತಿ ಕಲ್ಪಿಸಲಿ ಎಂದು ಒತ್ತಾಯಿಸಿದರು.