ಸೇಡಂ ತಾಲೂಕಿನ ಕಾಚೂರಿನಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. ಬಸವರಾಜ ಪಾಟೀಲ್ಮ, ವಿಶ್ವನಾಥ ಪಾಟೀಲ್, ನಾಗೇಶ್ವರರಾವ ಮಾಲಿಪಾಟೀಲ್, ಶಿವಶರಣರೆಡ್ಡಿ ಪಾಟೀಲ್, ಮಹೇಶ ಪಾಟೀಲ್ ಇತರರದ್ದರು.
- ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ
- ಕಾಚೂರಿನಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಚಾಲನೆ
ಸೇಡಂ: ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಆಗುತ್ತಿರುವುದು ಮನಗಂಡು ವಿದ್ಯುತ್ ಉಪ ಕೇಂದ್ರಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಕರೆಂಟ್ ಸಮಸ್ಯೆ ಪರಿಹಾರ ಸಿಗಲಿದೆ ಎಂದು ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಕಾಚೂರಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಸೋಮವಾರ ಆಯೋಜಿಸಿದ್ದ 27 ಕೋಟಿ ರೂ. ವೆಚ್ಚದ 110/33/11 ಕೆವಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಮತೇತ್ರದ ಬಹುತೇಕ ಭಾಗ ತೆಲಂಗಾಲದ ಗಡಿಗೆ ಹೊಂದುಕೊಂಡಿದೆ. ಒಂದೇ ವಿದ್ಯುತ್ ಕೇಂದ್ರದಿಂದ ಅನೇಕ ತೊಂದರೆಯಾಗುತಿತ್ತು. ಈಗಾಗಲೇ ತೊಲಮಾಮಡಿ, ಕೋಲಕುಂದಾ, ಮದನಾದಲ್ಲಿ ಉಪ ಕೇಂದ್ರ ನಿರ್ಮಾಣಗೊಂಡು ಕೆಲಸ ಆರಂಭವಾಗಿದೆ. ಕಾಗಿಣಾ ನದಿ ದಡದಲ್ಲಿರುವ ಸಾಕಷ್ಟು ಗ್ರಾಮಗಳಲ್ಲಿ ವೊಲ್ಟೇಜ್ ಸಮಸ್ಯೆ ಆಗುತ್ತಿರುವುದರಿಂದ ಇಲ್ಲಿಯೂ ಹೊಸದಾಗಿ ಉಪ ಕೇಂದ್ರ ನಿರ್ಮಿಸಲಾಗುತ್ತಿದೆ ಎಂದರು.
ಎಪಿಎಮ್ಸಿ ಮಾಜಿ ಅಧ್ಯಕ್ಷ ವಿಶ್ವನಾಥ ಪಾಟೀಲ್ ಕುಕ್ಕುಂದಾ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ ಮಾತನಾಡಿದರು.
ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ಶ್ರೀಯಾಂಕಾ ಧನಶ್ರೀ, ಕೆಪಿಟಿಸಿಎಲ್ ಮುಖ್ಯ ಅಭಿಯಂತರ ರಾಮಸ್ವಾಮಿ, ಅಧೀಕ್ಷಕ ಅಭಿಯಂತರ ರಾಮಚಂದ್ರ ಎಸ್.ಜಿ., ಇಇ ರಾಜೇಶ ಹಿಪ್ಪರಗಿ, ಎಇಇ ಮಲ್ಲಿಕಾರ್ಜುನ ಗುಂಡಗೋಳ, ದಯಾನಂದ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ ಮಾಲೀಪಾಟೀಲ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಶಣರೆಡ್ಡಿ ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರ, ಪ್ರಮುಖರಾದ ಮಹೇಶ ಪಾಟೀಲ್ ತರನಳ್ಳಿ, ಲ್ಮಾರೆಡ್ಡಿ ತೆಲ್ಕೂರ, ಜಗದೇವಪ್ಪ ಪಾಟೀಲ್ ಕೊಂಕನಹಳ್ಳಿ, ಚನ್ನಬಸಪ್ಪ ಹಾಗರಗಿ, ಜಗನ್ನಾಥ ಚಿಂತಪಳ್ಳಿ, ಮಹ್ಮದ್ ಗೌಸ್, ನಾಗರಾಜ ಪಾಟೀಲ್, ಸತೀಶ ಪೂಜಾರಿ, ಸುಭಾಷ ನಾಟೀಕಾರ ಇದ್ದರು.