Immadi Pulikeshi opens for cricket tournament 
ರಾಜ್ಯ

ಇಮ್ಮಡಿ ಪುಲಿಕೇಶಿ ಕ್ರಿಕೆಟ್​ ಪಂದ್ಯಾವಳಿಗೆ ತೆರೆ

ವೇಮಗಲ್: ಇಮ್ಮಡಿ ಪುಲಿಕೇಶಿ ಸ್ಪೋರ್ಟ್ಸ್​ ಕ್ಲಬ್​ನಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಮೈಟಿ ಚನ್ನಪ್ಪನಹಳ್ಳಿ ತಂಡ ವಿಜೇತವಾಗಿ ಹೊರಹೊಮ್ಮಿತು. ಕೆಜಿಎ್​ನ ರೋರಿಂಗ್​ ಲಯನ್ಸ್​ ತಂಡ ದ್ವೀತಿಯ, ಗೌನಿಪಲ್ಲಿಯ ನೇತಾಜಿ ಕ್ರಿಕೆರ್ಟಸ್​ ತಂಡ ತೃತೀಯ ಬಹುಮಾನ ಪಡೆಯಿತು. ಪಂದ್ಯಾವಳಿಗೆ ಡಿಐಜಿಪಿ ದೇವರಾಜ್​ ಹಾಗೂ ಮಾಜಿ ಸಭಾಪತಿ ವಿ.ಆರ್​. ಸುದರ್ಶನ್​ ಚಾಲನೆ ನೀಡಿದರು.
ಡಿಐಜಿಪಿ ದೇವರಾಜ್​ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಯುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪೋತ್ಸಾಹಿಸುವ ಉದ್ದೇಶದಿಂದ ಪಂದ್ಯಾವಳಿ ಆಯೋಜನೆ ಮಾಡಿರುವುದು ಶ್ಲಾನೀಯ. ಇದರಿಂದ ಯುವ ಆಟಗಾರರಿಗೆ ಕ್ರೀಡೆಗಳ ಕುರಿತು ಹುಮ್ಮಸ್ಸು ಹೆಚ್ಚಾಗಲಿದೆ ಎಂದರು.
ಶಾಸಕ ಕೊತ್ತೂರು ಜಿ.ಮಂಜುನಾಥ ಮಾತನಾಡಿ, ಯುವಕರು ಇಂತಹ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಂಡರೆ ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ. ಕ್ರೀಡೆಗೆ ಕೊಟ್ಟಷ್ಟೇ ಪ್ರಾತಿನಿಧ್ಯ ಶಿಕ್ಷಣಕ್ಕೂ ನೀಡಿ ಎಂದು ಕಿವಿಮಾತು ಹೇಳಿದರು.
ಪ್ರತಿ ಪಂದ್ಯಕ್ಕೂ ಪ್ಲೇಯರ್​ ಆ್​ದ ಮ್ಯಾಚ್​ ಪ್ರಶಸ್ತಿ ನೀಡಲಾಯಿತು. ಬೆಸ್ಟ್​ ಬ್ಯಾಟ್ಸ್​ಮನ್​, ಬೆಸ್ಟ್​ ಬೌಲರ್​, ಹಾಗೂ ಪ್ಲೇಯರ್​ ಆ್​ದ ಟೂರ್ನಮೆಂಟ್​ ಪ್ರಶಸ್ತಿಯಾಗಿ 5 ಸಾವಿರ ರೂ. ವಿತರಿಸಲಾಯಿತು.
ಎಂಎಲ್ಸಿ ಅನಿಲ್​ ಕುಮಾರ್​, ವೇಮಗಲ್​ &ನರಸಾಪುರ ಯೋಜನಾ ಪ್ರಾಧಿಕಾರ ಅಧ್ಯ ಉರಟ ಅಗ್ರಹಾರ ಚೌಡರೆಡ್ಡಿ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಮೈಲಂಡಳ್ಳಿ ಮುರಳಿ, ಎಪಿಎಂಸಿ ಮಾಜಿ ಅಧ್ಯೆ ಕುರ್ಕಿ ರಾಜೇಶ್ವರಿ, ಖಜಾಂಚಿ ಅರುಣ್​ ಕುಮಾರ್​, ಪದಾಧಿಕಾರಿಗಳಿದ್ದರು.
ವಿಜೇತ ತಂಡಕ್ಕೆ 1 ಲಕ್ಷ: ವಿಜೇತ ತಂಡಕ್ಕೆ 1 ಲ ರೂ. ಹಾಗೂ ಟ್ರೋಫಿ ನೀಡಿದರೆ, ದ್ವೀತಿಯ ಸ್ಥಾನ ಪಡೆದ ಕೆಜಿಎ್​ನ ರೋರಿಂಗ್​ ಲಯನ್ಸ್​ ತಂಡಕ್ಕೆ 50 ಸಾವಿರ ರೂ. ಹಾಗೂ ಟ್ರೋಫಿ ಹಾಗೂ ತೃತೀಯ ಸ್ಥಾನ ಗಳಿಸಿದ ಗೌನಿಪಲ್ಲಿಯ ನೇತಾಜಿ ಕ್ರಿಕೆರ್ಟಸ್​ ತಂಡಕ್ಕೆ <25ಸಾವಿರ ಹಾಗೂ ಟ್ರೋಫಿ ಜತೆಗೆ ಭಾಗವಹಿಸಿದ್ದ ಪ್ರತಿ ತಂಡಕ್ಕೂ ನೆನಪಿನ ಕಾಣಿಕೆ ವಿತರಿಸಲಾಯಿತು.