Illegal pump installation in lake 
ರಾಜ್ಯ

ಕೆರೆಗೆ ಅಕ್ರಮ ಪಂಪ್​ ಅಳವಡಿಕೆ

ಮಡಿವಾಳ: ತಾಲೂಕಿನ ತೋರ್ನಹಳ್ಳಿಯ ಕೆರೆಯಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕೆರೆ ನೀರಿಗೆ ಪಂಪ್​ ಅಳವಡಿಸಿ ತೋಟಕ್ಕೆ ನೀರು ಹರಿಸುತ್ತಿದ್ದ ಮಾಹಿತಿ ತಿಳಿದ ಗ್ರಾಪಂ ಪಿಡಿಒ ಸಿ.ಆರ್​.ಗೌಡ ಅವರು ದಾಳಿ ನಡೆಸಿ ಪಂಪ್​, ಮೋಟಾರ್​ ಕೇಬಲ್​, ಪೈಪ್​ಗಳನ್ನು ಗ್ರಾಪಂ ವಶಕ್ಕೆ ಪಡೆದು ಕೆರೆಯ ನೀರು ಬಳಸದಂತೆ ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಪ್ರಸಕ್ತ ವರ್ಷ ಮಳೆಯ ಕೊರತೆಯಿಂದ ಕೆರೆಗಳಲ್ಲಿನ ನೀರನ್ನು ಜಾನುವಾರು ಕುಡಿಯಲು ಬಿಟ್ಟಿರುವುದು. ಯಾರೇ ಆಗಲಿ ಅಕ್ರಮವಾಗಿ ಕೆರೆಯ ನೀರನ್ನು ಬಳಸಿಕೊಳ್ಳಬಾರದೆಂದು ಪಂಚಾಯತಿ ಮೊದಲೇ ಸೂಚಿಸಿತ್ತು. ಆದರೆ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕೆರೆ ನೀರಿಗೆ ಪಂಪ್​ ಮೋಟರ್​ ಅಳವಡಿಸಿದ್ದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಕೆರೆಗಳಲ್ಲಿನ ನೀರು ಯಾರು ಬಳಸಿಕೊಳ್ಳಬಾರದು ಜಾನುವಾರುಗಳು ಕುಡಿಯಲು ನೀರನ್ನು ಬಳಸಿಕೊಳ್ಳಬೇಕಾಗಿರುವುದರಿಂದ ಯಾರೇ ಆಗಲಿ ಅಕ್ರಮವಾಗಿ ಕೆರೆ ನೀರನ್ನು ಬಳಸಿಕೊಂಡಲ್ಲಿ ಕ್ರಿಮಿನಲ್​ ಮೊಕದ್ದೊಮ್ಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ಪಿಒಡಿ ನೀಡಿದರು. ಎಸ್​ಡಿಎ ನಾಗರಾಜು ಹಾಗೂ ಗ್ರಾಮಸ್ಥರು ಇದ್ದರು.