Illegal activities continue  
ರಾಜ್ಯ

ಪರಪ್ಪನ ಅಗ್ರಹಾರದಲ್ಲಿ ನಿಲ್ಲದ ಅಕ್ರಮ

ಪ್ರಮುಖ ಮುಖ್ಯಾಂಶಗಳು

  • ಪ್ರಜ್ವಲ್ ರೇವಣ್ಣ ಕೊಠಡಿಯಲ್ಲಿ ಮೊಬೈಲ್, ಆಂಧ್ರದ ಸಿಮ್ ಪತ್ತೆ
  • ಬ್ಯಾರಕ್‌ನಲ್ಲಿ ಪೆನ್‌ಡ್ರೈವ್ ಪತ್ತೆ ತೀವ್ರ ಕುತೂಹಲ
  • ಜೈಲು ಮೇಲ್ವಿಚಾರಕ ಅಮಾನತು, ಅಧೀಕ್ಷಕರಿಗೆ ನೋಟಿಸ್
  • ಡಿಐಜಿ ನೇತೃತ್ವದಲ್ಲಿ ತನಿಖೆಗೆ ಡಿಜಿಪಿ ಆದೇಶ

ಬೆಂಗಳೂರು: 

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಹಾಗೂ ಪ್ರಭಾವಿ ಆರೋಪಿಗಳಿಗೆ ಮತ್ತೆ ರಾಜಾತಿಥ್ಯ ಕಲ್ಪಿಸುತ್ತಿರುವ ಬೆಳಕಿಗೆ ಬಂದಿದೆ. ಜೈಲು ನಿಯಮ ಉಲ್ಲಂಸಿ ಕೊಲೆ ಆರೋಪಿ ನಟ ದರ್ಶನ್‌ಗೆ ಸೌಲಭ್ಯ ಕಲ್ಪಿಸಿದ್ದ ೆಟೋ, ವಿಡಿಯೊ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಅದೇ ಮಾದರಿಯಲ್ಲಿ ಈಗ ಮತ್ತೆ ಜೈಲಿನಲ್ಲಿ ನಿಷೇಧಿತ ವಸ್ತುಗಳು ಪೂರೈಕೆ ಮಾಡಲಾಗುತ್ತಿರುವ ಆರೋಪ ಕೇಳಿ ಬಂದಿದೆ.

ಮಹಿಳೆ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿದ್ದ ಬ್ಯಾರಕ್ ಮೇಲೆ ನಡೆದ ಸಿಸಿಬಿ ದಾಳಿ ವೇಳೆ ಅಂಡ್ರಾಯಿಡ್ ಮೊಬೈಲ್, ಪೆನ್‌ಡ್ರೈವ್, ನೋಟ್ ಬುಕ್ ಸೇರಿ ಇತರೆ ವಸ್ತುಗಳು ಪತ್ತೆಯಾಗಿರುವ ಪರಿಣಾಮ ಪ್ರಜ್ವಲ್ ವಿರುದ್ಧ ಎ್ಐಆರ್ ದಾಖಲಾಗಿದೆ. 
ಸಿಸಿಬಿ ಅಧಿಕಾರಿಗಳು ಮಂಗಳವಾರ ತಡರಾತ್ರಿವರೆಗೆ ನಡೆಸಿದ ದಾಳಿ ವೇಳೆ ವಿಐಪಿ ಕೈದಿಗಳ ಬ್ಯಾರಕ್‌ನಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿರುವ ಪರಿಣಾಮ ಸಜಾಬಂಧಿ ಕೈದಿ ಪ್ರಜ್ವಲ್ ಹಾಗೂ ಆತನ ಬ್ಯಾರಕ್‌ನಲ್ಲಿದ್ದ ವಿಚಾರಣಾಧೀನ ಕೈದಿ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಮಾದಕ ವಸ್ತು ನಿಗ್ರಹದ ದಳದ ಇನ್‌ಸ್ಪೆಕ್ಟರ್ ಎಂ.ಎಲ್.ಸುಬ್ರಹ್ಮಣ್ಯಸ್ವಾಮಿ ಅವರು ಎ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಈಗ ಪ್ರಜ್ವಲ್ ಎ2 ಆರೋಪಿಯನ್ನಾಗಿ ಮಾಡಲಾಗಿದೆ.

ಪೆನ್ ಡ್ರೈವ್‌ನಲ್ಲೇನಿದೆ:

ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದ್ದ ಪೆನ್‌ಡ್ರೈವ್, ಈಗ ಜೈಲಿನಲ್ಲಿ ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಸಿಸಿಬಿ ಅಧಿಕಾರಿಗಳು ಮೊಬೈಲ್ ಜತೆಗೆ ಪ್ರಜ್ವಲ್ ಬ್ಯಾರಕ್‌ನಲ್ಲಿ ಪೆನ್ ಡ್ರೈವ್ ಪತ್ತೆ ಮಾಡಿದ್ದಾರೆ. ಅದರಲ್ಲಿ ಏನಿದೆ ಎಂಬುದು ತೀವ್ರ ಕೂತುಹಲ ಮೂಡಿಸಿದೆ. ಮೊಬೈಲ್ ಜತೆಗೆ ಪೆನ್‌ಡ್ರೈವ್ ಜೈಲಿನ ಒಳಗೆ ಹೇಗೆ ಬಂದು ಎಂಬುದು ಪೊಲೀಸರ ತನಿಖೆಯಿಂದ ತಿಳಿಯಲಿದೆ. 
ಜೈಲಿನಲ್ಲಿ ಪ್ರಜ್ವಲ್ ಬಳಕೆ ಮಾಡುತ್ತಿದ್ದ ಸಿಮ್ ಕಾರ್ಡ್ ಆಂಧ್ರಪ್ರದೇಶದ ಮೂಲದ್ದಾಗಿದೆ ಎನ್ನಲಾಗಿದೆ. ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳನ್ನು ಯಾರು ಪೂರೈಕೆ ಮಾಡುತ್ತಿದ್ದರು, ಜಾಮರ್‌ಗಳು ಇದ್ದರು ಅವುಗಳಿಗೆ ನೆಟ್‌ವರ್ಕ್ ಎಲ್ಲಿಂದ? ಹೇಗೆ ಬರುತ್ತಿತ್ತು ಎಂಬುದು ಚರ್ಚೆಗೆ ಗ್ರಾಸವಾಗಿದೆ. 

ಜೈಲು ಮೇಲ್ವಿಚಾರಕ ಅಮಾನತು:

ಪ್ರಜ್ವಲ್ ರೇವಣ್ಣ ಕೊಠಡಿಯಲ್ಲಿ ದೊರೆತ ಮೊಬೈಲ್, ಪೆನ್‌ಡ್ರೈವ್ ಸೇರಿ ಇತರೆ ವಸ್ತುಗಳ ಹಿನ್ನೆಲೆಯಲ್ಲಿ ವಿಐಪಿ ಸೆಲ್ ಕರ್ತವ್ಯದಲ್ಲಿದ್ದ ಸಹಾಯಕ ಮೇಲ್ವಿಚಾರಕ ಈರಣ್ಣ ರಂಗಾಪುರ ಅವರನ್ನು ಡಿಜಿಪಿ ಅಲೋಕ್ ಕುಮಾರ್ ಅಮಾನತುಗೊಳಿಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ, ಜೈಲು ಅಧೀಕ್ಷಕ ಅಂಶು ಕುಮಾರ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ವಿಐಪಿ ಸೆಲ್‌ಗೆ ಇಷ್ಟೊಂದು ಭದ್ರತೆ ಕಲ್ಪಿಸಲಾಗಿದ್ದರು ಮೊಬೈಲ್, ಪೆನ್‌ಡ್ರೈವ್ ಹಾಗೂ ನೋಟ್ ಪುಸ್ತಕಗಳನ್ನು ಕೈದಿಗಳಿಗೆ ಪೂರೈಕೆಯಾಗಿರುವುದು ಹೇಗೆ ಎಂಬ ಕುರಿತು ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಸಿಸಿಬಿ ದಾಳಿ ನಂತರವೂ 2 ಮೊಬೈಲ್ ಪತ್ತೆ

ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ 80ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಏಕಕಾಲಕ್ಕೆ ಪರಪ್ಪನ ಅಗ್ರಹಾರದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಅಧಿಕಾರಿಗಳ ತಂಡ ಅದೇ ವಿಐಪಿ ಬ್ಯಾರಕ್‌ಗಳಲ್ಲಿ ತಪಾಸಣೆ ನಡೆಸಿದ ವೇಳೆ ಮತ್ತೆ 2 ಮೊಬೈಲ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಗೆದಷ್ಟು ಅವಾಂತರ ಎಂಬಂತೆ ಪರಪ್ಪನ ಅಗ್ರಹಾರದಲ್ಲಿ ಇನ್ನೂ ನೂರಾರು ಮೊಬೈಲ್‌ಗಳು ವಿಚಾರಣಾಧೀನ ಹಾಗೂ ಸಜಾಬಂಧಿ ಕೈದಿಗಳ ಬಳಿ ಇವೆ ಎನ್ನಲಾಗಿದೆ. 
ಬಾಕ್ಸ್..
ಡಿಐಜಿ ನೇತೃತ್ವದಲ್ಲಿ ಇಲಾಖೆ ತನಿಖೆ
ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್, ಚಾರ್ಜರ್ ಹಾಗೂ ಪೆನ್‌ಡ್ರೈವ್ ಪತ್ತೆಯಾದ ಪ್ರಕರಣದ ಆಂತರಿಕ ತನಿಖೆ ಕಾರಾಗೃಹ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃದಲ್ಲಿ ತನಿಖೆಗೆ ಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ. ಅಲ್ಲದೆ ಸಿಸಿಬಿ ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಕೈದಿಯ ಸಮವಸ್ತ್ರ ಧರಿಸದೆ ಇರುವ ಕುರಿತು ಸ್ಪಷ್ಟನೆ ನೀಡುವಂತೆ ಜೈಲಿನ ಸೂಪರಿಂಟೆಂಡೆಂಟ್‌ಗೆ ಕೇಳಲಾಗಿದೆ. ಇಂದಿನಿಂದ (ಆ.13)ರಿಂದ ತನಿಖೆ ನಡೆಯಲಿದೆ. 

ಪರಪ್ಪನ ಅಗ್ರಹಾರದ ಐಐಪಿ ಸೆಲ್‌ನಲ್ಲಿ ದೊರೆತ ಮೊಬೈಲ್, ಚಾರ್ಜರ್, ಪೆನ್‌ಡ್ರೈವ್ ಬಗ್ಗೆ ಓರ್ವ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಸಮವಸ್ತ್ರ ಧರಿಸದಿರುವುದರ ಕುರಿತು ಮೂರು ತಿಂಗಳ ಹಿಂದೆ ದೂರು ಬಂದಾಗ ನಾನು ಮೆಮೋ ಕಳಿಸಿದ್ದೇನೆ. ಅದು ಪಾಲನೆಯಾಗಿಲ್ಲ. ಕಳೆದ 7 ತಿಂಗಳಲ್ಲಿ 300 ಮೊಬೈಲ್ ಸೀಜ್ ಮಾಡಲಾಗಿದೆ. ಆದರೂ ಕೈದಿಗಳ ಬಳಿ ಮೊಬೈಲ್, ಸಿಮ್‌ಗಳು ಎಲ್ಲಿಂದ ಹೇಗೆ ಬರುತ್ತಿವೆ ಎಂಬುದು ತಿಳಿಯುತ್ತಿಲ್ಲ. ತನಿಖೆ ವೇಳೆ ಸಿಬ್ಬಂದಿಗಳ ಕೈವಾಡವಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗವುದು. 
-ಅಲೋಕ್ ಕುಮಾರ್ ಡಿಜಿಪಿ.