- ಸಾಮಾನ್ಯವಾಗಿ ಐಐಎಸ್ಸಿ ಕ್ಯಾಂಪಸ್‌ನೊಳಗೆ ಪ್ರವೇಶಕ್ಕೆ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಆದರೆ, ಓಪನ್ ಡೇಯಂದು ಬೆಳಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ಮುಕ್ತವಾಗಿ ಓಡಾಡಬಹುದು.
- ಐಐಎಸ್ಸಿ ಸಂಸ್ಥಾಪಕ ಜೇಮ್‌ಶೆಡ್‌ಜಿ ಟಾಟಾ ಹುಟ್ಟುಹಬ್ಬ (ಮಾ.3) ಹಾಗೂ ಫೆ.28ರಂದು ಸಿ.ವಿ. ರಾಮನ್ ಅವರ ಜನ್ಮದಿನದ ಅಂಗವಾಗಿ ವಿಜ್ಞಾನದ ದಿನ ಆಚರಿಸಲಾಗುತ್ತದೆ. ಈ ಎರಡರ ಸಂಗಮವಾಗಿ ಮಾರ್ಚ್ ತಿಂಗಳ ಮೊದಲ ಶನಿವಾರ ಓಪನ್ ಡೇ
- ಓಪನ್ ಡೇಯಂದು ಕ್ಯಾಂಪನ್‌ನೊಳಗೆ ಕಾಲು ನಡಿಗೆಯಲ್ಲಿ ಸಂಚರಿಸಬೇಕು. ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳಿಗೆ ಅವಕಾಶ ಇರುವುದಿಲ್ಲ.
ಬೆಂಗಳೂರು: ವಿಜ್ಞಾನ, ತಂತ್ರಜ್ಞಾದ ಹತ್ತು ಹಲವು ಸಂಶೋಧೆನೆಗಳನ್ನು ಪ್ರದರ್ಶಿಸಲು ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರತಿವರ್ಷ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಡೆಸುವ ‘ಓಪನ್ ಡೇ’ ಇದೇ ಮಾ.7ರಂದು ನಡೆಯುತ್ತಿದೆ.
ಸಾಮಾನ್ಯವಾಗಿ ಐಐಎಸ್ಸಿ ಕ್ಯಾಂಪಸ್‌ನೊಳಗೆ ಪ್ರವೇಶಕ್ಕೆ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಆದರೆ, ಓಪನ್ ಡೇಯಂದು ಬೆಳಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ಮುಕ್ತವಾಗಿ ಓಡಾಡಬಹುದು.
ಐಐಎಸ್ಸಿ ಸಂಸ್ಥಾಪಕ ಜೇಮ್‌ಶೆಡ್‌ಜಿ ಟಾಟಾ ಅವರ ಹುಟ್ಟುಹಬ್ಬ (1839ರ ಮಾ.3) ಹಾಗೂ ಫೆ.28ರಂದು ಸಿ.ವಿ. ರಾಮನ್ ಅವರ ಜನ್ಮದಿನದ ಅಂಗವಾಗಿ ವಿಜ್ಞಾನದ ದಿನ ಆಚರಿಸಲಾಗುತ್ತದೆ. ಈ ಎರಡರ ಸಂಗಮವಾಗಿ ಮಾರ್ಚ್ ತಿಂಗಳ ಮೊದಲ ಶನಿವಾರ ಓಪನ್ ಡೇ ಆಚರಿಸಲಾಗುತ್ತದೆ. ವಿಜ್ಞಾನದ ಕುರಿತ ಜಾಗೃತಿ ಮೂಡಿಸಲಾಗುತ್ತದೆ.
ಓಪನ್ ಡೇ ಯಂದು ಐಐಎಸ್ಸಿಯಲ್ಲಿ ಉಪನ್ಯಾಸಗಳು, ಪ್ರಾಯೋಗಿಕ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಪೋಸ್ಟರ್ ಪ್ರಸ್ತುತಿಗಳು, ರಸಪ್ರಶ್ನೆ, ಸ್ಪರ್ಧೆಗಳು, ವೈಜ್ಞಾನಿಕ ಸ್ಪರ್ಧೆಗಳು ಮತ್ತು ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಕಿರಿಯ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳೊಂದಿಗೆ ‘ಕಿಡ್ಸ್ ರೆನ್’ ಅನ್ನು ಸ್ಥಾಪಿಸಲಾಗಿದೆ.
ವಾಹನಗಳಿಗೆ ಪ್ರವೇಶವಿಲ್ಲ:
ಓಪನ್ ಡೇಯಂದು ಕ್ಯಾಂಪನ್‌ನೊಳಗೆ ಕಾಲು ನಡಿಗೆಯಲ್ಲಿ ಸಂಚರಿಸಬೇಕು. ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳಿಗೆ ಅವಕಾಶ ಇರುವುದಿಲ್ಲ. ವೃದ್ಧರು, ಮಹಿಳೆಯರು, ಮಕ್ಕಳ ಸಹಾಯಕ್ಕೆ ಎಲೆಕ್ಟ್ರಿಕ್ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ನಾಲ್ಕು ಚಕ್ರದ ವಾಹನಗಳನ್ನು ಐಐಎಸ್ಸಿ ಕೇಂದ್ರೀಯ ವಿದ್ಯಾಲಯ ಆವರಣದಲ್ಲಿ, ದ್ವಿಚಕ್ರ ವಾಹನಗಳನ್ನು ಮುಖ್ಯದ್ವಾರದಲ್ಲಿ ಪಾರ್ಕ್ ಮಾಡಲು ಅವಕಾಶ ಕಲ್ಪಿಸಿದೆ. ಸಾಧ್ಯವಾದಷ್ಟು ಸಾರ್ವಜನಿಕ ವಾಹನಗಳನ್ನು ಬಳಸುವುದು ಉತ್ತಮ ಎಂದು ಐಐಎಸ್ಸಿ ವೆಬ್‌ಸೈಟ್‌ನಲ್ಲಿ ಸಲಹೆ ನೀಡಿದೆ.
ಆನ್‌ಲೈನ್ ನೋಂದಣಿ
ಆಸಕ್ತರು ಐಐಎಸ್ಸಿ ಓಪನ್ ಡೇ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ವೈಯಕ್ತಿಕವಾಗಿ ಮತ್ತು ಸಂಸ್ಥೆಯ ಮೂಲಕವೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.