ಗುಲ್ಬರ್ಗ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರೊ.ಶಶಿಕಾಂತ ಉಡಿಕೇರಿ, ಪ್ರೊ.ರಮೇಶ ಲಂಡನಕರ್​, ಡಾ.ಎನ್​.ಜಿ.ಕಣ್ಣೂರ್​, ಜಯಾಂಬಿಕ, ಡಾ.ಬಿರಾದಾರ್​ ಚಂದ್ರಕಾಂತ ಇತರರಿದ್ದರು. 
ರಾಜ್ಯ

ವಿವೇಕರ ವೈಜ್ಞಾನಿಕ ಚಿಂತನೆ ಕಡೆಗಣನೆ

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ವಿಷಾದ
  • ಗುಲ್ಬರ್ಗ ವಿವಿಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ
ಕಲಬುರಗಿ: ಸ್ವಾಮಿ ವಿವೇಕಾನಂದರು ಭಾರತದ ಹೆಮ್ಮೆಯ ತತ್ವಜ್ಞಾನಿ. ಚಿಂತನೆಗಳು ಸರ್ವಕಾಲಿಕ ಮತ್ತು ಶಕ್ತಿ ಚೇತನ. ಅವರ ವೈಜ್ಞಾನಿಕ ಆಲೋಚನೆ ಕಡೆಗಣಿಸುತ್ತಿರುವುದು ವಿಷಾದಕರ ಸಂಗತಿ. ಸಂದೇಶ ಯುವಕರಿಗೆ ಚೈತನ್ಯದಾಯಕ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್​ ಉಡಿಕೇರಿ ಹೇಳಿದರು.
ಗುಲ್ಬರ್ಗ ವಿವಿ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯುತ್ಸವ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಸರ್ವ ಜನರ ಸ್ವತ್ತು. ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೀಮತ ಮಾಡಬಾರದು. ಆದರ್ಶ ಜೀವನ ಮತ್ತು ಸ್ವಾಸ್ಥ$್ಯ ಸಮಾಜ ಪರಿವರ್ತನೆಗೆ ಧ್ಯಾನ ಮತ್ತು ಅಮೂಲ್ಯ ಮಾನವ ಧರ್ಮ ಸಂಸತಿಯ ಸಂದೇಶ ನೀಡಿದರು ಎಂದರು.
ಶ್ರೀಮಂತ&ಬಡವ, ಮೇಲು&ಕೀಳು ಭಾವನೆಗಿಂತ ಸಹೋದರತೆಯ ಪ್ರೀತಿ ವಿಶ್ವದೆಲ್ಲಡೆ ಹಂಚಿದರು. ಸಮಾಜದ ಪರಿವರ್ತನೆಗೆ ಬೌದ್ಧಿಕತೆ ಮತ್ತು ಧ್ಯಾನದ ಮೂಲಕ ಸತ್ಯದರ್ಶನ ಮಾಡಿಸಿದ ಸಮಾಜದಲ್ಲಿಂದು ಸಂಸತಿ ಮತ್ತು ಧ್ಯಾನ ಪರಿಸರ ಕಡೆಗಣಿಸುತ್ತಿರುವುದು ಮಾನವೀಯ ಸಮಾಜದ ವಿಲಕ್ಷಣ ಬೆಳವಣಿಗೆ. ಯುವಕರು ಅವರ ಭಾವನೆಗಳ ಅಂತರ್ಗತ ಸೆಲೆ ಅರ್ಥ ಮಾಡಿಕೊಂಡು ಸುಂದರ ಬದುಕು ರೂಪಿಸಿಕೊಳ್ಳಬೇಕು. ಅವರ ಸಾಧನೆ ಮತ್ತು ಗುರಿ ಯುವಕರಿಗೆ ಆದರ್ಶ ಎಂದರು.
ಕುಲಸಚಿವ ಪ್ರೊ.ರಮೇಶ್​ ಲಂಡನಕರ್​ ಮಾತನಾಡಿ, ಸ್ವಾಮಿ ವಿವೇಕಾನಂದರು ತಂದೆಯ ಹಣತೆಯಂತೆ ಸತ್ಯ ಶೋಧನೆ ಮೂಲಕ ಮೂಢನಂಬಿಕೆ, ಕಂದಾಚಾರ ವಿರೋಧಿಸಿ ಸಮಾಜದಲ್ಲಿದ್ದ ಅವೈಜ್ಞಾನಿಕ ಚಿಂತನೆ ನಿಮೂರ್ಲನೆಗೆ ಧ್ಯಾನದ ಮೂಲಕ ಪರಿಹಾರ ನೀಡಿದ್ದಾರೆ. ತನ್ನನ್ನು ತಾನು ಅರಿಯಲು ಧ್ಯಾನ ಮಾಡಬೇಕು. ಧ್ಯಾನದಿಂದ ಜ್ಞಾನ ಪಡೆದ ನರೇಂದ್ರ ಸ್ವಾಮಿ ವಿವೇಕಾನಂದ ಎಂದು ಖ್ಯಾತಿ ಪಡೆದಿದ್ದಾರೆ. ದೇಶದ ಶ್ರಮಿಕರು, ಬಡವರು, ಕಾರ್ಮಿಕರು, ಸೈನಿಕರ ಬಗ್ಗೆ ಅವರ ವಿಚಾರಗಳು ಇಂದಿಗೂ ಪ್ರಸ್ತುತ. ಆಹಾರ, ಬಟ್ಟೆ, ಶಿಕ್ಷಣ, ಬಾಷೆ, ಜಾತಿ, ಜ್ಯೋತಿಷ್ಯ, ಮದುವೆ, ಸ್ವರ್ಗ ನರಕಗಳ ಬಗ್ಗೆ ಅವರ ವೈಜ್ಞಾನಿಕ ಬರಹಗಳು ವಿಶ್ವವನ್ನೇ ಆಕರ್ಷಿಸಿವೆ ಎಂದರು.
ವಾಣಿಜ್ಯ ನಿಕಾಯದ ಡೀನ್​ ಪ್ರೊ.ರಾಜಣಾಳ್ಕರ್​ ಲಕ್ಷ$್ಮಣ ಮಾತನಾಡಿ, ಸಮಾಜವನ್ನು ಚೈತನ್ಯದ ಕಡೆಗೆ ಮುನ್ನಡೆಸಿದ ಮಹಾನ್​ ದಾರ್ಶನಿಕ ಸ್ವಾಮಿ ವಿವೇಕಾನಂದ. ಅವರ ಸಮಾನತೆ ಸಂದೇಶ ಅಳವಡಿಸಿಕೊಂಡರೆ ಸಮಾನತೆ ದೇಶ ಕಟ್ಟಬಹುದು. ಎಲ್ಲರೂ ಸಮಾನರೆಂದು 3ನೇ ಶತಮಾನದಲ್ಲಿ ಬುದ್ಧ, 12ನೇ ಶತಮಾನದಲ್ಲಿ ಶರಣರು ಪ್ರತಿಪಾದನೆ ಅದೇ ಆಗಿತ್ತು. ಯಾವುದೇ ಕುತಂತ್ರಗಳಿಗೆ ಒಳಗಾಗದೆ ಡಾ.ಬಿ.ಆರ್​.ಅಂಬೇಡ್ಕರ್​ ಸಂವಿಧಾನದಂತೆ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಭಾತೃತ್ವ ಪಾಲಿಸಿದರೆ ಅಸಮಾನತೆ, ಕೇಂದ್ರೀಕೃತ ಆರ್ಥಿಕ ಪ್ರಾಬಲ್ಯ ತಪ್ಪಿಸಬಹುದು. ದೂರದರ್ಶಿತ್ವದಿಂದ ದೇಶದ ಒಳಿತಿಗಾಗಿ ಅವರ ಚಿಂತನೆಗಳಿಗೆ ಸಮಾಜ ಮುಖಾಮುಖಿಯಾಗಬೇಕಿದೆ. ಅವರ ಮಹತ್ವದ ಭಾಷಣಗಳು ನಮ್ಮ ಅಂತರಂಗ ಪ್ರವೇಶಿಸಬೇಕು ಎಂದರು.
ಕಾರ್ಯಕ್ರಮ ಸಂಚಾಲಕ ಡಾ.ಚಂದ್ರಕಾಂತ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ.ಎನ್​.ಜಿ. ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕ ಇದ್ದರು. ಡಾ.ಟಿ.ನಿಂಗಣ್ಣ ಸ್ವಾಗತಿಸಿದರು. ರಿಷಿಕೇಶ ನಿರೂಪಿಸಿದರು.
"

ಭಾರತದಲ್ಲಿನ ವೈವಿಧ್ಯಮಯ ಸಂಸತಿ, ಭಾಷೆ, ಕಲೆ, ಸಾಹಿತ್ಯ ನೆಲೆಯಲ್ಲಿ ಅಪಾರ ಅಧ್ಯಯನ ನಡೆಸಿದ ಸ್ವಾಮಿ ವಿವೇಕಾನಂದರು ನಮಗೆ ವೈಜ್ಞಾನಿಕ ಪ್ರೆ ನೀಡಿದ್ದಾರೆ. ಬುದ್ಧ, ಕಾರ್ಲಮಾರ್ಕ್ಸ ಮತ್ತು ಸಮತ ಚಿಂತನೆಗಳಿಗೆ ಅವರ ಭಾಷಣಗಳು ಸಮೀಪದಲ್ಲಿವೆ. ಜಾತಿ, ಧರ್ಮ, ಮೌಢ್ಯತೆ ಸೃಷ್ಠಿಸಿರುವ ಈ ನೆಲೆದಲ್ಲಿ ಸತ್ಯ ಮತ್ತು ಧ್ಯಾನದ ಮೂಲಕ ಮೌಲ್ಯಯುತ ಸಮಾಜ ನಿರ್ಮಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಪ್ರೊ.ರಮೇಶ ಲಂಡನಕರ್​,

ಕುಲಸಚಿವ, ಗುಲ್ಬರ್ಗ ವಿವಿ.