ತುರುವೇದಕೆರೆ ಚೌದ್ರಿ Dance Extravaganzaಕನ್ವೆನ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ನೃತ್ಯ ಸಂಭ್ರಮದಲ್ಲಿ ವಿಜೇತ ಮಕ್ಕಳೊಂದಿಗೆ ರೋಟರಿ ಟ್ರಸ್ಟ್ ಅಧ್ಯಕ್ಷ ಸಾ.ಶಿ.ದೇವರಾಜು, ಗ್ಲೋಬಲ್ ಎಂಬಸ್ಸಿ ಶಾಲೆ ಛೇರ್ಮನ್ ಗಂಗಾಧರ್ ದೇವರಮನೆ, ಸರಳಾ ಎಂ.ಟಿ.ಕೃಷ್ಣಪ್ಪ,ಇನ್ನರ್ ವೀಲ್ ಕ್ಲಬ್ ಹಾಗೂ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾ ಚೌದ್ರಿ ಇತರರು ಇದ್ದರು.
ಮಕ್ಕಳಲ್ಲಿ ಸ್ವಾತಂತ್ರದ ಕಿಚ್ಚು ಮತ್ತು ದೇಶಾಭಿಮಾನ ಮೂಡಿಸುವ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ
ಹಮ್ಮಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ತಿಳಿಸಿದರು.
ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ನಲ್ಲಿ ಸ್ವಾತಂತ್ರೊತ್ಸವ ಸಮಿತಿ, ಪಟ್ಟಣ ಪಂಚಾಯಿತಿ, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್, ಲಯನ್ಸ್ ಕ್ಲಬ್, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ, ಇಂಡಿಯನ್ ರೆಡ್ ಕ್ರಾಸ್, ಖಾಸಗಿ ಶಾಲಾ/ಸಂಸ್ಥೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ನೃತ್ಯ ಸಂಭ್ರಮದಲ್ಲಿ ಮಾತನಾಡಿ, ನೃತ್ಯ ಒಂದು ಶಿಕ್ಷಣ. ಮಕ್ಕಳು ಅಭ್ಯಾಸದ ಜತೆಗೆ ಸಂಗೀತಕ್ಕೂ ಆಸಕ್ತಿ ನೀಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳ್ಳುವರು. ಅಲ್ಲದೆ, ಇಂತಹ ಕಾರ್ಯಕ್ರಮಗಳ ಮೂಲಕ ದೇಶ ಭಕ್ತಿ ಹೆಚ್ಚಿಸುವ ಕೆಲವನ್ನು ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಮಿತಿ ಅಧ್ಯಕ್ಷ ಡಾ.ಚೌದ್ರಿ ನಾಗೇಶ್ ಮಾತನಾಡಿದರು. ಸ್ಪರ್ಧೆಯಲ್ಲಿ 10 ಶಾಲಾ ತಂಡಗಳು ಭಾಗವಹಿಸಿದ್ದು, ಸೀನಿಯರ್ ವಿಭಾಗದಲ್ಲಿ ತುರುವೇಕೆರೆ ಇಂಡಿಯನ್ ಪಬ್ಲಿಕ್ ಸ್ಕೂಲ್ ಪ್ರಥಮ, ಮಯೂರ ವಿದ್ಯಾ ಶಾಲೆ ದ್ವೀತಿಯ, ಮಾದಿಹಳ್ಳಿ ಬದರಿಕಾಶ್ರಮ ವಿದ್ಯಾಶಾಲೆ ತೃತೀಯ ಬಹುಮಾನ ಪಡೆದುಕೊಂಡಿತು.
ಜೂನಿಯರ್ ವಿಭಾಗದಲ್ಲಿ ತುರುವೇಕೆರೆ ಗ್ಲೋಬಲ್ ಆಂಗ್ಲ ಶಾಲೆ ಪ್ರಥಮ,ವಿಶ್ವ ವಿಜಯ ವಿದ್ಯಾಶಾಲೆ ದ್ವೀತಿಯ, ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆ ತೃತೀಯ ಬಹುಮಾನ ಪಡೆದುಕೊಂಡಿತು.
ವಿಶೇಷವಾಗಿ ಚಿ.ನಾ.ಹಳ್ಳಿ ಶ್ರೀ ಸಿದ್ದರಾಮೇಶ್ವರ ಶ್ರವಣದೋಷ ಮಕ್ಕಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ಸ್ಪರ್ಧೆ ವಿಜೇತಮಕ್ಕಳಿಗೆ ಪಾರಿತೋಷಕ, ನಗದು ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ನೈರುತ್ಯ ರೈಲ್ವೆ ಮಂಡಳಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಸಿ.ಸುನೀಲ್ ಬಾಬು, ಇಂಡಿಯನ್ ರೆಡ್ ಕ್ರಾಸ್ ಅಧ್ಯಕ್ಷ ಡಿ.ಕೆ.ನಾಗರಾಜಯ್ಯ, ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ತೀರ್ಪುಗಾರಾದ ಡಾ.ದೀಪಾ ಹಾಗೂ ವಂದನಾ ಇದ್ದರು.