ಗುರುಮಠಕಲ್ನ ಮೋಮಿನಪುರ ಮಜಿದ್ನಲ್ಲಿ ಕಾಂಗ್ರೆಸ್ನ ಜಿಲ್ಲಾ ಟಕದಿಂದ ಬುಧವಾರ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಜಿಲ್ಲಾ ಅಧ್ಯಕ್ಷ ಬಸರೆಡ್ಡಿ ಅನಪುರ, ಕೃಷ್ಣಾ ಚಪೆಟ್ಲಾ, ಎಸ್ಕೆ ಮೈನೋದ್ಧೀನ್, ಅಕ್ತರ್ ಪ್ಯಾರೆ ಸಯ್ಯದ್ ಬಾಬಾ ಇತರರಿದ್ದರು.
- ಮಾಜಿ ಸಚಿವ ಚಿಂಚನಸೂರ್ ಅಭಿಮತ
- ಯಾದಗಿರಿಯಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಆಯೋಜನೆ
ಗುರುಮಠಕಲ್: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸುವ ಇಫ್ತಾರ್ ಕೂಟದಿಂದ ಶಾಂತಿ ಮತ್ತು ಸಹೋದರತ್ವ ಭಾವನೆ ಹೆಚ್ಚುತ್ತದೆ ಎಂದು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಹೇಳಿದರು.
ಪಟ್ಟಣದ ಮೋಮಿನಪುರ ಮಸೀದ್ನಲ್ಲಿ ಕಾಂಗ್ರೆಸ್ ಜಿಲ್ಲಾ ಟಕದಿಂದ ಬುಧವಾರ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲೆಡೆ ಇಂಥಹ ಇಫ್ತಾರ್ ಕೂಟಗಳನ್ನು ಆಯೋಜಿಸಬೇಕು ಎಂದು ಅವರು ಹೇಳಿದರು.
ರಂಜಾನ್ ಮಾಸದಲ್ಲಿ ಸರ್ವಧರ್ಮ ತತ್ವದ ಸಾರ ಅರಿಯಲು ಇಂತಹ ಸೌಹಾರ್ದತೆಯ ಕೂಟಗಳು ಬಹಳ ಅಗತ್ಯವಾಗಿವೆ. ಹಿರಿಯರು ಹಿಂದಿನಿಂದಲೂ ಎಲ್ಲ ಸಮುದಾಯದವರು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದಿಂದ ಬದುಕಿದ್ದಾರೆ. ಅದೇ ಪರಂಪರೆ ನ್ನು ಮುಂದುವರೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು.
ನಂತರ ಇಫ್ತಾರ್ ಕೂಟದಲ್ಲಿ ಎಸ್.ಕೆ ಮೈನೋದ್ದೀನ್ ಮಾತನಾಡಿ, ರಂಜಾನ್ ತಿಂಗಳು ಮಹತ್ವವಾದದ್ದು, ಉಪವಾಸದ ಮಹಿಮೆ ಹಾಗೂ ಮಾನವೀಯತೆ ಮತ್ತು ಸಹಾನುಭೂತಿಯ ಮಾನವರಲ್ಲಿ ಅಗತ್ಯ ಎಂದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪುರ, ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ನಿರಂಜನರೆಡ್ಡಿ, ಅಸೆಂಬ್ಲಿ ಅಧ್ಯಕ್ಷ ಸಯ್ಯದ್ ಬಾಬಾ, ಬಾಬು ತಲಾರಿ, ನರಸಿಂಹರೆಡ್ಡಿ, ಸದರ್ ಪಾಶಾಪ್ಯಾರೆ, ಹೈಮದ್ ಪಾಟೀಲ್, ಅಕ್ತರ ಪ್ಯಾರೆ, ವಹೀದ್ ಚಿಂತಕುಂಟಿ, ಫಯಾಜ್, ಚಾಂದಪಾಶಾ, ಅಧೀಲ್, ಅನ್ವರ್ ಹೈಮದ್, ಮುಭಾರಕ್ ಇತರರಿದ್ದರು.