If you want urea, you also have to buy sulfur!
ಚಿಂತಾಮಣಿ: ನಗರದ ಚೇಳೂರು ರಸ್ತೆಯಲ್ಲಿರುವ ರಸಗೊಬ್ಬರ ಮಾರಾಟ ಅಂಗಡಿಯೊಂದರ ಮಾಲೀಕರ್ಲು ಯೂರಿಯಾ ಗೊಬ್ಬರ ಬೇಕೆಂದು ಕೇಳಿದರೆ ಇತರ ಸಲ್ಫರ್ ಗೊಬ್ಬರ ಕೊಳ್ಳುವುದಾದರೆ ಮಾತ್ರ ನೀಡುವ ಷರತ್ತು ಹಾಕುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದಿರಪ್ಪನಾಯಕನ ಕೋಟೆ ಗ್ರಾಮದ ಬಿ.ಸುಧಾಕರ್ ರೆಡ್ಡಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
ಯೂರಿಯಾ ಗೊಬ್ಬರವನ್ನು ತೆಗೆದುಕೊಳ್ಳುವ ಪ್ರತಿಯೊಬ್ಬ ರೈತರಿಗೆ ಸಲ್ಫರ್ ಮಾರುವ ದಂಧೆ ರಸಗೊಬ್ಬರದ ಅಂಗಡಿಯಲ್ಲಿ ನಡೆಯುತ್ತಿದ್ದರೂ, ಇಲ್ಲಿನ ಅಧಿಕಾರಿಗಳು ಏನೂ ತಿಳಿದಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಇದರಿಂದ ರೈತರಿಗೆ ಅಪಾರ ನಷ್ಟ ಉಂಟಾಗುತ್ತಿದೆ. ಹಾಗಾಗಿ ತಕ್ಷಣವೇ ತನಿಖೆ ಮಾಡಿ ಅಂಗಡಿಯ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.