ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಅಭಿಪ್ರೇರಣಾ ಕಾರ್ಯಾಗಾರಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡಿದರು. ರಾಜಗುರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಲೀಲಾವತಿ ಹಿರೇಮಠ, ಮಹಾದೇವಿ ಕೂರುವಕ್ಕಲಿಗ ಇತರರಿದ್ದರು. 
ರಾಜ್ಯ

ಶ್ರದ್ಧೆಯಿಂದ ಕಲಿತರೆ ಯಶಸ್ಸು

ಶ್ರದ್ಧೆಯಿಂದ ಕಲಿತರೆ ಯಶಸ್ಸು ಸಾಧ್ಯವಿದ್ದು, ವಿದ್ಯಾರ್ಥಿಗಳು ಶಿಕರು ನೀಡುವ ಸಲಹೆ ಸದುಪಯೋಗ ಪಡೆದು ಮುಂಬರುವ ಪರೀೆಯಲ್ಲಿ ಉತ್ತಮ ಅಂಕ ಗಳಿಸಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಸಲಹೆ ನೀಡಿದರು.
ಪಟ್ಟಣದ ರಾಣಿ ಚನ್ನಮ್ಮ ಸಭಾಭವನದಲ್ಲಿ ೇತ್ರ ಶಿಣಾಧಿಕಾರಿ ಕಾರ್ಯಾಲಯದಿಂದ ಶನಿವಾರ ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಭಿಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿದರು. ಈಗಾಗಲೇ ನಮ್ಮ ತಾಲೂಕು ಎಸ್​ಎಸ್​ಎಲ್​ಸಿ ಪರೀೆ ಲಿತಾಂಶದಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿರುವುದಕ್ಕೆ ಹೆಮ್ಮೆಯಿದ್ದು, ತಾಲೂಕಿನ ಶಿಕರ ಶ್ರಮ ಮೆಚ್ಚುವಂತಹದ್ದು. ಈ ಬಾರಿ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದಲ್ಲೂ ಚನ್ನಮ್ಮನ ಕಿತ್ತೂರು ತಾಲೂಕು ಹೆಚ್ಚಿನ ಸಾಧನೆ ಮಾಡಲಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ಮಾಡಬೇಕು. ಶಿಕರ ಮಾರ್ಗದರ್ಶನದಲ್ಲಿ ಹೆಚ್ಚಿನ ಜ್ಞಾನ ಪಡೆದು ತಾಲೂಕಿನ ಕೀರ್ತಿ ತರಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿ ರಾಜಗುರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಗುರಿ ದಢವಾಗಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಪಾಲಕರ ಶ್ರಮವರಿತು ವಿದ್ಯಾರ್ಥಿಗಳು ಅವರ ಕನಸು ನನಸು ಮಾಡಲು ಉತ್ತಮವಾಗಿ ವ್ಯಾಸಂಗ ಮಾಡಬೇಕು. ಎಸ್​ಎಸ್​ಎಲ್​ಸಿ ಪರೀೆ ಯಾವುದೇ ಭಯವಿಲ್ಲದೆ ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಹಾರೈಸಿದರು. ಮೆಸೂರಿನ ವ್ಯಕ್ತಿತ್ವ ಕಲಿಕಾ ಪ್ರೇರಣಾ ಗುರು ಆರ್​.ಎ.ಚೇತನರಾಮ ವಿದ್ಯಾರ್ಥಿಗಳಿಗೆ ಪರೀೆ ಎದುರಿಸುವ ಬಗ್ಗೆ ಮಾರ್ಗದರ್ಶನ ನೀಡಿದರು. ೇತ್ರ ಶಿಣಾಧಿಕಾರಿ ಸಿ.ವೆ.ತುಬಾಕಿ ಪ್ರಾಸ್ತಾವಿಕ ಮಾತನಾಡಿದರು. ಬೆಳಗಾವಿ ಶಾಲಾ ಶಿಣ ಉಪನಿರ್ದೇಶಕಿ ಲೀಲಾವತಿ ಹಿರೇಮಠ, ಬೆಲಹೊಂಗಲದ ಅರ ದಾಸೋಹದ ಸಹಾಯಕ ನಿರ್ದೇಶಕಿ ಮಹಾದೇವಿ ಕೂರುವಕ್ಕಲಿಗ, ಸ್ಥಳಿಯ ಸಿಪಿಐ ಶಿವಾನಂದ ಗುಡಗನಟ್ಟಿ, ಶಿಕ ಎಂ.ಪಿ.ಕದಂ, ಜ್ಯೋತಿ ಕೋಟಿಗಿ ಇತರರಿದ್ದರು.