ಗ್ರಾಮದ ತಂಟೆಗೆ ಬಂದರೆ ತಕ್ಕ ಶಾಸ್ತಿ village
ಶ್ರೀನಿವಾಸಪುರ: ಅರಣ್ಯ ಇಲಾಖೆಯವರು ಜೆಸಿಬಿಗಳು, ಹಿಟಾಚಿಗಳೊಂದಿಗೆ ಅರಣ್ಯ ಅಭಿವೃದ್ಧಿಗೆ ಬಳಸಿಕೊಂಡರೆ ನಮ್ಮ ಅಭ್ಯಂತರವಿಲ್ಲ. ಕಟ್ಟಿರುವ ಮನೆಗಳು ಗ್ರಾಮದ ತಂಟೆಗೆ ಬಂದರೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಮಾಜಿ ಸ್ವೀಕರ್ ಕೆ.ಆರ್.ರಮೇಶ್ ಕುಮಾರ್ ಎಚ್ಚರಿಸಿದರು. village
ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಶಿವಪುರ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿ ಮಾತನಾಡಿದ ಅವರು, ಅಧಕಾರವಧಿಯಲ್ಲಿ ಕ್ಷೇತ್ರಕ್ಕೆ 25 ಸಾವಿರ ಮನೆಗಳು ಮಂಜೂರು ಮಾಡಿಸಿದ್ದೇನೆ. ಅಧಿಕಾರ ಶಾಶ್ವತವಲ್ಲ, ಚುನಾವಣೆ ಬರುತ್ತದೆ ಹೋಗುತ್ತದೆ. ನಮಗೆ ಸಿಕ್ಕಿರುವ ಅವಕಾಶದಲ್ಲಿ ಮಾಡಿರುವ ಕೆಲಸಗಳು ನಮ್ಮನ್ನು ಗುರುತಿಸುತ್ತವೆ. ನಿಮ್ಮ ಗ್ರಾಮಕ್ಕೆ ನೂರಾರು ಮನೆಗಳು ಮಂಜೂರಾಗಿವೆ. ಸುಮಾರು 2 ಕೋಟಿ ರೂ. ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಿಸಿ ಆರ್ಥಿಕ ಶಕ್ತಿ ನೀಡಿದ್ದೇನೆ ಎಂದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೇತಗಾನಹಳ್ಳಿ ನಾಗರಾಜ್, ತಾಪಂ ಮಾಜಿ ಅಧ್ಯಕ್ಷ ಬಿ.ಗುರ್ರಪ್ಪ, ಪುರಸಭೆ ನಾಮಿನಿ ಸದಸ್ಯ ನರಸಿಂಹಮೂರ್ತಿ, ಗ್ರಾಪಂ ಸದಸ್ಯ ಗುರ್ರಪ್ಪ, ಮುಖಂಡರಾದ ವೆಂಕಟೇಶ್, ವೆಂಕಟರೆಡ್ಡಿ, ನಾರಾಯಣಸ್ವಾಮಿ, ಸತೀಶ್, ಶಂಕರ್, ಜಗದೀಶ್ಕುಮಾರ್, ಗೋಪಾಲ್, ವಿ.ಶ್ರೀನಿವಾಸ್, ಮುರಳಿ ಇದ್ದರು.