ಧೂಪದದಾಳ ಗ್ರಾಮದ ನವಲಮಾಳ ಗುಡ್ಡದ ದರ್ಗಾದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಯಲ್ಲಪ್ಪಜ್ಜನವರನ್ನು ಪೂಜ್ಯರು ಸನ್ಮಾನಿಸಿದರು. ಮಲ್ಲಿಕಾರ್ಜುನ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಸಿದ್ದಯೋಗಿ ಅಮರೇಶ್ವರ ಮಹಾರಾಜರು ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಮಮದಾಪುರ
ಭಾರತ ವಿಶ್ವದಲ್ಲೇ ಶ್ರೇಷ್ಠ ದೇಶ. ಆರ್ಥಿಕತೆಯಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನ ಹೊಂದಿದರೂ ಸಂಸತಿಯಲ್ಲಿ ಮೊದಲ ಸ್ಥಾನ ಹೊಂದಿದೆ ಎಂದು ಟಪ್ರಭಾದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಧೂಪದಾಳ ನವಿಲಮಾಳ ಗುಡ್ಡದ ಫಕೀರಸ್ವಾಮಿ ದರ್ಗಾದಲ್ಲಿ ಹೆಬ್ಬಳ್ಳಿಯ ದೊಡ್ಡ ಗುರು ಲಾಲಸಾಬವಲಿ ಫಕೀರಸ್ವಾಮಿ ಬೆಳ್ಳಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ಹೊಂದಿದ, ಎಲ್ಲ ವರ್ಗದವರು ಸಹಬಾಳ್ವೆಯಿಂದ ಬದುಕುವ ದೇಶ ನಮ್ಮದಾಗಿದೆ. ಧರ್ಮ ಯಾವುದೇ ಇರಲಿ ದಯೆ, ಸಂಸ್ಕಾರ, ನೀತಿ, ಪ್ರೀತಿ ನೀರು, ಗಾಳಿ ಹಾಗೂ ಭೂಮಿ ಒಂದೇ ಇದನ್ನು ನಾವು ಅರ್ಥೆಸಿಕೊಂಡು ಸಾಮರಸ್ಯದಿಂದ ಬಾಳಿದರೆ ಮಾನವನ ಜೀವನ ಸಾರ್ಥಕಗೊಳ್ಳುತ್ತದೆ ಎಂದು ಹೇಳಿದರು.
ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ದರ್ಗಾದ ಯಲ್ಲಪ್ಪಜ್ಜನವರ ಕೊಡುಗೆ ಅಪಾರವಾಗಿದೆ. ಇಷ್ಟೊಂದು ಭಕ್ತರು ಈ ಪುಣ್ಯಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಯಲ್ಲಪ್ಪಜ್ಜನವರ ಮೇಲೆ ನೀವು ಇಟ್ಟಿರುವ ನಂಬಿಕೆ ಅಪಾರವಾಗಿದೆ ಎಂದರು.
ಬುಧವಾರ ಗ್ರಾಮದ ಲಕ್ಷಿ$್ಮದೇವಿ ಮಂದಿರದಿಂದ ದರ್ಗಾದವರಿಗೆ 500ಕ್ಕೂ ಅಧಿಕ ಮಹಿಳೆಯರು ಕುಂಭ ಕಲಶ ಹಾಗೂ ಆರತಿಯೊಂದಿಗೆ ಸಾಗಿ ಹೆಬ್ಬಳ್ಳಿ ಅಜ್ಜನವರ ಬೆಳ್ಳಿ ಮೂರ್ತಿ ಮೆರವಣಿಗೆ ಹಾಗೂ ಪೂಜ್ಯರ ರಥ ಮೆರವಣಿಗೆ ಮೂಲಕ ಬರಮಾಡಿಕೊಂಡರು.
ಬೆಳಗ್ಗೆ ಧರ್ಮಸಭೆ ನೆರವೇರಿತು. ನವಗ್ರಹ ಪೂಜೆ, ಹೋಮ ಹವನ ನೆರವೇರಿತು. ಪೂಜ್ಯರ ಸಮ್ಮುಖದಲ್ಲಿ ದೊಡ್ಡಗುರು ಲಾಲಸಾಬವಲಿ ಕೀರಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಕವಲಗುಡ್ಡದ ಸಿದ್ದಯೋಗಿ ಅಮರೇಶ್ವರ ಮಹಾರಾಜರು, ಮರಡಿಮಠ ಪವಾಡೇಶ್ವರ ಸ್ವಾಮೀಜಿ, ಗದಗದ ಬಸವ ಸಮರ್ಥ ಸ್ವಾಮೀಜಿ, ಗೋಕಾಕದ ಸುವರ್ಣಾತಾಯಿ ಹೊಸಮಠ, ಬನ್ನೂರ ಸದ್ದಾಂ ಅಜ್ಜ, ಚುಂಚನೂರ ವಿಠ್ಠಲ ಅಜ್ಜ, ದರ್ಗಾದ ಅರ್ಚಕ ಶಿವರಾಯ ಮಲ್ಲಾಪುರ ಇತರರು ಇದ್ದರು.