ಯುವಜನರು ಆರೋಗ್ಯವಾಗಿದ್ದರೆ ದೇಶ ಪ್ರಗತಿ youth
ರಾಯಲ್ಪಾಡು: ದೇಶಕ್ಕೆ ಯುವ ಪೀಳಿಗೆಯೇ ಆಸ್ತಿ. ಯುವಕರು ಆರೋಗ್ಯವಾಗಿದ್ದರೆ ದೇಶಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ಸಲಹೆ ನೀಡಿದರು. youth
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ರಾಯಲ್ಪಾಡು ಸಮೀಪದ ಎ.ವ್ಯಾಪಲಪಲ್ಲಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಾತನಾಡಿದರು.
ನನ್ನ ಕೊನೆಗಳಿಗೆಯವರೆಗೂ ಸದಾ ನಿಮ್ಮೊಂದಿಗೆ ಇರುತ್ತೇನೆ.ಹಣ ಇನ್ನೂ ಬೇಕು ಎನ್ನುವವರು ಬಡವರು, ದರಿದ್ರರು. ಹಣ ಸಾಕು ಎನ್ನುವವರು ಶ್ರೀಮಂತರು. ನಾನು ಸದಾ ನಿಮ್ಮಪರವೇ. ನೀವೇ ನನಗೆ ಆಸ್ತಿ. ನಾನು ಕೋಟ್ಯಾಧಿಪತಿ ಅಲ್ಲ, ನಾನು ಹಣ ಬೇಕು ಎಂದು ಯಾವತ್ತೂ ಆಲೋಚನೆ ಮಾಡಿಲ್ಲ. ಗ್ರಾಮಸ್ಥರೆಲ್ಲರೂ ನನ್ನ ಒಡಹುಟ್ಟಿದವರು. ಚಿಕ್ಕವರೆಲ್ಲರೂ ಸಹ ನನ್ನ ಮಕ್ಕಳು, ಮರಿಮಕ್ಕಳು. ಅವರೇ ನನ್ನ ಆಸ್ತಿ. ನೀವು ನನ್ನೊಂದಿಗೆ ಇರಿ ಎಂದರು.
ಆ ಭಗವಂತ ನನಗೆ ಆಯುಷ್ಯ, ಆರೋಗ್ಯ ಕೋಡಬೇಕು ಅಷ್ಟೆ. ಇಡೀ ಲೋಕವನ್ನೇ ನನ್ನ ಅಧೀನದಲ್ಲಿ ಇಟ್ಟುಕೊಳ್ಳತ್ತೇನೆ ಎಂದು ಆಕ್ರೋಶಭರಿತವಾಗಿ ಮಾತನಾಡಿದ ಅವರು, ಯಾವಾಗಲೂ ಕತ್ತಲು ಕತ್ತಲಾಗಿಯೇ ಉಳಿಯುವುದಿಲ್ಲ, ಹಗಲು ಆಗುತ್ತದೆ. ಗ್ರಾಮಕ್ಕೆ ರಸ್ತೆಯೊಂದೇ ನನಗೆ ಕಾಣಿಸುತ್ತದೆ, ಬೇರೆ ಏನು ಕಾಣಿಸುವುದಿಲ್ಲ. ಯಾವ ಗುತ್ತಿಗೆದಾರನಿಗೆ ಕೊಡಬೇಕು, ಅವನಿಂದ ನಾನು ಎಷ್ಟು ಕಮೀಷನ್ ತೆಗೆದುಕೊಳ್ಳಬಹುದು ಎಂಬ ಆಲೋಚನೆ ನನಗೆ ಬರುವುದಿಲ್ಲ್ಲ. ಅದನ್ನು ನಾನು ಕನಸು ಮನಸ್ಸಿನಲ್ಲಿ ಅಂದುಕೊಳ್ಳುವುದಿಲ್ಲ ಎಂದರು.