ಭರಣಿ ಬಿದ್ದರೆ ಧರಣಿಯಲ್ಲ ಬೆಳೆ crop 
ರಾಜ್ಯ

ಭರಣಿ ಬಿದ್ದರೆ ಧರಣಿಯಲ್ಲ ಬೆಳೆ crop

ಮುಳಬಾಗಿಲು: ಭರಣಿ ಮಳೆ ಬಿದ್ದರೆ ಧರಣಿ ಎಲ್ಲ ಬೆಳೆ ಬೆಳೆ ಎಂಬ ನಾಣ್ಣುಡಿಯಂತೆ ಭಾನುವಾರ ರಾತ್ರಿ ಮತ್ತು ಸೋಮವಾರ ಸಂಜೆ ಮಳೆಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸುತ್ತಿದೆ. ಭಾನುವಾರ ಮಧ್ಯರಾತ್ರಿ ಮುಳಬಾಗಿಲಿನಲ್ಲಿ ಬಿರುಗಾಳಿ ಸಹಿತ 15.2 ಮೀ.ಮೀ. ಮಳೆ ಬಿದ್ದಿದ್ದು, ತಂಪು ವಾತಾವರಣ ನಿಮಾರ್ಣವಾಗಿದೆ. ಜತಗೆ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ವಿದ್ಯುತ್​ ಇಲ್ಲದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿಮಾರ್ಣವಾಗಿತ್ತು.crop
ಏ.27ರಿಂದ ಮೇ 10ರವರೆಗೂ ಭರಣಿ ಮಳೆ ಕಾಲಾವಧಿ ಇದ್ದು, ಈ ಸಮಯದಲ್ಲಿ ಉತ್ತಮ ಮಳೆ ಆಗಮನಕ್ಕೆ ಜನರು ಕಾಯುತ್ತಿದ್ದಾರೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ, ಪಕ್ಷಿಗಳಿಗೆ, ಜೀವ ಜಂತುಗಳಿಗೆ ಕುಡಿಯುವ ನೀರ ಸಿಗುವುದರ ಜತೆಗೆ ಮೇವು, ಆಹಾರ ಪದಾರ್ಥಗಳು ಪ್ರಕೃತಿ ದತ್ತವಾಗಿ ಸಿಗುವುದರಿಂದ ಸಮೃದ್ಧ ವಾತಾವರಣ ನಿಮಾರ್ಣ ಆಗುತ್ತದೆ.