ಆನೇಕಲ್​&-ಚಂದಾಪುರ ರಸ್ತೆಯ ಡಾಂಬರೀಕರಣ ಸ್ಥಳಕ್ಕೆ ಶಾಸಕ ಬಿ.ಶಿವಣ್ಣ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. 
ರಾಜ್ಯ

ರಸ್ತೆ ಗುಣಮಟ್ಟವಿಲ್ಲದಿದ್ದರೆ ಮುಲಾಜಿಲ್ಲದೆ ಕ್ರಮ / ANEKAL

ಆನೇಕಲ್​ : ಸಾರ್ವಜನಿಕರ ಬೇಡಿಕೆಯಂತೆ ಆನೇಕಲ್​&-ಚಂದಾಪುರ ರಸ್ತೆಯ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದ್ದು, ರಾತ್ರಿ ವೇಳೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕ ಬಿ.ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಗುಣಮಟ್ಟದ ರಸ್ತೆ ಮಾಡಬೇಕು, ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಗುರುವಾರ ರಾತ್ರಿ 10ರ ಸುಮಾರಿಗೆ ರಸ್ತೆ ಡಾಂಬರೀಕರಣ ಸ್ಥಳಕ್ಕೆ ಶಾಸಕ ಬಿ.ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು, ಇಲ್ಲವಾದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಲವು ದಿನಗಳಿಂದ ತಾಂತ್ರಿಕ ಕಾರಣಗಳಿಂದ ಡಾಂಬರೀಕರಣ ತಡವಾಗಿತ್ತು. ಇದೀಗ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ರಸ್ತೆ ಪದರದಲ್ಲಿ ಗುಣಮಟ್ಟದ ಕೊರತೆಯಿರುವುದು ಕಂಡು ಬಂದಿದ್ದು, ಗುತ್ತಿಗೆದಾರರು ಈ ಬಗ್ಗೆ ಕ್ರಮ ವಹಿಸಬೇಕು ಎಂದರು.
ರಾತ್ರಿ ಸಮಯದಲ್ಲಿ ಕಾಮಗಾರಿ ಮಾಡಬಾರದು. ಆನೇಕಲ್​&-ಚಂದಾಪುರ ರಸ್ತೆಯು ದ್ವಿಪಥ ಆಗಿರುವುದರಿಂದ ಮತ್ತೊಂದು ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುತ್ತಾರೆ. ಬೆಳಗ್ಗೆ ಸಮಯದಲ್ಲಿ ಡಾಂಬರೀಕರಣ ಮಾಡುವುದಿಂದ ಸಾರ್ವಜನಿಕರಿಗೆ ರಸ್ತೆಯ ಗುಣಮಟ್ಟದ ಬಗ್ಗೆ ಮಾಹಿತಿ ದೊರೆಯುತ್ತದೆ. ಚಂದಾಪುರ&ಆನೇಕಲ್​ನ ರಸ್ತೆಯನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಗುತ್ತಿಗೆದಾರರು ರ್ನಿಲಕ್ಷ$್ಯ ಮಾಡದೇ ಕಾಮಗಾರಿ ನಡೆಸಬೇಕು. ಕಾಮಗಾರಿ ಮುಗಿಯುವವರೆಗೂ ಲೋಕೋಪಯೋಗಿ ಇಲಾಖೆ ಎಇಇ, ಜೆಇಇ ಸ್ಥಳದಲ್ಲಿಯೇ ಇದ್ದು ಗುಣಮಟ್ಟ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಆನೇಕಲ್​-ಚಂದಾಪುರ ಮುಖ್ಯ ರಸ್ತೆಯು ಯುಜಿಡಿ ಕಾಮಗಾರಿಯಿಂದ ತಡವಾಯಿತು. ಶೇ.70 ಕಾಮಗಾರಿ ಮುಗಿದಿದ್ದು, ಉಳಿದ ದ್ವಿಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡಲಾಗುವುದು ಎಂದು ಹೇಳಿದರು.