ಗೋಕಾಕ ಜಿಎಸ್​ಎಸ್​ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುಸ್ಮತಿ ಕಾರ್ಯಕ್ರಮದಲ್ಲಿ ಶಿಕರನ್ನು ಸನ್ಮಾನಿಸಲಾಯಿತು. ಜಿ.ಬಿ.ಬಳಗಾರ, ಎ.ಎ.ಸನದಿ, ಎಸ್​.ಸಿ.ಕರಿಕಟ್ಟಿ ಇತರರು ಇದ್ದರು. 
ರಾಜ್ಯ

ಶಿಷ್ಯರು ಸಾಧಕರಾದರೆ ಗುರುಗಳಿಗೆ ಸಂತಸ

ಗೋಕಾಕ: ಗುರು, ಶಿಷ್ಯ ಪರಂಪರೆ ಜಗತ್ತಿಗೆ ನೀಡಿದ ಕೀರ್ತಿ ನಮ್ಮ ದೇಶದ್ದಾಗಿದೆ ಎಂದು ೇತ್ರ ಶಿಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ನಗರದ ಜಿಎಸ್​ಎಸ್​ ಶಾಲೆಯ 2002&03ನೇ ಸಾಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುಸ್ಮತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಷ್ಯರ ಉಜ್ವಲ ಭವಿಷ್ಯವೇ ಗುರುಗಳ ಗುರಿ ಹಾಗೂ ಆಶಯವಾಗಿದೆ. ಶಿಷ್ಯರು ಸಾಧಕರಾದರೆ ಗುರುಗಳು ಸಂತೋಷ ಪಡುತ್ತಾರೆ. ಗುರುಗಳನ್ನು ನೆನೆದು ಅವರನ್ನು ಗೌರವಿಸುವಂತಹ ಕಾರ್ಯ ಮಾದರಿಯಾಗಿದೆ ಎಂದರು.
ಶಿಕರಾದ ಎ.ಎ.ಸನದಿ, ಎಸ್​.ಸಿ.ಕರಿಕಟ್ಟಿ, ಎಂ.ಪಿ.ಗಾಣಗಿ, ಅಶೋಕ ಬೆಣ್ಣಿ, ಸಿ.ಎಸ್​.ಮೇಗಲಮನಿ, ಎ.ಎಂ.ಮೋಡಿ, ಎಚ್​.ಡಿ. ಬೇಗ, ಎಂ.ಎ.ಬಾಗೇವಾಡಿ, ಎಂ.ಎಸ್​.ವಕ್ಕುಂದ, ಬಿ.ಎಸ್​.ಸೊಲಬನ್ನವರ, ಎಸ್​.ವಿ.ಕರಿಕಟ್ಟಿ, ಎಂ.ಎಂ.ಹಾದಿಮನಿ, ಎಸ್​.ಎಸ್​. ಮುನವಳ್ಳಿ, ಆರ್​.ಕೆ.ಹಂದಿಗುಂದ, ಎಸ್​.ಎಂ.ಕಲಗುಡಿ, ಡಿ.ಸಿ.ಜುಗಳಿ, ಎಂ.ಆರ್​.ಹರಿದಾಸ, ಬಿ.ಡಿ.ಸೊಗಲಿ, ರಾಯಪ್ಪ ಖಾನಪ್ಪನವರ, ಆರ್​.ಎಲ್​.ಬಬಲಿ, ಎಚ್​.ಎಂ.ಕಾಲೆಬಾಯಿ ಇತರರಿದ್ದರು.