Shivaraj Tangadagi | ರೆಡ್ಡಿಗೆ ಧೈರ್ಯವಿದ್ದರೆ ರಿಸೈನ್ ಮಾಡಿ ಕಣಕ್ಕಿಳಿಯಲಿ: ಸಚಿವ ಶಿವರಾಜ್ ತಂಗಡಗಿ ಪಂಥಾಹ್ವಾನ! 
ರಾಜ್ಯ

ನಾಗೇಂದ್ರ ರಾಜೀನಾಮೆ ಅನಿವಾರ್ಯವಿರಲಿಲ್ಲ; ರೆಡ್ಡಿಗೆ ಧೈರ್ಯವಿದ್ದರೆ ರಿಸೈನ್ ಮಾಡಿ ಕಣಕ್ಕಿಳಿಯಲಿ: ಸಚಿವ ಶಿವರಾಜ್ ತಂಗಡಗಿ ಪಂಥಾಹ್ವಾನ! | Shivaraj Tangadagi

ಬಿ. ನಾಗೇಂದ್ರ ರಾಜೀನಾಮೆ ಅನಿವಾರ್ಯವಾಗಿರಲಿಲ್ಲ. ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಅವರೇ ಸ್ವತಃ ಮುತುವರ್ಜಿ ವಹಿಸಿ ಪದತ್ಯಾಗ ಮಾಡಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ನಾಗೇಂದ್ರ ವಿಷಯದಲ್ಲಿ ಬಿಜೆಪಿ ನಾಯಕರು ಆಡುತ್ತಿರುವ ಮಾತುಗಳನ್ನು ಗಮನಿಸಿದರೆ ಅವರಿಗೆ ಆಂತರಿಕವಾಗಿ ಭಯ ಶುರುವಾದಂತಿದೆ. ನಾಗೇಂದ್ರ ಅವರು ಕಳೆದ ಚುನಾವಣೆಯಲ್ಲಿ ಪಕ್ಷದ ಪರವಾಗಿ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಹೀಗಾಗಿ ನಾವು ಅವರ ಬೆಂಬಲಕ್ಕೆ ಸದಾ ನಿಲ್ಲುತ್ತೇವೆ. ಬಿಜೆಪಿ ನಾಯಕರ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರಿಗೆ ದಲಿತರ ಏಳಿಗೆಯನ್ನು ಮತ್ತು ಎಐಸಿಸಿ ಅಧ್ಯಕ್ಷರ ಸ್ಥಾನದಲ್ಲಿ ದಲಿತ ನಾಯಕರೊಬ್ಬರು ಇರುವುದನ್ನೂ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಮುಂದೊಂದು ದಿನ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕುಳಿತ ಕುರ್ಚಿಯನ್ನು ಸಹ ಬಿಜೆಪಿಯವರು ಶುದ್ಧೀಕರಣ ಮಾಡುತ್ತಾರೆ. ಬಿಜೆಪಿಯಲ್ಲಿರುವ ನಾಯಕರ ಮೇಲೆ ಯಾವುದೇ ಪ್ರಕರಣಗಳಿಲ್ಲವೇ..? ಎಂದು ಪ್ರಶ್ನಿಸಿದ ಸಚಿವ ತಂಗಡಗಿ ಅವರು, ಕೇಸ್‌ಗಳಿಲ್ಲದವರಷ್ಟೇ ನಾಯಕರಾಗಬೇಕು ಎಂದಿದ್ದರೆ ಬಿಜೆಪಿಯಲ್ಲಿ ಯಾರೂ ಉನ್ನತ ಸ್ಥಾನದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಟೀಕಿಸಿದರು.
ಈಗ ಬಿಜೆಪಿ ಆಯೋಜಿಸುತ್ತಿರುವ ಪಾದಯಾತ್ರೆಯ ನೇತೃತ್ವವನ್ನು ಯಾರು ವಹಿಸುತ್ತಿದ್ದಾರೆ..? ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ತಾನೇ..? ಗಣಿ ಲೂಟಿಯ ಆರೋಪ ಎದುರಿಸುತ್ತಿರುವ ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದರೆ ಜನರಿಗೆ ಯಾವ ರೀತಿಯ ಸಂದೇಶ ತಲುಪುತ್ತದೆ...? ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಮೇಲೆಯೂ ಪ್ರಕರಣಗಳಿದ್ದು, ಮೊದಲು ಅವರಿಂದ ರಾಜೀನಾಮೆ ಕೊಡಿಸಲಿ ಎಂದು ತಂಗಡಗಿ ಆಗ್ರಹಿಸಿದರು.

ಸವಾಲ್ ಹಾಕಿದರು.

ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ!

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಹೊತ್ತು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದ ಸಚಿವ ಬಿ. ನಾಗೇಂದ್ರ ಅವರು ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ (B Nagendra Resign) ಘೋಷಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನಗೊಂಡಂತಾಗಿದೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ. ನಾಗೇಂದ್ರ ಅವರು, ತಮ್ಮ ವಿರುದ್ಧದ ಆರೋಪಗಳನ್ನು ತೀವ್ರವಾಗಿ ನಿರಾಕರಿಸಿದ್ದಲ್ಲದೆ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದ ನಾಗೇಂದ್ರ

ಸುದ್ದಿಗೋಷ್ಠಿಯ ವೇಳೆ ಭಾವುಕರಾಗಿ ಕಣ್ಣೀರಿಟ್ಟ ನಾಗೇಂದ್ರ, ನನ್ನಿಂದ ಪಕ್ಷಕ್ಕೆ ಹಾಗೂ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಜುಗರ ಆಗಬಾರದು, ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಸ್ವಇಚ್ಛೆಯಿಂದ ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನದ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಖರ್ಗೆ ಅವರಂತಹ ಹಿರಿಯರನ್ನೇ ಬಿಡದವರು, ನಮ್ಮಂತಹ ಶೋಷಿತರು ಮತ್ತು ಅಲ್ಪಸಂಖ್ಯಾತರನ್ನು ಬಿಡುತ್ತಾರೆಯೇ..? ಆದರೆ ನಾನು ಪುರಾಣ ಕಾಲದ ಶಂಬೂಕನಲ್ಲ, ಶಂಬೂಕನಾಗಲು ತಯಾರೂ ಇಲ್ಲ. ಸಿಎಂ, ಸಿಎಲ್‌ಪಿ ನಾಯಕರು ಹಾಗೂ ದೆಹಲಿ ವರಿಷ್ಠರು ನಾಗೇಂದ್ರ ತಪ್ಪು ಮಾಡಿಲ್ಲ ಎಂದು ನನ್ನ ಬೆನ್ನಿಗೆ ನಿಂತಿದ್ದಾರೆ. ಕೋಮುವಾದಿ ಪಕ್ಷಗಳ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ಸವಾಲು ಹಾಕುತ್ತಿದ್ದೇನೆ, ಬೇಕಿದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ, ಬನ್ನಿ ಜನತಾ ನ್ಯಾಯಾಲಯಕ್ಕೆ ಹೋಗೋಣ ಎಂದು ವಿಪಕ್ಷಗಳ ನಾಯಕರಿಗೆ ಸವಾಲು ಹಾಕಿದರು.