ನೆಲಮಂಗಲ ತಾಲೂಕಿನ ನಗರೂರಿನ ಬಿಜಿಎಸ್ ಎಂಸಿಎಚ್ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಾದವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಖ್ಯಾತ ವಾಗ್ಮಿ ಪ್ರೊ.ಎಂ ಕೃಷ್ಣೆಗೌಡ, ಡಾ. ಜೆ. ಶ್ರೀನಿವಾಸಮೂರ್ತಿ, ಡಾ.ಸಿ. ನಾಗಣ್ಣ, ಡಾ.ಜ.ನಾ ತೇಜಶ್ರೀಇತರರು ಇದ್ದರು.
ನೆಲಮಂಗಲ : ಪ್ರತಿಯೊಬ್ಬರಲ್ಲಿ ಅಜ್ಞಾನ ದೂರವಾಗಿ ಜ್ಞಾನದ ಅರಿವು ಮೂಡಬೇಕಾದರೆ ವಾದಗಳು ಸಂಪೂರ್ಣವಾಗಿ ಕಡಿಮೆಯಾಗಿ ಸಂವಾದಗಳು ಹೆಚ್ಚಾಗಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ನಗರೂರಿನ ಬಿಜಿಎಸ್ ಎಂಸಿಎಚ್ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಆದಿಚುಂಚನಗಿರಿ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯ ಮತ್ತು ವರ್ತಮಾನ ಸಾಹಿತ್ಯ ಸಂವಾದ ಸಮಾರಂಭದಲ್ಲಿ ಮಾತನಾಡಿದರು. ಸಮಾಜದ ಸಾಮಾಜಿಕ, ಧಾರ್ಮಿಕ, ಸಾಹಿತ್ಯ,ರಾಜಕೀಯ ೇತ್ರಗಳಲ್ಲಿ ವಾದಗಳು ಅತಿಯಾಗಿ ಸಂಕಷ್ಟಗಳು ಹೆಚ್ಚಾಗುತ್ತಿವೆ. ಆದ್ದರಿಂದ ಸಂವಾದಗಳು ಹೆಚ್ಚಾದರೆ ಸಮಾಜದಲ್ಲಿ ಸತ್ಯ, ಶಾಂತಿ ನೆಲೆಸುತ್ತದೆ. ಸಾಹಿತ್ಯ ಕ್ಷೇತ್ರ ಕಾಲಕಾಲಕ್ಕೆ ಬಹಳಷ್ಟು ಬದಲಾವಣೆ ಕಂಡಿದ್ದು, ಸ್ವರೂಪ ಬದಲಾವಣೆ ಮಾಡಿಕೊಂಡಿದೆ. ಕುವೆೆಂಪು ಅವರಲ್ಲಿನ ಗುರು ಭಕ್ತಿ ಎಲ್ಲರಲ್ಲಿಯೂ ಮೂಡಬೇಕಾಗಿದೆ. ಸಾಹಿತ್ಯ, ಸಾಹಿತಿಗಳು ಸಮಾಜಕ್ಕೆ ಸತ್ಯ ದರ್ಶನವನ್ನು ಮಾಡಬೇಕು, ನಮ್ಮ ದಾರಿಯಲ್ಲಿಯೇ ಮುಂದಿನ ಪೀಳಿಗೆ ನಡೆಯುತ್ತದೆ ಎಂದರು.
ಖ್ಯಾತ ವಾಗ್ಮಿ ಪ್ರೊ.ಎಂ. ಕೃಷ್ಣೆಗೌಡ ಮಾತನಾಡಿ, ಸಾಹಿತ್ಯ ಶ್ರೀಮಂತಿಕೆಯನ್ನು ನಾವು ಮರೆಯಬಾರದು, ಸ್ವಾರ್ಥಕ್ಕೆ ಎಂದಿಗೂ ಸಾಹಿತ್ಯ ಬಳಕೆಯಾಗಬಾರದು. ಸಾವಿರಾರು ವರ್ಷಗಳ ಹಿಂದೆ ಸಾಹಿತ್ಯವನ್ನು ಭಗವಂತನಿಗೆ ಅರ್ಪಣೆ ಮಾಡಲು, ಮುಕ್ತಿಗಾಗಿ ಬರೆಯುತ್ತಿದ್ದರು. ಆದರೆ, ಕಾಲಕಾಲಕ್ಕೆ ಬರವಣಿಗೆಯ ಸ್ವರೂಪವೇ ಬದಲಾವಣೆಯಾಯಿತು. ಕೆಲ ಸಾಹಿತಿಗಳು ವೇದಿಕೆ ಮೇಲೆ ಧೂಮಪಾನ, ಮದ್ಯಪಾನ ಮಾಡಿ ವಿಚಾರಗಳನ್ನು ಬದಲಾಯಿಸಿದ್ದನ್ನು ಕಂಡಿದ್ದೇವೆ. ಈಗಿನ ಬರ್ಥವಣಿಗೆಯಲ್ಲಿ, ಸಾಹಿತ್ಯದಲ್ಲಿ ನೈತಿಕತೆ ಇದೆಯಾ ಎಂಬ ಪ್ರಶ್ನೆ ನಾವೆಲ್ಲ ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ಕವಿಗೋಷ್ಠಿ : ಸಾಹಿತ್ಯದ ಸಂವಾದದಲ್ಲಿ ಬೆಂಗಳೂರು, ಗ್ರಾಮಾಂತರ ಹಾಗೂ ರಾಜ್ಯದ ವಿವಿಧ ಭಾಗದ ನೂರಾರು ಕವಿಗಳು, ಸಾಹಿತಿಗಳು ಭಾಗವಹಿಸಿದರೇ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಸಾಹಿತ್ಯದ ಮಹತ್ವದ ಬಗ್ಗೆ ತಿಳಿಸಿದುಕೊಂಡರು. ಸಾಹಿತ್ಯ ಸಂವಾದದಲ್ಲಿ ಡಾ. ಜೆ. ಶ್ರೀನಿವಾಸಮೂರ್ತಿ, ಡಾ.ಸಿ. ನಾಗಣ್ಣ, ಡಾ.ಜ.ನಾ ತೇಜಶ್ರೀ ವಿಚಾರಗೋಷ್ಠಿ ನಡೆಸಿಕೊಟ್ಟರೆ, 20ಕ್ಕೂ ಹೆಚ್ಚು ಪ್ರಮುಖ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನವದೆಹಲಿ ಕೇಂದ್ರ ಸಾಹಿತ್ಯಅಕಾಡೆಮಿ ಸಂಚಾಲಕ ಡಾ. ಬಸವರಾಜಕಲ್ಗುಡಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಡಾ.ಎಸ್ಎನ್ ಶ್ರೀಧರ್, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಡಾ.ಹಿ.ಚಿ ಬೋರಲಿಂಗಯ್ಯ, ಸಾಹಿತಿ ಡಾ.ರಾಮೇಗೌಡ, ಸುಬ್ಬುಹೊಲೆಯಾರ್, ಚಂದ್ರಶೇಖರತಾಳ್ಯ, ಕೆಂಪೇಗೌಡ ಅಧ್ಯಯನ ಸಂಶೋಧನ ಕೇಂದ್ರ ಸಂಯೋಜನಾಧಿಕಾರಿ ಎಂ.ಜಿ ಚಂದ್ರಶೇಖರಯ್ಯ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸುಬ್ಬರಾಯ, ನೆಲಮಂಗಲ ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದಿಪ್ಕುಮಾರ್, ಬಿಜಿಎಸ್ ಎಂಸಿಎಚ್ ಪ್ರಾಂಶುಪಾಲ ಡಾ.ಕೆ.ಎಸ್. ಗಂಗಾಧರ್, ಆಸ್ಪತ್ರೆ ಮುಖ್ಯಸ್ಥ ಡಾ.ವಿ.ಆರ್. ಕೃಷ್ಣಮೂರ್ತಿ, ಆಡಳಿತಾಧಿಕಾರಿ ಸುರೇಶ್ , ಪ್ರಾಧ್ಯಾಪಕರಾದ ಡಾ.ಶಿಲ್ಪಾ, ಡಾ.ಕೃತಿಕಾ ನಾಯ್ಕ ಇದ್ದರು.