ಕೃಷಿ ನಾಶವಾದರೆ ಮಾನವ ಕುಲ ವಿನಾಶದಂಚಿಗೆ agriculture 
ರಾಜ್ಯ

ಕೃಷಿ ನಾಶವಾದರೆ ಮಾನವ ಕುಲ ವಿನಾಶದಂಚಿಗೆ agriculture

ಪ್ರಮುಖ ಮುಖ್ಯಾಂಶಗಳು

  • ಸೋಮೇಶ್ವರ ಜಾತ್ರೆಯಲ್ಲಿ ಶಾಸಕ ಪುಟ್ಟಸ್ವಾಮಿ ಗೌಡ ಕಳವಳ
ಗೌರಿಬಿದನೂರು: ಕೃಷಿ ಕ್ಷೇತ್ರ ನಾಶವಾದರೆ ಮಾನವ ಕುಲವೇ ವಿನಾಶದಂಚಿಗೆ ತಲುಪುತ್ತದೆ ಎಂದು ಶಾಸಕ ಕೆ.ಎಚ್​.ಪುಟ್ಟಸ್ವಾಮಿ ಗೌಡ ಕಳವಳ ವ್ಯಕ್ತಪಡಿಸಿದರು. agriculture
ತಾಲೂಕಿನ ಅಲಕಾಪುರ ಗ್ರಾಮದ ಶ್ರೀ ಚನ್ನ ಸೋಮೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಆಯೋಜಿಸಿದ್ದ ಜಾನುವಾರುಗಳ ಜಾತ್ರೆಯಲ್ಲಿ ಉತ್ತಮ ರಾಸುಗಳಿಗ ಬಹುಮಾನ ವಿತರಿಸಿ ಮಾತನಾಡಿ, ನಾವು ಎಷ್ಟೇ ಆಧುನಿಕರಣಗೊಂಡರೂ ಕೃಷಿಯಿಲ್ಲದೆ ಬದುಕು ಇರುವುದಿಲ್ಲ.ಮಣ್ಣಿನಲ್ಲಿ ಭತ್ತ ಬೆಳೆಯುವ ತಾಂತ್ರಿಕತೆ ಗೊತ್ತಿರುವುದು ರೈತನಿಗೆ ಮಾತ್ರ. ಆದರೆ ಬದಲಾದ ಕಾಲಘಟ್ಟದಲ್ಲಿ ಕೃಷಿಕರು ಅನೇಕ ಸಂಕಷ್ಟ ಎದುರಿಸುತ್ತಿರುವುದರಿಂದ ಅನೇಕರು ಕೃಷಿಯಿಂದ ವಿಮುಖರಾಗಿ ನಗರದತ್ತ ವಲಸೆ ಹೋಗುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದರು.
ಕಲಿತವರು ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂಬ ವಾಸ್ತವ ಅರಿತುಕೊಳ್ಳಬೇಕು.ಯುವ ಪೀಳಿಗೆ ಕೃಷಿಯ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಲಾಭದಾಯಕ ಹಾದಿಯಲ್ಲಿ ಸಾಗಬೇಕು. ಆಧುನಿಕ ಯಂತ್ರೋಪಕರಣಗಳು ಬಂದ ಬಳಿಕ ಕೃಷಿಯಲ್ಲಿ ರಾಸುಗಳ ಬಳಕೆ ಕಡಿಮೆಯಾಗುತ್ತಿದೆ. ಆದಾಗ್ಯೂ ಹಿಂದುಳಿದ ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ರಾಸುಗಳನ್ನು ಸಾಕುತ್ತಿದ್ದಾರೆ. ಇದರಿಂದ ಗ್ರಾಮೀಣ ಸೊಗಡಿನ ಜಾತ್ರೆಯಂತ ಪರಂಪರೆಗಳು ಮುಂದುವರೆಯುತ್ತಿರುವುದು ಸಂತಸದ ವಿಷಯ ಎಂದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಪ್ರಭಾಕರ್​ ರೆಡ್ಡಿ ಮಾತನಾಡಿ, ಈ ಹಿಂದೆ ಪ್ರತಿ ರೈತನ ಮನೆಗಳಲ್ಲಿ ಹಸು, ಎತ್ತು ಸೇರಿ ಇತರ ಸಾಕು ಪ್ರಾಣಿಗಳಿರುತ್ತಿದ್ದವು. ರೈತರ ಪಾಲಿಗೆ ಅವು ಪ್ರಮುಖ ಸಂಪತ್ತಾಗಿದ್ದವು. ಆದರೆ ಇಂದು ಆ ಸ್ಥಾನವನ್ನು ಯಂತ್ರಗಳು ಅಲಂಕರಿಸಿವೆ ಎಂದರು.
ತಾಲೂಕು ಪಶು ವೈದ್ಯಾಧಿಕಾರಿ ಡಾ.ಮಾರುತಿ ಮಾತನಾಡಿ, ಜಾತ್ರೆಯಲ್ಲಿ ಪಾಲ್ಗೊಂಡ ರಾಸುಗಳ ವಯಸ್ಸು, ಹಲ್ಲು ಹಾಕಿರುವುದು ಸೇರಿ ಇತರ ಮಾನದಂಡಗಳ ಮೇಲೆ ಉತ್ತಮ ರಾಸುಗಳ ಆಯ್ಕೆ ಮಾಡಲಾಗಿದೆ ಎಂದರು.
ಜಾನುವಾರ ಜಾತ್ರೆಯ ಸ್ಪರ್ಧೆಯಲ್ಲಿ 53 ರಾಸುಗಳು ಭಾಗವಹಿಸಿತ್ತು. ಎಪಿಎಂಸಿಯಿಂದ 10,000, ಶಾಸಕರು ವೈಯಕ್ತಿಕ ನೀಡಿ 10,000 ಸಾವಿರ ಸೇರಿ ಒಟ್ಟು ಪ್ರಥಮ ಬುಹುಮಾನ ಪಡೆದ ಚಿಕ್ಕನಹಳ್ಳಿಯ ಶಿವಶಂಕರ್​ ಕುಂಟಗೆ 20,000 ಸಾವಿರ, ಪ್ರಶಸ್ತಿ ಪತ್ರ ನೀಡಲಾಯಿತು.ದ್ವೀತಿಯ ಕೆಂಕರೆ ಗ್ರಾಮ ನಾಗಣ್ಣಗೆ 14.000 ಸಾವಿರ, ತೃತಿಯ ಬೊಮ್ಮಸಂದ್ರ ಜಿ.ಶ್ರೀನಿವಾಸ ರೆಡ್ಡಿಗೆ 10,000 ಸಾವಿರ, ಭಾಗವಹಿಸಿದ್ದ ಎಲ್ಲ ರಾಸುಗಳ ರೈತರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ತಹಸೀಲ್ದಾರ್​ ಅರವಿಂದ್​, ಪಶು ವೈದ್ಯಾಧಿಕಾರಿಗಳಾದ ಡಾ.ಶಿವಪ್ರಸಾದ್​, ಡಾ.ವೆಂಕಟೇಶ್​, ಡಿಸಿಸಿ ಬ್ಯಾಂಕ್​ ನಿರ್ದೇಶಕ ವೆಂಕಟರಾಮರೆಡ್ಡಿ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಟಿ ಕೆ ವಿಜಯ ರಾಘವ, ಎಪಿಎಂಸಿ ಕಾರ್ಯದರ್ಶಿ ಮಂಜುನಾಥ್​, ಮುಖಂಡರಾದ ಅಬ್ದುಲ್ಲ, ಲೋಕೇಶ್​ ಗೌಡ, ಮಹೇಂದ್ರ, ರಾಮಕೃಷ್ಣ, ಎನ್​.ವಿ.ನಂಜುಂಡಪ್ಪ ಇದ್ದರು.