Identify and encourage students' talent.
ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಕೊಡಿಸಿ ಮಕ್ಕಳ ಭವಿಷ್ಯ ರೂಪಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸಂದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ಗಾಣಿಗರ ೇಮಾಭಿವೃದ್ಧಿ ಸಂದಿಂದ ನಗರದ ಟ್ಯಾಂಕ್ಬಂಡ್ ರಸ್ತೆಯಲ್ಲಿನ ಶಿಲ್ಪಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪಾಲಕರು ಕಷ್ಟಪಟ್ಟು ಮಕ್ಕಳನ್ನು ಓದಿಸಿ ದೊಡ್ಡಮಟ್ಟಕ್ಕೆ ಬೆಳೆಸಿದ ನಂತರ ವಿದೇಶಗಳಿಗೆ ತೆರಳಿ ತಂದೆ&ತಾಯಿಯನ್ನು ಮರೆಯುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಆತಂಕಕಾರಿ. ಎಷ್ಟೇ ಎತ್ತರಕ್ಕೆ ಬೆಳೆದರೂ ತಂದೆ&ತಾಯಿಯನ್ನು ಉಸಿರಿರುವವರೆಗೆ ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಪ್ರಥಮವಾಗಿ ಚಿಂತಾಮಣಿಯಲ್ಲಿ 16 ವರ್ಷಗಳ ಹಿಂದೆ ಅತಿ ಚಿಕ್ಕದಾಗಿ ಆರಂಭಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಂದ ಸ್ವಂತ ಹಣದಿಂದಲ್ಲದೆ, ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಸಂದಿಂದ ಬ್ಯಾಂಕಿನಲ್ಲಿ 6 ಲಕ್ಷ ರೂ. ಶಾಶ್ವತ ಠೇವಣಿಯಾಗಿ ಉಳಿಸಲಾಗಿದೆ ಎಂದು ಹೇಳಿದರು.
ಗಾಣಿಗ ಹೆಲ್ತ್ ಕೇರ್ ಸಪೋರ್ಟ್ (ವೈದ್ಯಕಿಯ ಮತ್ತು ಆರ್ಥಿಕ ನೆರವು) ಸಮಾಜದ ಬಡ ಕುಟುಂಬಗಳಿಗೆ ವೈದ್ಯಕಿಯ ತುರ್ತು ಪರಿಸ್ಥಿತಿ ಮತ್ತು ಆರ್ಥಿಕ ಮುಗ್ಗಟ್ಟು ಎದುರಾದಾಗ ಯಾವುದೇ ನಿರೀೆ ಇಲ್ಲದೆ ಸಹಾಯ ಮಾಡಲು 'ಗಾಣಿಗ ಹೆಲ್ತ್ ಕೇರ್ ಸಪೋರ್ಟ್' ಆರಂಭಿಸಲಾಗಿದೆ.
ನಗರದ ಬಾಲಾಜಿ ಬಸ್ ಮಾಲೀಕರಾದ ಜೆ.ವೆಂಕಟಾಚಲಯ್ಯ 101ನೇ ವಯಸ್ಸಿನ ಸಂಭ್ರಮದ ಅಂಗವಾಗಿ ದಂಪತಿ ಅವರನ್ನು ಸನ್ಮಾನಿಸಲಾಯಿತು.
ಗೋಪಿನಾಥ್ ಮಾತನಾಡಿ, ಗಾಣಿಗ ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಲಾಜಿ ಬಸ್ ಮೂಲಕ ಉಚಿತ ಬಸ್ ಪಾಸ್ಗಳನ್ನು ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಬಸ್ನಲ್ಲಿ ಪಾಸ್ ತೋರಿಸಿ ಶಾಲೆ&ಕಾಲೇಜುಗಳಿಗೆ ಉಚಿತತವಾಗಿ ಪ್ರಯಾಣಿಸಬಹುದು ಎಂದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ನಾಗೇಶ್, ಮಾಜಿ ನಗರಸಭೆ ಅಧ್ಯಕ್ಷ ವೆಂಕಟರವಣಸ್ವಾಮಿ, ರುನಾಥ್, ಎಲ್ಐಸಿ ನಾಗರಾಜ್ ಇದ್ದರು.