: ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಶ್ರೀ ಡಾ.ಚನ್ನವಿರ ಶಿವಾಚಾರ್ಯ ಉದ್ಘಾಟಿಸಿದರು. ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಅನೀಲಕುಮಾರ ರಗಟೆ, ಮಲ್ಲಿಕಾರ್ಜುನ ಕುರಕೋಟೆ, ಜಗನ್ನಾಥ ಖೂಬಾ, ಅಶೋಕ ನಾಗರಾಳೆ, ಬಸವರಾಜ ಬಾಲಕೀಲೆ, ಸುನೀಲ ರಾಯವಾಡೆ. ಬಸವರಾಜ ಕೋರಕೆ, ಈರಣ್ಣ ಹಲಶೆಟ್ಟೆ, ಭದ್ರಿನಾಥ ಪಾಟೀಲ, ವಿವೇಕಾನಂದ ಹೊದಲೂರೆ, ಬಸವರಾಜ ತೊಂಡಾರೆ, ಮಲ್ಲಿಕಾರ್ಜುನ ಚಿರಡೆ, ಸುನೀಲಕುಮಾರ ಹೊಳಕುಂದೆ, ರಾಜಕುಮಾರ ಹೊಳಕುಂದೆ, ಪುಷ್ಪಾವತಿ ಮಾಮಾ ಇದ್ದರು.
- ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಬಣ್ಣನೆ
- ಧಾರ್ಮಿಕ ಸಭೆ ಉದ್ಘಾಟನೆ
ಬಸವಕಲ್ಯಾಣ: ಕಲೆ, ಸಾಹಿತ್ಯ ಮತ್ತು ಸಾಂಸತಿಕ ೇತ್ರಕ್ಕೆ ಹಾರಕೂಡ ಸಂಸ್ಥಾನ ಹಿರೇಮಠದ ಸೇವೆ ಮತ್ತು ಕೊಡುಗೆ ಅಪಾರ ಎಂದು ಚಿಗರಳ್ಳಿಯ ಶ್ರೀ ಜಗದ್ಗುರು ಮರುಳ ಶಂಕರದೇವರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಬಣ್ಣಿಸಿದರು.
ಹಾರಕೂಡ ಶ್ರೀಮಠದಲ್ಲಿ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಪೂಜ್ಯರು, ಸೂಕ್ತ ಹಾಗೂ ಶ್ರೇಷ್ಠ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಕವಿ, ಕಲಾವಿದ, ಸಾಹಿತಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಜತೆಗೆ ಸಹಾಯಕ ಸಹಕಾರ ನೀಡಿ ಪ್ರೋತ್ಸಾಹಿಸುವ ಕಾರ್ಯ ಶ್ರೀಮಠದಿಂದ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾರಕೂಡ ಮಠವೆಂದರೆ ಇದೊಂದು ಅಭಿನವ ಅನುಭವ ಮಂಟಪದಂತಿದ್ದು, ಇಲ್ಲಿ ಸರ್ವಜಾತಿ ಜನಾಂಗದ, ಸರ್ವಧರ್ಮಗಳ ಬೆಸುಗೆಯ ಸೌಹಾರ್ದ ತಾಣವಾಗಿದ್ದು, ಬಸವಣ್ಣನವರನ್ನು, ಬಸವಾದಿ ಶರಣರನ್ನು ತಮ್ಮ ಅಂತರಂಗದಲ್ಲಿ ಇರಿಸಿಕೊಂಡು ಬಸವ ಚಿಂತನೆಯನ್ನು ಸಮಾಜಕ್ಕೆ ಪ್ರಖರವಾಗಿ ಮುಟ್ಟಿಸುವ ಆದರ್ಶ ಕಾರ್ಯ ಪೂಜ್ಯ ಡಾ.ಚನ್ನವಿರ ಶಿವಾಚಾರ್ಯರಿಂದ ನಡೆಯುತ್ತಿದೆ ಎಂದರು.
ಹಾರಕೂಡ ಶ್ರೀಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಬಸವಕಲ್ಯಾಣ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅನೀಲಕುಮಾರ ರಗಟೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹ ಕಾರ್ಯದರ್ಶಿಗಳಾದ ಬಸವರಾಜ ಬಾಲಕೀಲೆ, ಸುನೀಲ ರಾಯವಾಡೆ, ನಿರ್ದೇಶಕರಾದ ಬಸವರಾಜ ಕೋರಕೆ, ಈರಣ್ಣ ಹಲಶೆಟ್ಟೆ, ಭದ್ರಿನಾಥ ಪಾಟೀಲ, ವಿವೇಕಾನಂದ ಹೊದಲೂರೆ, ಬಸವರಾಜ ತೊಂಡಾರೆ, ಮಲ್ಲಿಕಾರ್ಜುನ ಚಿರಡೆ, ಸುನೀಲಕುಮಾರ ಹೊಳಕುಂದೆ, ರಾಜಕುಮಾರ ಹೊಳಕುಂದೆ, ಪುಷ್ಪ್ಪಾವತಿ ಮಾಮಾ ಇದ್ದರು.
ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಹಾಗೂ ಬಿಡಿಪಿಸಿ ನೂತನ ಪದಾಧಿಕಾರಿಗಳನ್ನು ಹಾರಕೂಡ ಶ್ರೀಮಠದಿಂದ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸತ್ಕರಿಸಿ ಗೌರವಿಸಿದರು. ಮಲ್ಲಿನಾಥ ಹಿರೇಮಠ ಸ್ವಾಗತಿಸಿದರು. ಭಕ್ತ ಕುಂಬಾರ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು.