Ideal policy of the nobles 
ರಾಜ್ಯ

ಮಹನೀಯರ ಆದರ್ಶ ಪಾಲಿಸಿ

ಶಿರಾ : ಡಾ.ಬಿ.ಆರ್.ಅಂಬೇಡ್ಕರ್ ಈ ದೇಶದಲ್ಲಿ ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂದರೆ. ಬಾಬು ಜಗಜೀವನ ರಾಮ್ ದೇಶದಲ್ಲಿ ಯಾರೂ ಆಹಾರದಿಂದ ವಂಚಿತರಾಗಬಾರದೆಂದು ಹಸಿರು ಕ್ರಾಂತಿ ವಾಡಿದರು ಎಂದು ತಹಸೀಲ್ದಾರ್ ಆನಂದ್ ಕುವಾರ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ಸವಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಉದ್ಘಾಟಿಸಿ ವಾತನಾಡಿ, ಅಂಬೇಡ್ಕರ್ ಅವರು ದಲಿತರಿಗೆ, ಶೋಷಿತರಿಗೆ ಶೈಕ್ಷಣಿಕವಾಗಿ, ಸವಾಜಿಕವಾಗಿ, ಆರ್ಥಿಕವಾಗಿ ಸವಾನ ಅವಕಾಶ ಸಿಗಲು ಕಾರಣಕರ್ತರು. ಅದೇ ರೀತಿ ಡಾ.ಬಾಬು ಜಗಜೀವನ ರಾಮ್ ಅವರು ದಮನಿತ ಸಮುದಾಯಗಳಿಗೆ ಅವಕಾಶ ಕಲ್ಪಿಸಲು ಹೋರಾಟ ವಾಡಿದರು ಎಂದರು.
ಉಪನ್ಯಾಸಕ ಡಾ.ಶಂಕರಪ್ಪ, ತಾಪಂ ಇಒ ಆರ್.ಹರೀಶ್ ಮಾತನಾಡಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜ್, ಸವಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿ.ಕೆ ಬಡಿಗೇರ, ಪೌರಾಯುಕ್ತ ರುದ್ರೇಶ್ ಮತ್ತಿತರರು ಇದ್ದರು.