Iconic Urvashi theatre Demolish 
ರಾಜ್ಯ

ಬೆಂಗಳೂರಿನ ಮತ್ತೊಂದು ಸಿಂಗಲ್ ಸ್ಕ್ರೀನ್ ಥಿಯೇಟರ್​ ಡೆಮಾಲಿಶ್; ಊರ್ವಶಿ ಚಿತ್ರಮಂದಿರ ಇನ್ನು ನೆನಪು ಮಾತ್ರ..Urvashi theatre

ಪ್ರಮುಖ ಮುಖ್ಯಾಂಶಗಳು

  • ಲೀಸ್ ಅವಧಿ ಮುಕ್ತಾಯ.. ಭೂ ಮಾಲೀಕರಿಂದ ಊರ್ವಶಿ ಥಿಯೇಟರ್​​ ನೆಲಸಮ.
  • ಕನ್ನಡ ಮಾತ್ರವಲ್ಲ ಹಿಂದಿ, ತಮೀಳು, ತೆಲುಗು ಸಿನಿಮಾಗಳ ಪಾಲಿಗೂ ಇದೊಂದು ಲಕ್ಕಿ ಥಿಯೇಟರ್​
  • 1970ರಲ್ಲಿ ನಿರ್ಮಾಣವಾಗಿರೋ ಊರ್ವಶಿ ಥಿಯೇಟರ್​ ದೇಶದ ಅತಿ ದೊಡ್ಡ ಐಕಾನಿಕ್ ಸಿಂಗಲ್ ಸ್ಕ್ರೀನ್

Iconic Urvashi theatre Demolish: 1970ರಲ್ಲಿ ಡಾ.ರಾಜ್​ ಕುಮಾರ್​ ಅವರಿಂದ ಉದ್ಘಾಟನೆಯಾಗಿದ್ದ ಐತಿಹಾಸಿಕ, ಸಿಂಗಲ್ ಸ್ಕ್ರೀನ್ ಥಿಯೇಟರ್ ಊರ್ವಶಿ ಚಿತ್ರಮಂದಿರ ಇಂದು ನೆಲಸಮಗೊಂಡಿದೆ. ಐದು ಸಾವಿರಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದ ಇದು ಇನ್ನು ನೆನಪು ಮಾತ್ರ.

ಬೆಂಗಳೂರಿನ ಲಾಲ್ ಬಾಗ್ ರಸ್ತೆ ಬಳಿ ಇರುವ ಈ ಊರ್ವಶಿ ಥಿಯೇಟರ್​ಗೆ  55 ವರ್ಷಗಳ ಇತಿಹಾಸವಿದೆ. ಆದರೆ.. ಯಶ್​ ಅಭಿನಯದ ಟಾಕ್ಸಿಕ್​ ಸಿನಿಮಾ ರಿಲೀಸ್​ ಆಗುವ ಮುನ್ನವೇ 

ಸುಪ್ರೀಂ ಕೋರ್ಟ್​ನ ತೀರ್ಪಿನಿಂದಾಗಿ 

ಡೆಮಾಲಿಶ್​ ಆಗುತ್ತಿರುವುದು ಹಲವರ ಬೇಸರಕ್ಕೆ ಕಾರಣವಾಗಿದೆ. ಜೊತೆಗೆ ಇದು ಸೆಲಬ್ರೆಟಿಗಳ ಫೇವರೇಟ್​ ಥಿಯೇಟರ್​​ ಆಗಿತ್ತು. 

ಸೆಲಬ್ರೆಟಿಗಳ ಪಾಲಿನ ಲಕ್ಕಿ ಥಿಯೇಟರ್

1970ರಲ್ಲಿ ನಿರ್ಮಾಣವಾಗಿರೋ ಊರ್ವಶಿ ಥಿಯೇಟರ್​ ದೇಶದ ಅತಿ ದೊಡ್ಡ ಐಕಾನಿಕ್ ಸಿಂಗಲ್ ಸ್ಕ್ರೀನ್​ಗಳಲ್ಲಿ ಒಂದು

ಬಸೆಟ್ಟಿ ಶೆಟ್ಟಿ ಎಂಬುವವರಿಂದ  ಶ್ರೀನಿವಾಸ ಎಂಟರ್‌ಪ್ರೈಸಸ್ ಸಂಸ್ಥೆಯು ಲೀಜ್​​ಗೆ 1970ರಲ್ಲಿ ಜಾಗ ಖರೀದಿ ಮಾಡಿತ್ತು. 45 ವರ್ಷಕ್ಕೆ ಭೋಗ್ಯಕ್ಕೆಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರ ಕಾಲಾವಧಿ 2018ಕ್ಕೆ ಮುಗಿದಿದ್ದ ಹಿನ್ನೆಲೆ,  ಕೇಸ್​​ ಕೋರ್ಟ್​ ಮೆಟ್ಟಿಲೇರಿತ್ತು. 2026ರ ಫೆಬ್ರವರಿ 15ರೊಳಗೆ ಜಾಗ ಬಿಟ್ಟುಕೊಡಲು ಹೈಕೋರ್ಟ್ ಆದೇಆಇಸಿತ್ತು. ನಂತರ ಈ ಕೇಸ್ ಸಂಬಂಧ​ ಸುಪ್ರೀಂ ಕೋರ್ಟ್​​​ನಲ್ಲಿ ವಿಚಾರಣೆ ನಡೆಯುತ್ತಿತ್ತು. ಕೋರ್ಟ್​ ಆದೇಶದ ನಂತರ ಜಾಗ ಡೆಮಾಲಿಷ್ ಮಾಡಲಾಗಿದೆ ಎನ್ನಲಾಗಿದೆ
 2026ರ ಆರಂಭದಿಂದ ಸಿನಿಮಾ ಪ್ರದರ್ಶನ ಮುಂದುವರೆದಿತ್ತು.  ದುನಿಯಾ ವಿಜಯ್​ ನಟನೆಯ ಲ್ಯಾಂಡ್​ಲಾರ್ಡ್ ಸಿನಿಮಾ  ಪ್ರದರ್ಶನ ಕಂಡ ನಂತರ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಆನಂತರ ಧುರಂಧರ್​ ದಿ ರಿವೇಂಜ್ ಪ್ರದರ್ಶನ ಕಂಡುಕೊಂಡಿತ್ತು.  ಸದ್ಯ ಭಾನುವಾರದವರೆಗೂ  ಬೆಥ್ಲಹೆಮ್ ಕುಟುಂಬಂ ಯೂನಿಟ್​ ಪ್ರದರ್ಶನವಿತ್ತು. ಆದರೆ ಅದಕ್ಕೂ ಮುನ್ನವೇ ನೆಲಸಮಗೊಳಿಸಲಾಗಿದೆ.

ಈ ಸಿನಿಮಾ ಹಿಟ್ ಕಂಡಿದ್ದವು

ಅಮೆರಿಕಾ ಅಮೆರಿಕಾ, ಎಕೆ 47, ಇಂಡಿಯನ್​​, ಶಿವಾಜಿ, ಬಾಹುಬಲಿ ಹಾಗೂ ಕೆಜಿಎಫ್​, ಕಾಂತಾರಾ ಸೇರಿದಂತೆ ಹಲವು ಹಿಟ್​ ಸಿನಿಮಾಗಳು ಇಲ್ಲಿ ಪ್ರದರ್ಶನವಾಗಿವೆ, (ಏಜೆನ್ಸೀಸ್).