mahantesh bilagi 
ರಾಜ್ಯ

ಅಪಘಾತದಲ್ಲಿ ಐಎಎಸ್​ ಅಧಿಕಾರಿ ಮಹಾಂತೇಶ ಬೀಳಗಿ ಸಾವು

ಪ್ರಮುಖ ಮುಖ್ಯಾಂಶಗಳು

  • ಐಎಎಸ್​ ಅಧಿಕಾರಿ ಮಹಾಂತೇಶ ಬೀಳಗಿ ಸಾವು
  • ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗೌನಳ್ಳಿ ಬಳಿ ಘಟನೆ
  • ಸಹೋದರ ಶಂಕರ ಬೀಳಗಿ, ಜತೆಗಿದ್ದ ಈರಣ್ಣ ಶಿರಸಂಗಿ ಸಾವು, ಚಾಲಕನ ಸ್ಥಿತಿ ಗಂಭೀರ
ಕಲಬುರಗಿ: ಜೇವರ್ಗಿ ತಾಲೂಕಿನ ಗೌನಳ್ಳಿ ಬಳಿ ಇನ್ನೋವಾ ಕಾರ್​ ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಸೇರಿ ಮೂವರು ಮೃತಪಟ್ಟ ಟನೆ ನಡೆದಿದೆ.
ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ಲಿಮಿಟೆಡ್​ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ ಬೀಳಗಿ ಸಂಬಂಧಿಕರ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದರು. ಐವರೊಂದಿಗೆ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರ್​ ನಾಯಿಯನ್ನು ಉಳಿಸಲು ಹೋಗಿ ನಿಯಂತ್ರಣ ತಪ್ಪಿದ್ದು, ವಾಹನದಲ್ಲಿದ್ದ ಮಹಾಂತೇಶ ಬೀಳಗಿ, ಅವರ ಸಹೋದರ ಶಂಕರ ಬೀಳಗಿ, ಜತೆಗಿದ್ದ ಈರಣ್ಣ ಶಿರಸಂಗಿ ಮೃತಪಟ್ಟಿದ್ದಾರೆ. ಅವರ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಬೆಸ್ಕಾಂ ಎಂಡಿ ಆಗಿದ್ದ ಮಹಾಂತೇಶ ಬೀಳಗಿ ಬೆಳಗಾವಿ ಜಿಲ್ಲೆ ರಾಮದುರ್ಗದವರಾಗಿದ್ದರು. ಉಡುಪಿ, ದಾವಣಗೇರೆ, ಚಿತ್ರದುರ್ಗ ಸೇರಿ ವಿವಿಧೆಡೆ ಸೇವೆ ಸಲ್ಲಿಸಿದ್ದರು. ಅತ್ಯುತ್ತಮ ವಾಗ್ಮಿ ಆಗಿದ್ದ ಅವರು, ಪ್ರೇರಣಾದಾಯಿ ಮಾತುಗಳಿಂದ ಖ್ಯಾತರಾಗಿದ್ದರು. ಜೇವರ್ಗಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.