ಶಹಾಪುರದಲ್ಲಿ ಸೋಮವಾರ ಹಮ್ಮಿಕೊಂಡ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ೧೪ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಗುಂಡಪ್ಪ ತುಂಬಿಗಿ, ಮಹಾದೇವಪ್ಪ ಸಾಲಿಮನಿ, ಮಲ್ಲಿಕಾರ್ಜುನ ಗಂಗಾಧರ ಮಠ ಮಹ್ಮದ್ ಯೂನೂಸ್, ಜಾವೀದ್ ಪಾಷಾ ಖಾನಾಪುರ, ಹರೀಶ ಪಾಟೀಲ್ ಮಲ್ಲಣ್ಣಗೌಡ ಪಾಟೀಲ್ ಇತರರಿದ್ದರು.
- ಶಾಸಕ ಶರಣಬಸಪ್ಪ ದರ್ಶನಾಪುರ ಭರವಸೆ
- ಶಹಾಪುರದಲ್ಲಿ ಸಂಘದ ೧೪ನೇ ವಾರ್ಷಿಕೋತ್ಸವ
ಶಹಾಪುರ: ಲಾರಿ ಮಾಲೀಕರ ಬೇಡಿಕೆಗಳ ಈಡೇರಿಕೆಯಾಗಿ ಶ್ರಮಿಸಲಾಗುವುದು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ತಾಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ೧೪ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರಿ ಸೌಲಭ್ಯವನ್ನು ಆಯಾ ನಿಯಮನುಸಾರ ಅರ್ಹತೆ ಹೊಂದಿರುವ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ತಮ್ಮ ಬೇಡಿಕೆಗಳಿಗೆ ಸರ್ಕಾರ ಒದಗಿಸುವ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಶತ ಪ್ರಯತ್ನ ಮಾಡಲಾಗುವುದು. ಸಂಘಕ್ಕೆ ಸರ್ಕಾರಿ ಜಮೀನು ನೀಡುವ ಬೇಡಿಕೆ ಬಗ್ಗೆ ಮಾತನಾಡಿದ ಅವರು, ರಾಯಚೂರಿನಲ್ಲಿ ಸರ್ಕಾರದಿಂದ ಐದು ಎಕರೆ ಜಮೀನು ಪಡೆಯಲಾಗಿದೆ ಎಂದು ಮಾಹಿತಿ ನೀಡಿದಂತೆ, ಆ ಕುರಿತು ಸರ್ಕಾರಿ ದಾಖಲೆಗಳು ತಂದುಕೊಟ್ಟಲ್ಲಿ ಅದೇ ಆಧಾರದ ಮೇಲೆ ಶಹಾಪುರದ ಸಂಘಕ್ಕೂ ಸರ್ಕಾರಿ ಜಮೀನು ಕಲ್ಪಿಸಲು ಅನುಕೂಲವಾಗಲಿದೆ ಎಂದ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಗುಂಡಪ್ಪ ತುಂಬಿಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಪಿಎಂಸಿ ಆವರಣದಲ್ಲಿ ಸರ್ಕಾರದಿಂದಲೇ ವೇ-ಬ್ರಿಡ್ಜ್ ವ್ಯವಸ್ಥೆ ಕಲ್ಪಿಸಬೇಕು. ಸಂಘಟನೆ ಬಲವರ್ಧನೆಗೆ ಕಚೇರಿ ನಿರ್ಮಾಣಕ್ಕೆ ನಿವೇಶನ ಸೌಲಭ್ಯ ಮತ್ತು ಹತ್ತಿ ಖರೀದಿ ಕೇಂದ್ರಗಳಲ್ಲಿ (ಸಿಸಿಐ) ಲಾರಿಗಳಿಗೂ ಅವಕಾಶ ನೀಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಮಹಾದೇವಪ್ಪ ಸಾಲಿಮನಿ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಗಂಗಾಧರಮಠ ಸೇರಿದಂತೆ ರಾಯಚೂರಿನ ಮಹ್ಮದ್ ಯೂನೂಸ್ ಮಾತನಾಡಿದರು. ಸಂಘದ ಅಧ್ಯಕ್ಷ ಜಾವೀದ್ ಪಾಷಾ ಖಾನಾಪುರ (ಝಬಿ) ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರೀಶ ಪಾಟೀಲï, ಹಿರಿಯರಾದ ಮಲ್ಲಣ್ಣಗೌಡ ಪಾಟೀಲï, ರಾಯಚೂರಿನ ಅಜೀಂ ಪಾಷಾ, ಅಬ್ದುಲ್ ಖಾದರ್ ಇತರರಿದ್ದರು.