ಹೂವಿನಹಿಪ್ಪರಗಿಯ ಕುದರಿ ಸಾಲವಾಡಗಿ ಗ್ರಾಮದ ಪ್ರಗತಿ ಕಾಲನಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ರಾಜುಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಸಚಿನಗೌಡ ಪಾಟೀಲ, ಅನೀಲಗೌಡ ಪಾಟೀಲ, ಈರನಗೌಡ ಪಾಟೀಲ ಮತ್ತಿತರರಿದ್ದರು.
- ಶಾಸಕ ರಾಜುಗೌಡ ಪಾಟೀಲ ಹೇಳಿಕೆ
- ಸಿಸಿ ರಸ್ತೆಗಳ ಭೂಮಿ ಪೂಜೆ
ಹೂವಿನಹಿಪ್ಪರಗಿ: ಸರ್ಕಾರ ಜನರಿಗೆ ನೀಡಿರುವ ಪಂಚ ಗ್ಯಾರಂಟಿಯಿಂದ ಕುಂಠಿತವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ತಕ್ಕ ಮಟ್ಟಿಗೆ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿ ಜನರ ಋಣ ತೀರಿಸುವೆ ಎಂದು ಶಾಸಕ ರಾಜುಗೌಡ ಪಾಟೀಲ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿಯಲ್ಲಿ ಶನಿವಾರ ಸಮಾಜ ಕಲ್ಯಾಣ ಇಲಾಖೆ ಅನುದಾನದ ಪ್ರಗತಿ ಕಾಲನಿಗೆ 2025-26ನೇ ಸಾಲಿನಲ್ಲಿ ಮಂಜೂರಾದ 50 ಲಕ್ಷ ರೂಗಳ ಅನುದಾನದ ಸಿಸಿ ರಸ್ತೆಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರಿಗಾಗಿ ಮೂಲ ಸೌಲಭ್ಯಗಳಲ್ಲಿ ಒಂದಾದ ಸ್ವಚ್ಛತೆಗೆ ಒತ್ತು ನೀಡಿದ ದೇವರಹಿಪ್ಪರಗಿ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಸಿಸಿ ರಸ್ತೆ ನಿರ್ಮಾಣ ಮಾಡುವ ಉದ್ದೇಶದ ನಿಟ್ಟಿನಲ್ಲಿ ನಿತ್ಯದ ಬದುಕಿಗೆ ಅಗತ್ಯವಾಗಿರುವ ಮೂಲ ಸೌಲಭ್ಯ ಅಭಿವದ್ಧಿಗೆ ಹೆಚ್ಚಿನ ಕಾಳಜಿ ವಹಿಸಲಾಗಿದ್ದು, ಅಭಿವೃದ್ಧಿಗಾಗಿ ಸರ್ಕಾರದಲ್ಲಿ ಅನುದಾನದ ಕೊರತೆ ಇದೆ ಎಂದ ಮಾತ್ರಕ್ಕೆ ನಾನು ಸುಮ್ಮನೆ ಕೂರುವ ಶಾಸಕ ನಾನಲ್ಲ. ಇನ್ನೂ ಸಾಕಷ್ಟು ಸಮಯವಿದೆ ಉಳಿದ ಎಲ್ಲಾ ಕಾಮಗಾರಿಯನ್ನು ಹೆಚ್ಚಿನ ಅನುದಾನದ ಹಣ ತಂದು ಪ್ರತಿಯೊಂದು ಗ್ರಾಮವನ್ನು ಮಾದರಿ ಗ್ರಾಮಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.
ಪಿ.ಕೆ.ಪಿ.ಎಸ್ ಅಧ್ಯಕ್ಷ ಸಚಿನಗೌಡ ಪಾಟೀಲ, ಅನೀಲಗೌಡ ಪಾಟೀಲ, ಈರನಗೌಡ ಪಾಟೀಲ, ಮುತ್ತಪ್ಪ ಇಂಗಳಗಿ, ಹುಸೇನಬಾಷಾ ಮುಲ್ಲಾ, ಮೂಸಾ ಖಾಚಾಪೂರ, ಬಂದೇನವಾಜ ಕತ್ನಳ್ಳಿ, ಶರಣಪ್ಪ ಉಪ್ಪಾರ, ಎಂ. ಕೆ. ಇನಾಂದಾರ, ದಾವಲಸಾಬ ಬೋರಗಿ, ಪಶುಸಂಗೋಪನೆ ಇಲಾಖೆ ತಾಲೂಕಾಧಿಕಾರಿ ಡಾ. ಎಲ್.ಎಸ್. ಸಂಖ, ಪಿ.ಡಿ.ಒ ಜಯಕುಮಾರ ದೇವರನಾವದಗಿ, ಪ್ರವೀಣ ಶಿವಯೋಗಿ ಮತ್ತಿತರರಿದ್ದರು.