ಚಿಂಚೋಳಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನ ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಡಾ. ಅವಿನಾಶ ಜಾಧವ್ ಹೇಳಿದರು. ಪೋಲಕಪಳ್ಳಿ ಬಳಿಯ ತಾಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶ, ನಾಡಿನ ಅಭಿವೃದ್ಧಿಗೆ ಪಾತೀತವಾಗಿ ಶ್ರಮಿಸಬೇಕು. ೇತ್ರದಲ್ಲಿ ಬೆಳೆ ವಿಮೆ ಪರಿಹಾರದಲ್ಲಿ ಅನ್ಯಾಯ, ಕಸ್ಕೋಟಾ ಕಳೆಯಿಂದ ರೈತರ ಸಂಕಷ್ಟ, ಕುಂಚಾವರಂ ಭಾಗದಲ್ಲಿ ರೈತರ ಹೋರಾಟ ಸೇರಿ ಅನೇಕ ಸಮಸ್ಯೆಗಳಿವೆ. ಇವುಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತುವ ಮೂಲಕ ಪರಿಹಾರಕ್ಕಾಗಿ ಪ್ರಮಾಣಿಕವಾಗಿ ಶ್ರಮಿಸುವೆ ಎಂದರು. ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿದರು. ಡಿವೈಎಸ್ಪಿ ಸಂಗಮನಾಥ ಹಿರೇಮಠ, ತಾಪಂ ಇಒ ಸಂತೋಷಕುಮಾರ ಚವ್ಹಾಣ್, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಸಿಪಿಐ ಕಪಿಲದೇವ, ಪ್ರಮುಖರಾದ ಸುರೇಶ ದೇಶಪಾಂಡೆ, ಡಾ.ಶ್ರುತಿ, ವೀರಶೆಟ್ಟಿ ರಾಠೋಡ್, ಸಂತೋಷಕುಮಾರ ತಾಂಡೂರಕರ, ಧೂಳಪ್ಪ ಮಾಳನೂರ, ಕಾಮಣ್ಣ ಬಿರಾದಾರ, ಗೌತಮ ಪಾಟೀಲ್, ನಾಗಶೆಟ್ಟಿ ಭದ್ರಶೆಟ್ಟಿ, ಅಶೋಕ ಹೂವಿನಬಾವಿ, ಸುರೇಶ ಕೊರವಿ, ಮಲ್ಲಿಕಾರ್ಜುನ ಪಾಲಾಮೂರ, ಶ್ರೀಮಂತ ಕಟ್ಟಿಮನಿ, ಶಾಮರಾವ ಕೊರವಿ, ಅಶೋಕ ಚವ್ಹಾಣ್, ಗೋಪಾಲರಾವ ಕಟ್ಟಿಮನಿ, ರಾಜು ಪವಾರ್, ಪ್ರೇಮಸಿಂಗ್ ಜಾಧವ್ ಇತರರಿದ್ದರು.