ಗುರುಮಠಕಲ್ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಕೋಣೆ ಸೇರಿ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಶರಣಗೌಡ ಕಂದಕೂರ ಉದ್ಘಾಟಿಸಿದರು. ಸಹಾಯಕ ಆಯುಕ್ತ ಶ್ರೀಧರ ಗೋಟೂರ, ಸಿದ್ದಣ್ಣ ಅಣಬಿ, ಅಜಯರಡ್ಡಿ ಯಲ್ಹೇರಿ ಇತರರಿದ್ದರು.
- ಶಾಸಕ ಶರಣಗೌಡ ಕಂದಕೂರ ಭರವಸೆ
- ರು. ೨ ಕೋಟಿ ವೆಚ್ಚದ ವಿವಿಧ ಕಾಮಗಾರಿ ಉದ್ಘಾಟನೆ
ಗುರಮಠಕಲ್: ಕ್ಷೇತ್ರದ ವಸತಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ನಾನು ಅನುದಾನ ನೀಡಬಹುದು. ಆದರೆ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಅಽಕಾರಿಗಳಿಂದ ಆಗಬೇಕು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಸೈದಾಪುರ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ನೂತನ ನಾಲ್ಕು ಕೋಣೆ ಮತ್ತು ರಾಚನಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಸಂಪರ್ಕಿಸುವ ನೂತನ ರಸ್ತೆ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ರಾಚನಳ್ಳಿ ವಸತಿ ಶಾಲೆಗೆ ಸಂಪರ್ಕಿಸಲು ರಸ್ತೆಯೇ ಇರಲಿಲ್ಲ. ಇದು ಬಹುದೊಡ್ಡ ಸಮಸ್ಯೆಯಾಗಿತ್ತು. ನಮ್ಮ ತಂದೆ ಅವರ ಕಾಲದಲ್ಲಿಯೂ ನಡೆದಿತ್ತು. ಆದರೆ ಅಕ್ಕಪಕ್ಕದ ಜಮೀನುಗಳು ರೈತರಿಗೆ ಮನವಿ ಮಾಡಿಕೊಂಡು ಕೊನೆಗೂ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.
ನಾನು ಅಽಕಾರಿಗಳಿಗೆ ಸಿಟ್ಟಿನಿಂದ ಯಾಕೆ ಮಾತನಾಡುತ್ತೇನೆ ಎಂದು ಈಗೀಗ ನಿಮಗೆಲ್ಲ ಈಗ ಅರ್ಥವಾಗಿರಬೇಕು. ನನ್ನ ವೈಯಕ್ತಿಕ ಕಾರಣಕ್ಕಾಗಿ ನಾನು ಯಾವ ಅಽಕಾರಿಗಳಿಗೆ -ೆÇÃನ್ ಮಾಡುವುದಿಲ್ಲ. ಆದರೆ ನನ್ನ ಅಭಿವೃದ್ಧಿ ವೇಗಕ್ಕೆ ಯಾರೂ ಸ್ಪಂದನೆ ಮಾಡುವುದಿಲ್ಲ ಅಂಥವರಿಗೆ ಚಳಿ ಬಿಡಿಸಿದ್ದೇನೆ ಎಂದರು.
ಈ ವೇಳೆ ಸಹಾಯಕ ಆಯುಕ್ತ ಶ್ರೀಧರ ಗೋಟೂರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಽಕಾರಿ ಸಿದ್ದಣ್ಣ ಅಣಬಿ, ತಾಪಂ ಇಒ ಮಹಾದೇವ, ಎಇಇ ಟಿ.ಬನ್ನಪ್ಪ, ಚಂದ್ರಶೇಖರ, ಸಿಪಿಐ ಶಿವಪ್ಪ, ಜೆಸ್ಕಾ ಎಇಇ ಮಾರ್ಕಂಡಯ್ಯಾ, ಅಜಯರಡ್ಡಿ ಯಲ್ಹೇರಿ, ಬಸವರಾಜಪ್ಪ ಗೌಡ, ಗುರುನಾಥರಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶಚಂದ್ರ ಕಟಕಟಿ, ಶಿವಲೀಲಾ, ಚಂದ್ರಶೇಖರ ಗೋಗಿ ಇತರರಿದ್ದರು.