ರಾಜ್ಯ

ನಿಮಗಾಗಿ ಪ್ರಾಣ ಬೇಕಾದ್ರೂ ಕೊಡುವೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ವೈ.ಪಾಟೀಲ್​ ಎದುರು ಕಣ್ಣೀರು ಹಾಕಿದ ಜೆ.ಎಂ.ಕೊರಬು
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​
ಕರಜಗಿ: ಹಿರಿಯರಾದ ನಿಮ್ಮ ಮೇಲೆ ಅಪಾರ ಗೌರವವಿದೆ. ನಿಮಗಾಗಿ ಪ್ರಾಣ ಬೇಕಾದರೂ ಕೊಡತಿನಿ. ಎಂದು ಕೆಪಿಸಿಸಿ ಒಬಿಸಿ ವಿಭಾಗದ ಉಪಾಧ್ಯಕ್ಷ ಜೆ.ಎಂ. ಕೊರಬು ತಮ್ಮ ಮಾಶಾಳ ನಿವಾಸದಲ್ಲಿ ಶಾಸಕ ಎಂ.ವೈ.ಪಾಟೀಲ್​ ಎದುರೇ ಕಣ್ಣೀರು ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಮಾಶಾಳ ಗ್ರಾಮದಲ್ಲಿ ಶನಿವಾರ ಕೊರಬು ನೇತೃತ್ವದಲ್ಲಿ ರೈತರ ವಂತಿಕೆ ಹಣದಲ್ಲಿ ಮುರುಮ್​ ರಸ್ತೆ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಲು ಆರು ತಿಂಗಳ ಹಿಂದೆಯೇ ಶಾಸಕ ಎಂ.ವೈ.ಪಾಟೀಲ್​ ಅವರನ್ನು ಭೇಟಿಯಾಗಿ ಕಾರ್ಯಕ್ರಮದ ಬಗ್ಗೆ ತಿಳಿಸಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕೊನೇ ಳಿಗೆಯಲ್ಲಿ ಬಾರದ್ದರಿಂದ ಅಸಮಾಧಾನ ಹೊರಹಾಕಿದರು.
ಪ ಮತ್ತು ಜನರಿಗಾಗಿ ನಿಷ್ಠೆಯಿಂದ ದುಡಿಯುತ್ತಿದ್ದರೂ ಹೀಗೇಕೆ ಆಗ್ತಾ ಇದೆ ಎಂಬುದು ತಿಳಿಯುತ್ತಿಲ್ಲ ಎಂದು ಕಾರ್ಯಕ್ರಮ ಮುಗಿದ ಬಳಿಕ ತಮ್ಮ ನಿವಾಸಕ್ಕೆ ಆಗಮಿಸಿದ ಶಾಸಕ ಪಾಟೀಲ್​ ಎದುರು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಬೇರೆ ಪೂರ್ವನಿಗದಿ ಕಾರ್ಯಕ್ರಮಗಳಿಂದಾಗಿ ಮಾಶಾಳಕ್ಕೆ ಬರಲು ತಡವಾಗಿದೆ. ಪದಲ್ಲಿ ನಿಮಗೆ ಅಪಾರ ಗೌರವವಿದೆ. ನೀವು ಹೀಗೆ ನೊಂದುಕೊಳ್ಳಬೇಡಿ. ಪದೊಳಗಿನ ಸಮಸ್ಯೆಗಳನ್ನು ಶ್ರೀದಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯ ಪ್ರಕಾಶ ಜಮಾದಾರ್​, ಜಿಪಂ ಮಾಜಿ ಸದಸ್ಯ ಮತೀನ್​ ಪಟೇಲ್​, ಬ್ಲಾಕ್​ ಕಾಂಗ್ರೆಸ್​ ಅಧ್ಯ ರಮೇಶ ಪೂಜಾರಿ, ಮುಖಂಡರಾದ ಶಿವಪುತ್ರ ಜಿಡ್ಡಗಿ, ಶಿವಾನಂದ ಗಾಡಿ ಸಾಹುಕಾರ, ಮಕ್ಬುಲ್​ ಶೇಖ, ಪಂಡಿತ ನಾವಿ, ತುಂಡಪ್ಪ ಮಾಸ್ಟರ್​, ಗುರುಶಾಂತ ಜಳಕಿ ಇತರರಿದ್ದರು.