I love the service of a doctor in my life. 
ರಾಜ್ಯ

ಜೀವನದಲಿ ವೈದ್ಯರ ಸೇವೆ ಅಮೋ

ಮಧುಗಿರಿ : ಮಾನವ ಜೀವನದಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರೋಗದಿಂದ ಬಳಲುತ್ತಿರುವ ಜನರನ್ನು ಗುಣಪಡಿಸುವ ಮೂಲಕ ಅವರ ಜೀವನಕ್ಕೆ ಹೊಸ ಆಸೆಯನ್ನು ನೀಡುತ್ತಿದ್ದಾರೆ ಎಂದು ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಶ್ರೀ ಜಪಾನಂದಾ ಮಹರಾಜ್​ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರಸ್ತೆಯಲ್ಲಿರುವ ಶ್ರೀ ಸಿದ್ಧಗಂಗಾ ಹಾಸ್ಪಿಟಲ್​ ಡಯಾಲಿಸಿಸ್​ ಸೆಂಟರ್​, ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರಿನ ಡಾ.ಎಸ್​.ಆರ್​.ಚಂದ್ರಶೇಖರ್​ ವಾಕ್​ ಮತ್ತು ಶ್ರವಣ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಬೃಹತ್​ ಆರೋಗ್ಯ, ಹೃದ್ರೋಗ ತಪಾಸಣಾ ಶಿಬಿರ ಹಾಗೂ ಶ್ರವಣ ದೋಷವುಳ್ಳ ಬಡವರಿಗೆ ಉಚಿತವಾಗಿ ಶ್ರವಣ ಸಾಧನವನ್ನು ವಿತರಣೆ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಆರೋಗ್ಯಕರ ಜೀವನ ನಿಮಾರ್ಣವಾಗಲು ವೈದ್ಯರ ಸೇವೆ ಅತ್ಯಗತ್ಯ. ಆಸ್ಪತ್ರೆಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿಯೂ ವೈದ್ಯರು ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ನಡೆಯುವ ಆರೋಗ್ಯ ಶಿಬಿರಗಳಿಂದ ಬಡವರು ಹಾಗೂ ರೋಗಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ವೈದ್ಯರಾದ ಅರುಣ್​, ಶರತ್​, ನಟರಾಜ್​, ಶ್ರೀನಿವಾಸ್​, ಸ್ವಾತಿ, ಅಭಿಷೇಕ, ಸಿದ್ಧಗಂಗಾ ಮೆಡಿಕಲ್​ ಕಾಲೇಜಿನ ಎಂ.ಎನ್​.ಸಂಜೀವ್​ ಕುಮಾರ್​, ಇನ್ಫೋಸಿಸ್​ ಮಹೇಶ್​, ಶಿಕ್ಷಕ ಶಶಿಕುಮಾರ್​ ಇದ್ದರು.