KH Muniyappa statement Bengaluru 
ರಾಜ್ಯ

'ಡಿಸಿಎಂ ಹುದ್ದೆಗಾಗಿ ರಾಹುಲ್​ ಗಾಂಧಿ ಬಳಿ ಮನವಿ ಮಾಡಿದ್ದೇನೆ, ಸೀನಿಯಾರಿಟಿಗೆ ಗೌರವ ಕೊಡ್ತಾರೆ'; ಕೆಹೆಚ್ ಮುನಿಯಪ್ಪ.. KH Muniyappa

ಪ್ರಮುಖ ಮುಖ್ಯಾಂಶಗಳು

  • ರಾಹುಲ್ ಗಾಂಧಿ‌‌ಯವ್ರ ಮುಂದೆ ಎಲ್ಲಾ ವಿಚಾರ ಬಿಟ್ಟಿದ್ದೇನೆ
  • ನಾನು ಎಲ್ಲಾ ನೋಡಿಕೊಳ್ತೇನೆ.ನೀವು ಪಾರ್ಟಿ ಕೆಲಸ ಮಾಡಿ ಅಂತ ಹೇಳಿದ್ದಾರೆ
  • ನಾನು ಕಾಂಗ್ರೆಸ್ ಶಿಸ್ತಿನ ಸಿಪಾಯಿ, ಮನವಿ ಮಾಡೊದು ನನ್ನ ಕೆಲಸ ಕೊಡೋದು ಬಿಡೋದು ಅವ್ರಿಗೆ ಬಿಟ್ಟಿದ್ದು
  • ಬೆಂಗಳೂರಿನಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಲೇ,  ಕಾಂಗ್ರೆಸ್​​ ನಾಯಕರಲ್ಲಿ  ಅಸಮಾಧಾನ ಭುಗಿಲೆದ್ದಿದೆ. 'ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡೊಲ್ಲ' ಎಂದು ಹಿರಿಯ ನಾಯಕ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆ ಬೆನ್ನಲ್ಲೇ ಮುನಿಯಪ್ಪ ಸಹ ತಮಗೆ ಡಿಸಿಎಂ ಸ್ಥಾನ ನೀಡಬೇಕು, ಕೊಟ್ಟಿರುವ ಖಾತೆ ಸರಿಯಿಲ್ಲ ಎನ್ನುತ್ತಾ ಸಾಲು ಸಾಲು ಬೇಡಿಕೆಯನ್ನು ಹೈಕಮಾಂಡ್​ ಮುಂದಿಟ್ಟಿದ್ದಾರೆ.   
ಬೆಂಗಳೂರಿನಲ್ಲಿ ಮಾತಾನಾಡಿದ  ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಡಿಸಿಎಂ ಹುದ್ದೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಮನವಿ ಮಾಡಿದ್ದೇನೆ. ಸಿನಿಯಾರಿಟಿಗೆ ಯಾವ ರೀತಿ ಗೌರವ ಕೊಡಬೇಕೆಂದು ಗೊತ್ತಿದೆ ಎಂದು ಹೇಳಿದರು. 

ಸಚಿವ ಮುನಿಯಪ್ಪಗಿರುವ ಬೇಸರವೇನು?

'ಸಂಪುಟ ರಚನೆಯಲ್ಲಿ ಹರಿತನವನ್ನು ಕಡೆಗಣಿಸಲಾಗಿದೆ. ನಾನು ಎಂಟು ಬಾರಿ ಚುನಾವಣೆಯನ್ನು ಗೆದ್ದಿರುವ ಹಿರಿಯ ನಾಯಕ. ಆದರೆ ನನ್ನ ಸೀನಿಯಾರಿಟಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ನಾನು ಪಕ್ಷದಲ್ಲಿ ಹಿರಿಯ. ನನಗೆ ನೀಡಿರುವ ಖಾತೆ ಸರಿಯಿಲ್ಲ. ತಾರತಮ್ಯ ನಡೆದಿದೆ.  ಇದು ಹೀಗೆ ಮುಂದುವರೆದರೆ 2028 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಸಂಕಷ್ಟ ಎದುರಾಗಲಿದೆ' ಎಂದರು. 
'ನಾನು ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ‌‌ಯವ್ರ ಮುಂದೆ ಎಲ್ಲಾ ವಿಚಾರ ಬಿಟ್ಟಿದ್ದೇನೆ. ಡಿಸಿಎಂ ಹುದ್ದೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಮನವಿ ಮಾಡಿದ್ದೇನೆ. ವಿವರಿಸಿದ್ದೇನೆ. ಅವರಿಗೆ, ಸಿನಿಯಾರಿಟಿಗೆ ಯಾವ ರೀತಿ ಗೌರವ ಕೊಡಬೇಕೆಂದು ಗೊತ್ತಿದೆ. ಐ ವಿಲ್ ಟೇಕ್ ಎ ಡಿಸಿಸನ್' ಅಂತ ಹೇಳಿದ್ದಾರೆ.
'ನಾನು ಕಾಂಗ್ರೆಸ್ ಶಿಸ್ತಿನ ಸಿಪಾಯಿ, ಮನವಿ ಮಾಡೊದು ನನ್ನ ಕೆಲಸ ಮಾಡೋದು ಬಿಡೋದು ಅವರಿಗೆ ಬಿಟ್ಟದ್ದು ಯಾವುದು ಏನೂ ಆಗದಿದ್ದರೂ ಕಾಂಗ್ರೆಸ್‌ನಲ್ಲೇ ಇರ್ತೇನೆ' ಎಂದು  ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.