I am opposed to the Link Canal project. 
ರಾಜ್ಯ

ಲಿಂಕ್ ಕೆನಾಲ್ ಕಾಮಗಾರಿಗೆ ನನ್ನ ವಿರೋಧವಿದೆ

ಎಂ.ಎನ್.ಕೋಟೆ : ಹೇವಾವತಿ ಎಕ್ಸ್‌ಪ್ರೆಸ್ ಕೆನಾಲ್ ಲಿಂಕ್ ಕಾಮಗಾರಿಗೆ ಮೊದಲಿಂದಲೂ ನಾನು ವಿರೋಧ ವಾಡುತ್ತಿದ್ದೇನೆ. ಆದರೆ ಆಡಳಿತ ಪಕ್ಷ ಇರುವುದರಿಂದ ನಾನು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ಹೇವಾವತಿ ನೀರಿನ ವಿಚಾರದಲ್ಲಿ ನನಗೆ ವಿರೋಧವಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಈರಪ್ಪನಹಟ್ಟಿ, ಹೂವಿನಕಟ್ಟೆ, ಮಲಾಮಚಕುಂಟೆ, ಸಣಬನಹಳ್ಳಿಗಳಲ್ಲಿ ಬುಧವಾರ 4 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ವಾತನಾಡಿ, ಕುಣಿಗಲ್ ಉತ್ಸವಕ್ಕೆ ನನ್ನನ್ನು ಆಹ್ವಾನ ವಾಡಿದರು. ನಾನು ಕೂಡ ಹೋಗಿದ್ದೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುವಾರ್ ಅವರು ಹೇವಾವತಿ ವಿಚಾರದ ಬಗ್ಗೆ ವಾತನಾಡಿರುವುದು ನಿಜ. ಆದರೆ ನಾನು ಸಂಪೂರ್ಣ ಬೆಂಬಲ ಕೊಡ್ತೀನಿ ಅಂತ ಎಲ್ಲೂ ಹೇಳಿಲ್ಲ, ಹೇಳುವುದು ಇಲ್ಲ. ಡಿಕೆಶಿ ಅವರು ಈ ವಿಚಾರ ಯಾಕೆ ಹೇಳಿದರು ನನಗಂತೂ ಗೊತ್ತಿಲ್ಲ. ಆದರೆ ನನ್ನ ತಾಲೂಕಿನ ರೈತರ ಹಿತ ಕಾಪಾಡುವ ಉದೇಶದಿಂದ ನಾನೂ ಲಿಂಕ್ ಕೆನಾಲ್ ಕಾಮಗಾರಿಗೆ ವಿರೋಧ ವಾಡುತ್ತೀನಿ ಎಂದರು.
ಚುನಾವಣೆ ಹತ್ತಿರ ಬರುತ್ತಾ ಇದೆಯಲ್ಲ ಅದಕ್ಕೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ವಾಡುತ್ತಾ ಇದ್ದಾರೆ. ನಾನು ಈ ತಾಲೂಕಿನಲ್ಲಿ ಗೆದ್ದ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯ ವಾಡಿದ್ದೇನೆ. ನಾನು ಯಾವತ್ತು ಅಧಿಕಾರಕ್ಕೆ ಆಸೆ ಪಡುವನಲ್ಲ. ನಾನು ಯಾರನ್ನೂ ನನ್ನನ್ನು ಮಂತ್ರಿ ವಾಡಿ ಅಂತ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.