ಡಾ.ಅಜಯಸಿಂಗ್​  
ರಾಜ್ಯ

ನಾನೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ

ಪ್ರಮುಖ ಮುಖ್ಯಾಂಶಗಳು

  • ಡಾ.ಅಜಯ್​ಸಿಂಗ್​ ಹೇಳಿಕೆ
  • ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗಲಿದೆ
ಕಲಬುರಗಿ: 
ದೇವಲಗಾಣಗಾಪುರದಲ್ಲಿ ಶ್ರೀ ದತ್ತಾತ್ರೇಯ ಮಹಾರಾಜರಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದುಕಿರೋವರೆಗೂ ಸಂರ್ಷ ಇದ್ದದ್ದೇ, ಹೀಗಾಗಿ ಯಾವುದಕ್ಕೂ ಆತುರ ಪಡೋದಿಲ್ಲ. ತಾಳ್ಮೆಯಿಂದ ಕಾಯುತ್ತೇನೆ. ವಿಳಂಬವಾದರೂ ಅತ್ಯುತ್ತಮವಾದದ್ದೇ ದೊರಕುವ ಆತ್ಮವಿಶ್ವಾಸವಿದೆ. ಮೂರು ಬಾರಿ ಶಾಸಕನಾಗಿದ್ದೇನೆ. ಮಂತ್ರಿಗಿರಿಗಾಗಿ 14 ವರ್ಷ ಕಾದಿದ್ದೇನೆ, ಇನ್ನು 15, 20 ದಿನ ತಾಳ್ಮೆಯಿಂದ ಕಾಯೋಣ. ಹೈಕಮಂಡ್​ ನನ್ನ ಪ ನಿಷ್ಠೆ, ಕೆಲಸ ಗುರುತಿಸಿದೆ. ಸಚಿವ ಸ್ಥಾನ ಕೊಟ್ಟೇ ಕೊಡುತ್ತಾರೆಂಬ ವಿಶ್ವಾಸವಿದೆ. ಈಗ ಸಿಎಂ, ಡಿಸಿಎಂ ಸೇರಿ 13 ಜನ ಸಚಿವರಾಗಿದ್ದಾರೆ. ಇನ್ನೂ 20 ಸ್ಥಾನಗಳಿವೆ. ಇದರಲ್ಲಿ ನನಗೂ ಅವಕಾಶ ಸಿಗಲಿದೆ ಎಂದರು.
ಕೆಕೆಆರ್​ಡಿಬಿ ಅಧ್ಯ, ಮುಖ್ಯ ಸಚೇತಕ, ದೆಹಲಿಯಲ್ಲಿ ವಿಶೇಷ ಪ್ರತಿನಿಧಿಯಾಗಿ ಹೇಗೆ ಕೆಲಸ ಮಾಡಿದ್ದೇನೆ ಎನ್ನುವುದು ನಮ್ಮ ಹೈಕಮಾಂಡ್​ ಹತ್ತಿರದಿಂದ ನೋಡಿದೆ. ದೇರ್​ ಹುವಾ ಲೇಕಿನ್​ ದುರಸ್ತ ಹುವಾ ಅನ್ನೋ ಮಾತಿನಂತೆ ತಡವಾಗಿಯಾದರೂ ಪರವಾಗಿಲ್ಲ, ಹೈಕಮಾಂಡ್​ ನನಗೆ ಈ ಬಾರಿ ಸಚಿವ ಸ್ಥಾನ ನೀಡಲಿದೆ. ರಾಜ್ಯಸಭೆ, ಪರಿಷತ್​ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ 2ನೇ ಹಂತದ ಸಂಪುಟ ವಿಸ್ತರಣೆ ನಡೆಯಲಿದೆ. ಈ ಪಟ್ಟಿಯಲ್ಲಿ ನನ್ನ ಹೆಸರು ಬರಲಿದೆ ಎಂಬ ನಿರೀೆಯಿದೆ ಎಂದು ತಿಳಿಸಿದರು.
ಮೋದಿ ಸರ್ಕಾರ ವಿಪಗಳನ್ನು ಮುಗಿಸಲು ಹೊರಟಿದೆ. ವಿಪ, ಪ್ರಾದೇಶಿಕ ಪಗಳ ಮೇಲೆ ಪ್ರಹಾರ ಮಾಡುತ್ತಿದೆ. ಇಡಿ, ಐಟಿ, ಎಲೆನ್​ ಕಮಿಶನ್​ ಬಳಸಿ ಹತ್ತಿಕ್ಕುತ್ತಿರುವುದನ್ನು ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಸೇರಿ ದೇಶದ ಹಲವೆಡೆ ಕಂಡಿದ್ದೇವೆ. ಮೋದಿ ಸರ್ಕಾರಕ್ಕೆ ವಿಪಗಳೇ ಬೇಡ. ಪ್ರಜಾಪ್ರಭುತ್ವದಲ್ಲಿ ಅವರಿಗೆ ನಂಬಿಕೆಯೇ ಇಲ್ಲ ಎಂದು ಟೀಕಿಸಿದರು.
"

ಎಸ್​.ಎಂ.ಕೃಷ್ಣ ಅವರ ಸಂಪುಟದಲ್ಲಿ ಧರಂಸಿಂಗ್​, ಡಾ.ಮಲ್ಲಿಕಾರ್ಜುನ ಖರ್ಗೆ, ಡಾ.ಎ.ಬಿ.ಮಾಲಕರೆಡ್ಡಿ, ಖಮರುಲ್​ ಇಸ್ಲಾಂ, ಬಾಬುರಾವ ಚವ್ಹಾಣ್​, ಬಾಬುರಾವ ಚಿಂಚನಸೂರ್​ ಸಚಿವರಾಗಿದ್ದರು. ಹೀಗಾಗಿ ಸಂಪುಟದಲ್ಲಿ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ ಸಿಕ್ಕಿದೆ ಎಂಬ ಸಂಖ್ಯೆ ಮುಖ್ಯವಲ್ಲ. ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬುದು ಹೈಕಮಾಂಡ್​ ರ್ನಿಣಯ ಮಾಡುತ್ತದೆ. ಅದರಂತೆಯೇ ನನಗೆ ಸಚಿವ ಪಟ್ಟ ಸಿಗುವ ಗ್ಯಾರಂಟಿ ಇದೆ.

— ಡಾ.ಅಜಯಸಿಂಗ್​, ಅಧ್ಯಕ್ಷ, ಕೆಕೆಆರ್​ಡಿಬಿ