ಕೊಲೆ 
ರಾಜ್ಯ

ಉಸಿರುಗಟ್ಟಿಸಿ ಪತ್ನಿ ಕೊಲೆಗೈದ ಪತಿ

ಬೈಲಹೊಂಗಲ: ತಾಲೂಕಿನ ನೇಗಿನಹಾಳ ಗ್ರಾಮದ ಫಕೀರಪ್ಪ ಗಿಲಕ್ಕನವರ (28) ತನ್ನ ಪತ್ನಿ ರಾಜೇಶ್ವರಿ ಗಿಲಕ್ಕನವರ (21) ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿದೆ
ಮದುವೆಯಾಗಿ ಮೂರು ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ನಿತ್ಯ ಗಂಡನೊಂದಿಗೆ ಪತ್ನಿ ಜಗಳವಾಡುತ್ತಿದ್ದಳು. ಜ.20ರಂದು ತವರು ಮನೆಗೆ ಹೋಗುವ ವಿಷಯವಾಗಿ ಗಲಾಟೆಯಾಗಿದೆ. ಇದರಿಂದ ಬೇಸತ್ತು ರಾತ್ರಿ ಮಲಗಿದ್ದ ಸಮಯದಲ್ಲಿ ಕೊರಳಿಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಆರೋಪಿಯನ್ನು ಬಂಧಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬೈಲಹೊಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ.