Husband kills wife by hitting her with a cooker 
ರಾಜ್ಯ

ಕುಕ್ಕರ್​ನಲ್ಲಿ ಹೊಡೆದು ಪತ್ನಿಯನ್ನೇ ಕೊಂದ ಪತಿ

ಕೋಲಾರ: ಹಸಾಳ ಗ್ರಾಮದಲ್ಲಿ ಪತ್ನಿಗೆ ಕುಕ್ಕರ್​ನಿಂದ ಹೊಡೆದು ಪತಿ ಹತ್ಯೆ ಮಾಡಿದ್ದಾನೆ. ಸಹನಾ (24) ಕೊಲೆಯಾದವರು. ಪತಿ ಮಂಜುನಾಥ್​ ಹತ್ಯೆಗೈದವ.
ದಂಪತಿಗೆ ಮದುವೆಯಾಗಿ 5 ವರ್ಷವಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯಾದಾಗಿನಿಂದ ಪತಿ ಪದೇಪದೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಮದುವೆಗೆ ಲಕ್ಷಾಂತರ ರೂಪಾಯಿ ರ್ಖಚಾಗಿದೆ ಎಂದು 2 ಲಕ್ಷ ರೂ. ಪಡೆದಿದ್ದನಂತೆ. ಅಲ್ಲದೇ ಮನೆ ಕಟ್ಟಲೆಂದು 10 ಲಕ್ಷ ರೂ. ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದ. ಹಣಕ್ಕಾಗಿ ಪದೇಪದೆ ಗಲಾಟೆ ಮಾಡುತ್ತಿದ್ದ. ಈ ಹಿಂದೆಯೂ ಹಲವು ಬಾರಿ ನ್ಯಾಯ ಪಂಚಾಯಿತಿ ಮಾಡಲಾಗಿತ್ತು.
ಜೂ.17 ರಂದು ಸಹನಾ ತಾಯಿ ಜಯಮ್ಮಗೆ ವಿಡಿಯೋ ಕಾಲ್​ ಮಾಡಿ, "ಅಮ್ಮ ನನ್ನ ಹೊಡೆಯುತ್ತಿದ್ದಾರೆ. ನೋಡು ಮೂಗಲ್ಲಿ ರಕ್ತ ಬರುತ್ತಿದೆ' ಎಂದು ಹೇಳಿಕೊಂಡಿದ್ದಳು. ಅದೇ ದಿನ ರಾತ್ರಿ ಕುಕ್ಕರ್​ ಸೇರಿ ವಿವಿಧ ಪಾತ್ರೆಗಳನ್ನು ಬಳಸಿ ಮಂಜುನಾಥ್​ ಆಕೆಯ ತಲೆಯ ಮೇಲೆ ಹೊಡೆದಿದ್ದಾನೆ. ಪ್ರಜ್ಞೆತಪ್ಪಿ ಬೀಳುತ್ತಿದ್ದಂತೆ ನೇಣು ಬಿಗಿದಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.