Husband killed wife in bellari 
ರಾಜ್ಯ

ಶೀಲ ಶಂಕೆ, 7 ತಿಂಗಳ ಕೂಸು ನನ್ನದಲ್ಲ ಎನ್ನುವ ವಿಚಾರಕ್ಕೆ ಜಗಳ; ಪತ್ನಿ, ಮಗು ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದ ಪತಿ..Bellari

ಪ್ರಮುಖ ಮುಖ್ಯಾಂಶಗಳು

  • ಪತ್ನಿ ಶೀಲ ಶಂಕಿಸಿ ಜಗಳ..ಕೊಲೆಯಲ್ಲಿ ಅಂತ್ಯ, ಬಳ್ಳಾರಿಯಲ್ಲಿ ಘಟನೆ ಬೆಳಕಿಗೆ
  • ಮಗು ನನ್ನದಲ್ಲ ಎಂದು ನಿತ್ಯ ಜಗಳವಾಡ್ತಿದ್ದ ಹೊನ್ನೂರಪ್ಪನಿಂದ ಪತ್ನಿ ಮಗು ಕೊಲೆ
  • ಆರೋಪಿ ಹೊನ್ನೂರಪ್ಪನನ್ನು ಬಂಧಿಸಿದ ಎಪಿಎಂಸಿ ಪೊಲೀಸರು

ಬಳ್ಳಾರಿ: ವ್ಯಕ್ತಿಯೊಬ್ಬ 7 ತಿಂಗಳ ಮಗು ಹಾಗೂ ಮಡದಿಯನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ(

Husband killed wife

) ಮಾಡಿದ ಕೇಸ್​ ಬಳ್ಳಾರಿಯ(

bellari

) ಅಂದ್ರಾಳ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಕೊಲೆಯಾದವರು ರಾಜೇಶ್ವರಿ (24), ಏಳು ತಿಂಗಳ ಮಗಳು ಆಶ್ವಿನಿ ಎಂದು ಗುರುತಿಸಲಾಗಿದೆ. ಆರೋಪಿ ಹೊನ್ನೂರಪ್ಪ (28)ನನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಕೊಲೆಯ ಅಸಲಿ ಕಾರಣದ ವಿಚಾರಣೆ ಮುಂದುವರೆದಿದೆ ಎನ್ನಲಾಗಿದೆ.

ಕಾರಣ ಏನು?

ಪತ್ನಿ ಬೇರೋಬ್ಬನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಪ್ರತಿ ಬಾರಿ ಹೊನ್ನೂರಪ್ಪ ಅನುಮಾನ ವ್ಯಕ್ತಪಡಿಸುತ್ತಿದ್ದ. ಏಳು ತಿಂಗಳ ಮಗು ನನ್ನದಲ್ಲ. ಯಾರ ಬಳಿ ಸಂಬಂಧ ಇಟ್ಟುಕೊಂಡಿದ್ದಳೋ ಆತನದ್ದು ಎಂದು ನಿತ್ಯ ತಗಾದೆ ತೆಗೆದು ಜಗಳ ಮಾಡುತ್ತಿದ್ದನಂತೆ. ಇದೇ ವಿಚಾರ ಮತ್ತೆ ಮುನ್ನೆಲೆಗೆ ಬಂದು ಜಗಳ ತಾರಕ್ಕೇರಿದೆ. ಈ ವೇಳೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.

ಪೊಲೀಸರು ಹೇಳಿದ್ದೇನು?

ಸದ್ಯ ಪತ್ನಿ ಮತ್ತು ಮಗುವನ್ನು ಕೊಲೆ ಮಾಡಿದ ಆರೋಪಿ ಹೊನ್ನೂರಪ್ಪನನ್ನು ಬಂಧಿಸಿದ್ದೇವೆ. ಇತ್ತೀಚೆಗೆಯಲ್ಲ ಆಕೆಯನ್ನು ಮದುವೆಯಾದ ದಿನದಿಂದಲೂ ಆರೋಪಿ ಆಕೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಇದೇ ವಿಚಾರಕ್ಕೊಮ್ಮೆ ಜಗಳ ಶುರುವಾದಾಗ ಅಕ್ಕಪಕ್ಕದ ಮನೆಯವರು ಬಂದು ಜಗಳ ಬಿಡಿಸಿದ್ದಾರೆ. ಮತ್ತೊಮ್ಮೆ ಇದೇ ರೀತಿ ಕ್ಯಾತೆ ತೆಗೆದು, ಕೊಲೆ ಮಾಡಿದ್ದಾನೆ ಎಂದಿದ್ದಾರೆ. ಆರೋಪಿಯ ತಾಯಿ ಲಕ್ಷ್ಮಿ ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪವಿದೆ. ವಿಚಾರಣೆ ನಡೆಸಲಾಗುತ್ತದೆ.
ಮೃತಳ ಅಣ್ಣ ಸುರೇಶ್ ದೂರು ಕೊಟ್ಟಿದ್ದಾರೆ. ವರದಕ್ಷಿಣೆ ವಿಚಾರವಾಗಿ ಅವರೆಂದಿಗೂ ಸಮಸ್ಯೆ ಮಾಡಿಲ್ಲ. ಅನುಮಾನ ವಿಚಾರಕ್ಕೆ ಆಗಾಗ್ಗೆ ಜಗಳವಾಗ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ, (ಏಜೆನ್ಸೀಸ್).