Hundreds of crores of irregularities in Valmiki Corporation
ಕೋಲಾರ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರೂ. ದುರುಪಯೋಗ ಮಾಡಲಾಗಿದೆ. ಆದರೆ, ಮಕ್ಕಳಿಗೆ ಸರಿಯಾಗಿ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಕೊಡುತ್ತಿಲ್ಲ. ಪ್ರತಿಭಾ ಪುರಸ್ಕಾರದ ಹಣ ಯಾರಪ್ಪನ ಸ್ವತ್ತಲ್ಲ. ನಾವು ನೀವು ಕಟ್ಟಿದ ತೆರಿಗೆ ಹಣದಲ್ಲಿ ಪುರಸ್ಕಾರ ಮಾಡುತ್ತಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ವಾಲ್ಮೀಕಿ ನಾಯಕ ಸಂಟನೆಗಳ ಒಕ್ಕೂಟ ಆಶ್ರಯದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಾಲ್ಮೀಕಿ ನಾಯಕ ಸಮುದಾಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಣವಾದರೂ ಬಿಟ್ಟೆವು, ನಮ್ಮ ಒಗ್ಗಟ್ಟು ಬಿಡಲ್ಲ ಎಂಬ ಪ್ರತಿೆಯನ್ನು ಸಮುದಾಯದ ಪ್ರತಿಯೊಬ್ಬರೂ ಮಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಅಂಕದೊಂದಿಗೆ ಉತ್ತಮ ವ್ಯಕ್ತಿತ್ವ ಹಾಗೂ ಮನುಷ್ಯತ್ವ ಬೆಳೆಸಿಕೊಳ್ಳುವ ಶಿಕ್ಷಣದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಪ್ರಸ್ತುತ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ರಾಮನ ಹೆಸರಲ್ಲಿ ಮಂದಿರ ಕಟ್ಟಿ, ಈಗ ಲೂಟಿಯಲ್ಲಿ ತೊಡಗಿದ್ದಾರೆ. ವಾಲ್ಮೀಕಿ ಸಮುದಾಯದವರು ಸ್ವಾಭಿಮಾನಕ್ಕೆ ಬದ್ಧರಾಗಿರುವವರು. ಆಧುನಿಕ ದ್ರೋಣಾಚಾರ್ಯರು ಶಿಕ್ಷಣ, ರಾಜಕೀಯ ಹಾಗೂ ಇತರ ೇತ್ರಗಳಲ್ಲಿದ್ದಾರೆ. ಅಂಥವರ ಮೇಲೆ ಕಣ್ಣು ಇಟ್ಟಿರಬೇಕು ಎಂದು ಏಕಲವ್ಯ, ದ್ರೋಣಾಚಾರ್ಯರ ಸನ್ನಿವೇಶದ ಉದಾಹರಣೆ ವಿವರಿಸಿದರು.
ಜನಸಂಖ್ಯೆಗನುಗುಣವಾಗಿ ಮೀಸಲಾತಿ ಕೊಡಬೇಕು. ಆದರೆ ಅದು ಸಾಧ್ಯವಾಗದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಿದೆ. ಮೀಸಲಾತಿ ಯಾರಪ್ಪನ ಸ್ವತ್ತೂ ಅಲ್ಲ. ಸ್ವಾಭಿಮಾನದಿಂದ ಒಗ್ಗಟ್ಟಾಗಿ ಎಲ್ಲ ರೀತಿಯ ಮೀಸಲಾತಿ ಪಡೆಯಬೇಕು ಎಂದರು.
ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಯುವಶಕ್ತಿ ಸರ್ಕಾರಿ ಉದ್ಯೋಗಕ್ಕೆ ಕಾಯದೆ ಉದ್ಯಮಿಗಳಾಗುವ ಮೂಲಕ ಉದ್ಯೋಗ ಸೃಷ್ಟಿ ಮಾಡಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಬೇಕು. ವಿಮರ್ಶಾತ್ಮಕ ಮನೋಭಾವ ಬೆಳೆಸಿಕೊಂಡು ಒಳಿತನ್ನು ಸಾವಧಾನವಾಗಿ ಆಲಿಸಬೇಕು. ಕೃತಕ ಪ್ರಪಂಚದ ವೈಭೋಗದ ಸುಳ್ಳಿನ ಅರಮನೆಯಲ್ಲಿ ಬದುಕದೆ ಗೌತಮಬುದ್ಧನ ರೀತಿ ವಾಸ್ತವ ಅರ್ಥ ಮಾಡಿಕೊಂಡು ಪ್ರಾಮಾಣಿಕ ಬದುಕು ಕಟ್ಟಿಕೊಳ್ಳಬೇಕು. ಹಕ್ಕುಗಳನ್ನು ತಿಳಿದುಕೊಂಡು ಪ್ರಶ್ನಿಸುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದರು.
ವ್ಯಾಟ್ಸಪ್, ಫೇಸ್ಬುಕ್ ಸುಳ್ಳಿನ ಪ್ರಪಂಚದಿಂದ ಹೊರಬಂದು ಮೊಬೈಲ್ ಅನ್ನು ಜ್ಞಾನಕ್ಕೆ ಮಾತ್ರ ಸೀಮಿತಗೊಳಿಸಬೇಕು. ಧರ್ಮ&ಜಾತಿ ಬಗ್ಗೆ ಪ್ರೇಮ ಸಹಜವಾದರೂ ಅದು ನಾನೇ ಶ್ರೇಷ್ಠ ಎಂಬ ಅಹಂ ಆಗಬಾರದು. ಸ್ವಾಭಿಮಾನ, ಶ್ರಮದ ಒಗ್ಗಟ್ಟಿನ ಕೋಟೆ ಕಟ್ಟಿ ಶಿಕ್ಷಣದ ಖಡ್ಗ ಹಿಡಿಯುವುದು ಎಲ್ಲರ ಗುರಿ ಆಗಬೇಕು ಎಂದು ಸಲಹೆ ನೀಡಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ರಂಗಮಂದಿರ ಕಿಕ್ಕಿರಿದು ತುಂಬಿದ್ದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು. ಮಕ್ಕಳು ಅಂಕಗಳಿಗೆ ಸೀಮಿತವಾಗದೆ ವ್ಯಕ್ತಿತ್ವ ಹಾಗೂ ಸಮಾಜದ ಶ್ರೇಯೋಭಿದ್ಧಿಗೆ ಶ್ರಮಿಸಿ. ಉದ್ಯೋಗಿಗಳಾಗದೆ ಉದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.
ಪ್ರತಿಭಾ ಪುರಸ್ಕಾರದಲ್ಲಿ ಸುಮಾರು 250 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನರಸಿಂಹಯ್ಯ, ಅಬ್ಬಣಿ ಶಿವಪ್ಪ, ಬೆಳ್ಳೂರು ಅಶ್ವತ್ಥ್, ಮುನಿಯಪ್ಪ, ನಾಗರಾಜ್, ಕುರಗಲ್ ಗಿರೀಶ್, ಇದ್ದರು.