ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಚೈತ್ರದ ಚಿಗುರು ಕವಿಗೋಷ್ಠಿ ಸಮಾರಂಭವನ್ನು ವಕೀಲರ ಸಂದ ತಾಲೂಕು ಮಾಜಿ ಅಧ್ಯಕ್ಷ ಚಂದ್ರಶೇಖರ ಅವಂಟಿ ಉದ್ಘಾಟಿಸಿದರು. ವಿಜಯಕುಮಾರ ರೋಣದ, ವೀರಭದ್ರಪ್ಪ ಗುರುಮಿಠಕಲ್, ನಾಗಮ್ಮ ರೇಷ್ಮಿ, ಬಸವರಾಜ ಬೊಮ್ಮನಳ್ಳಿ ಇದ್ದರು.
- ವಿಜಯಕುಮಾರ ರೋಣದ ಹೇಳಿಕೆ
- ಚಿತ್ತಾಪುರದಲ್ಲಿ ಕವಿಗೋಷ್ಠಿ ಕವಿತೆಗಳಲ್ಲಿದೆ ಮಾನವೀಯ ಮೌಲ್ಯ
ಚಿತ್ತಾಪುರ: ಉತ್ತಮ ಬದುಕು ನಡೆಸುವ ಮಾರ್ಗ ಹಾಗೂ ಮಾನವೀಯ ಮೌಲ್ಯಗಳು ಕವಿತೆಗಳಲ್ಲಿ ಅಡಗಿವೆ ಎಂದು ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಿಜಯಕುಮಾರ ರೋಣದ ಹೇಳಿದರು.
ಎಕ್ಸ್ಲೆಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಗುರುಬಸವ ಶಿಕ್ಷಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ನಿಂದ ಗುರುವಾರ ಹಮ್ಮಿಕೊಂಡಿದ್ದ ಚೈತ್ರದ ಚಿಗುರು ಕವಿಗೋಷ್ಠ ಹಾಗೂ ಕಸಾಪ ಹಿರಿಯ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಜೀವನದ ಪ್ರತಿಬಿಂಬ. ಕವಿತೆಗಳು ತುಂಬಾ ಸೂಕ್ಷ$್ಮವಾಗಿರುತ್ತವೆ. ಮನಸ್ಸಿಗೆ ಹಿಡಿಸುವಂತಹ ಕವನ ಇರಬೇಕು. ನಿರಂತರ ಬರವಣಿಗೆ ಬೆಳೆಸಿಕೊಳ್ಳಬೇಕು. ಉತ್ತಮ ಪದಗಳನ್ನು ಬಳಸುವ ತಾಕತ್ತು ಕವಿಗಳಿಗೆ ಇರಬೇಕು ಎಂದು ಅಭಿಪ್ರಾಯಪಟ್ಟರು.
ವಕೀಲರ ಸಂದ ತಾಲೂಕು ಮಾಜಿ ಅಧ್ಯಕ್ಷ ಚಂದ್ರಶೇಖರ ಅವಂಟಿ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿದರು.
ನಿವೃತ್ತ ಶಿಕ್ಷಕಿ ನಾಗಮ್ಮ ರೇಷ್ಮಿ, ಗುರುಬಸವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಸವರಾಜ ಬೊಮ್ಮನಳ್ಳಿ, ಕಸಾಪ ಜಿಲ್ಲಾ ಸಂಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಗೌರವ ಅಧ್ಯಕ್ಷ ವೀರೇಂದ್ರ ಕೊಲ್ಲೂರ, ಪ್ರಮುಖರಾದ ಪಂಚಾಕ್ಷರಿ ಪೂಜಾರಿ, ಶಿವಾನಂದ ನಾಲವಾರ, ಅನ್ನಪೂರ್ಣ ಕಟ್ಟಿಮನಿ, ಬಸಪ್ಪ ಯಂಬತ್ನಾಳ್, ಉಮೇಶ ಸಾಸಬಾಳ, ಅಯ್ಯಣ್ಣ ಅವಂಟಿ, ವಿಜಯಕುಮಾರ ಲೊಡ್ಡೆನೋರ, ಬಾಬು ಕಾಶಿ, ರವಿ ಪಾಟೀಲ್, ಭೀಮರಾಯ ಹಡಪದ, ಮಲ್ಲಪ್ಪ ತೋನಸನಳ್ಳಿ, ಸಾಬಣ್ಣ ಮಡಿವಾಳ, ಚಂದ್ರಶೇಖರ ಬಳ್ಳಾ, ಲಿಂಗಪ್ಪ ಮಲ್ಕನ್, ಗಂಗಣ್ಣ ಹೊಸೂರ, ವಿಷ್ಣುವರ್ಧನರೆಡ್ಡಿ, ನಿಂಗಪ್ಪ ಗೋಡೆಕರ್, ಶಿವಾನಂದ ಕೆಂಪಳ್ಳೇರ್, ಅಂಬಿಕಾ ಠಾಕೂರ, ಶಿವಲೀಲಾ ಬಂದಳ್ಳಿ, ರೇಣುಕಾ ರೋಣದ, ಮಹಾದೇವಪ್ಪ, ಪ್ರಿಯಾಂಕಾ ಕುಲಕರ್ಣಿ, ಶ್ವೇತಾ, ಖಾಸೀಂ ಅಲಿ, ವೀರೇಶ, ದೀಪಾ ಸಿದ್ದಯ್ಯ, ಆದಿತ್ಯಾ ಇತರರಿದ್ದರು.
ಸುಮಾರು 29ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಕಸಾಪ ಹಿರಿಯ ಸದಸ್ಯರಾದ ಪ್ರಭಾಕರ ತುರೆ, ರಾಜೇಂದ್ರ ಕೇಶವದಾಸ, ರಾಜು ಸುಗಂಧಿ, ವಿದ್ಯಾವತಿ ಲೋಡ್ಡೆನೋರ್, ಭೀಮರಾಯ ವಚ್ಚಾ ಅವರನ್ನು ಗೌರವಿಸಲಾಯಿತು. ಸಂಗಮೇಶ ರೋಣದ ಸ್ವಾಗತಿಸಿದರು. ನರಸವ್ವ ಚಿನ್ನಾಕಟ್ಟಿ ನಿರೂಪಣೆ ಮಾಡಿದರು. ಲಲಿತಮ್ಮ ರೇಷ್ಮಿ ನಿರೂಪಣೆ ಮಾಡಿದರು.