ಕೆಂಭಾವಿ ಪಟ್ಟಣದ ಉತ್ತರಾದಿ ಮಠದಲ್ಲಿ ಶನಿವಾರ ಶ್ರೀ ಸತ್ಯಾತ್ಮತೀರ್ಥರ ಆದೇಶದ ಅನುಸಾರ ವಿಶ್ವಮಧ್ವ ಮಹಾರಿಷತ್ ಘಟಕ ಲೋಕ ಕಲ್ಯಾಣಾರ್ಥವಾಗಿ ದೇಶದೆಲ್ಲೆಡೆ ಹಮ್ಮಿಕೊಂಡಿರುವ ವಾಲ್ಮೀಕಿ ರಾಮಾಯಣದ ಸಂವತ್ಸರ ಜ್ಞಾನಸತ್ರ ಕಾರ್ಯಕ್ರಮದಲ್ಲಿ ಪಂ. ಪ್ರಭಂಜನಾಚಾರ್ಯ ಇಂದರಗಿ ಪ್ರವಚನ ನೀಡಿದರು.
- ಸಂಸ್ಕೃತ ವಿದ್ವಾಂಸ ಪಂ.ಪ್ರಭAಜನಾಚಾರ್ಯ ಹೇಳಿಕೆ
- ಕೆಂಭಾವಿಯಲ್ಲಿ ಜ್ಞಾನಸತ್ರ ಕಾರ್ಯಕ್ರಮ
ಶಾಸö ತಿಳಿಸಿಕೊಟ್ಟಿರುವ ಉತ್ತಮ ಕರ್ಮವನ್ನು ನಿತ್ಯ ನಾವು ಅನುಷ್ಠಾನ ಮಾಡಿದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಸಂಸ್ಕೃತ ವಿದ್ವಾಂಸ ಬೆಂಗಳೂರಿನ ಪಂ.ಪ್ರಭAಜನಾಚಾರ್ಯ ಇಂದರಗಿ ಹೇಳಿದರು.
ಪಟ್ಟಣದ ಉತ್ತರಾದಿ ಮಠದಲ್ಲಿ ಶನಿವಾರ ಸತ್ಯಾತ್ಮತೀರ್ಥರ ಆದೇಶದ ಅನುಸಾರ ವಿಶ್ವಮಧ್ವ ಮಹಾರಿಷತ್ ಘಟಕ ಲೋಕ ಕಲ್ಯಾಣಾರ್ಥವಾಗಿ ದೇಶದೆಲ್ಲೆಡೆ ಹಮ್ಮಿಕೊಂಡ ವಾಲ್ಮೀಕಿ ರಾಮಾಯಣದ ಸಂವತ್ಸರ ಜ್ಞಾನಸತ್ರ ಕಾರ್ಯಕ್ರಮದ ರಾಮಾಯಣದ ೨ನೇ ಮಾಲಿಕೆ ಉದ್ಘಾಟಿಸಿ ಮಾತನಾಡಿದರು.
ತತ್ರಾಪಿ ಜನ್ಮ ಶತಕೋಟಿಶು ಮಾನವತ್ವಂ ಎಂಬ ಶಾಸö ಹೇಳಿದಂತೆ ಅದೆಷ್ಟೊ ಕೋಟಿ ಪುಣ್ಯಗಳಿಂದ ನಮಗೆ ಮಾನವನ ಜನ್ಮ ಲಭಿಸಿದ್ದು ಅದನ್ನು ಸಾರ್ಥಕಗೊಳಸಿಬೇಕಾದರೆ ಗುರುಗಳ ಮೇಲೆ ಅಚಲ ಭಕ್ತಿ, ಭಗವಂತನ ಮೇಲೆ ಅಚಲ ನಂಬಿಕೆ ಇಟ್ಟು ಜೀವನ ಪರ್ಯಂತ ಸತ್ಕರ್ಮ ಆಚರಿಸಿದಾಗ ಮಾತ್ರ ಮಾನವ ಜನ್ಮಕ್ಕೆ ಮುಕ್ತಿ ದೊರಕಲು ಸಾಧ್ಯ ಎಂದರು.
ರ ಅ ಮ ಎಂಬ ಮೂರು ಅಕ್ಷರದ ರಾಮ ಶಬ್ದದಲ್ಲಿ ನೂರು ಕೋಟಿಗೂ ಅಽಕ ಅರ್ಥ ಅಡಗಿದ್ದು ಅಂಥ ರಾಮ ನಾಮದ ಕುರಿತ ಶ್ರೀ ರಾಮಾಯಣ ಪ್ರವಚನವನ್ನು ದೇಶದೆಲ್ಲೆಡೆ ವಿವಿಧ ಪ್ರವಚನಕಾರರಿಂದ ನಡೆಸಲು ಸತ್ಯಾತ್ಮತೀರ್ಥರು ಸಂಕಲ್ಪ ಮಾಡಿದ್ದಾರೆ. ಇದರ ಅಂಗವಾಗಿ ಇಂದಿನಿAದ ಈ ಜ್ಞಾನಯಜ್ಞ ಕಾರ್ಯಕ್ರಮ ಆರಂಭವಾಗಿದ್ದು ಪ್ರತಿ ತಿಂಗಳು ಐದು ದಿನಗಳ ಕಾಲ ವಿವಿಧ ಪಂಡಿತರಿAದ ಈ ಪ್ರವಚನ ಕಾರ್ಯ ನಡೆಯಲಿದೆ ಎಂದು ಹೇಳಿದರು. ನಂತರ ಐದು ದಿನಗಳವರೆಗೆ ವಾಲ್ಮೀಕಿ ರಾಮಾಯಣದ ಅಯೋಧ್ಯಾ ಕಾಂಡದ ಕುರಿತು ಪ್ರವಚನ ಆರಂಭಿಸಿದರು.
ಅರ್ಚಕ ರಾಘವೇಂದ್ರಚಾರ್ಯ ಜೋಷಿ, ಹಣಮಂತರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಗುರುರಾಜ ನಗನೂರ, ಸಂಜೀವರಾವ ಕುಲಕರ್ಣಿ, ಹಳ್ಳೇರಾವ ಎಚ್ ಕುಲಕರ್ಣಿ, ವಾದಿರಾಜ ಕುಲಕರ್ಣಿ ಸೇರಿ ಜಯಸತ್ಯಪ್ರಮೋದ ಸೇವಾ ಸಂಘದ ಸರ್ವ ಸದಸ್ಯರಿದ್ದರು.