ನಿವೃತ್ತ ಅಧಿಕಾರಿ ಭರತ ಕಾಳಿಸಿಂಗೆ ಸನ್ಮಾನ 
ರಾಜ್ಯ

ಅಧಿಕಾರಕ್ಕಿಂತ ಜನಸೇವೆ ದೊಡ್ಡದು: ಭರತ ಕಾಳಿಸಿಂಗೆ ಅಭಿಮತ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಕ್ಕಿಂತ ಜನಸೇವೆ ದೊಡ್ಡದು: ಭರತ ಕಾಳಿಸಿಂಗೆ ಅಭಿಮತ
  • ನಿವೃತ್ತ ಅಧಿಕಾರಿ ಭರತ ಕಾಳಿಸಿಂಗೆ ಅಭಿನಂದನಾ ಸಮಾರಂಭ
  • ನೇರಲಿ ಗ್ರಾಮಸ್ಥರಿಂದ ಭರತ ಕಾಳಿಸಿಂಗೆ ಸನ್ಮಾನ
ಅಧಿಕಾರಕ್ಕಿಂತ ಜನಸೇವೆ ದೊಡ್ಡದು: ಭರತ ಕಾಳಿಸಿಂಗೆ ಅಭಿಮತ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಅಧಿಕಾರಕ್ಕಿಂತ ಸಾರ್ವಜನಿಕ ಸೇವೆಯೇ ದೊಡ್ಡದು. ಜನರಿಗೆ ಸುರಕ್ಷಿತ, ಪರಿಸರ ಸ್ನೇಹಿ ಹಾಗೂ ಗುಣಮಟ್ಟದ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ತಮ್ಮ ಸೇವೆಯ ಮುಖ್ಯ ಉದ್ದೇಶವಾಗಿತ್ತು ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಕಾಳಿಸಿಂಗೆ ಹೇಳಿದರು.
ಹುಕ್ಕೇರಿ ತಾಲ್ಲೂಕಿನ ನೇರಲಿ ಗ್ರಾಮದ ಸುಬೋದಿ ಬುದ್ಧ ವಿಹಾರದ ಸಭಾಭವನದಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮೂರು ದಶಕಕ್ಕೂ ಹೆಚ್ಚು ಕಾಲ ಸಾರಿಗೆ ಇಲಾಖೆ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ದೊರೆತಿದೆ, ಪಾರದರ್ಶಕ ಹಾಗೂ ಜನಸ್ನೇಹಿ ಸೇವೆ ನೀಡಿದ ತೃಪ್ತಿ ಇದೆ ಎಂದರು.
ಸಕಾಲ ಯೋಜನೆಯಡಿ ಸಾರಥಿ ಹಾಗೂ ವಾಹನ ಸೇವೆಗಳು, ವಾಹನ ನೋಂದಣಿ, ಆರ್‌ಸಿ ವರ್ಗಾವಣೆ, ಚಾಲನಾ ಪರವಾನಗಿ, ರಾಜಸ್ವ ಸಂಗ್ರಹಣೆ ಸೇರಿದಂತೆ ಹಲವು ಸೇವೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಕರ್ತವ್ಯ ನಿರ್ವಹಿಸಲಾಗಿದೆ ಎಂದು ಸ್ಥಾಪಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುಬೋದಿ ಬುದ್ಧಹಾರ ಚಾರಿಟಬಲ್ ಅಧ್ಯಕ್ಷ ಅನಿಲ ಹುಕ್ಕೇರಿ ಮಾತನಾಡಿ, ಕಡುಬಡತನದಿಂದ ಬೆಳೆದು ಬಂದರೂ ಭಾರತ ಕಾಳಿಸಿಂಗೆ ಅವರು ತಮ್ಮ ಆತ್ಮೀಯತೆ, ಸರಳತೆ ಹಾಗೂ ಸಜ್ಜನಿಕೆಯನ್ನು ಉಳಿಸಿಕೊಂಡಿದ್ದಾರೆ. ಕರ್ತವ್ಯನಿಷ್ಠ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಇಂದಿನ ಕಾಲದಲ್ಲಿ ಅಪರೂಪವಾಗಿದ್ದಾರೆ.
ಇದೇ ಸಂದರ್ಭದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡ ಶ್ರೀಶೈಲ ಕಾಳಿಸಿಂಗೆ ಅವರನ್ನು ಸನ್ಮಾನಿಸಲಾಯಿತು.
ತಮ್ಮನಗೌಡ ಪಾಟೀಲ, ಪಿಡಿಒ ಸಂಜಯ ಹೊಸಮನಿ, ಧರ್ಮಾನಂದ ಹೊಸಮನಿ, ಮಾರುತಿ ತಳವಾರ, ನಮೃತಾ ಭರತ ಕಾಳಿಸಿಂಗೆ, ಬಾಳಪ್ಪ ಮಾಳಗೆ, ವಿನೋದ ಕಾಳಿಸಿಂಗೆ, ಬಸವರಾಜ ಕೋಳಿ, ವಿರೂಪಾಕ್ಷಿ ಹೊಸಮನಿ, ಬಸಪ್ಪ ಕಾಳಿಸಿಂಗೆ, ಪ್ರದೀಪ ಕಾಳಿಸಿಂಗೆ,ಅಪ್ಪು ಹುಕ್ಕೇರಿ ಇತರರಿದ್ದರು.