POLICE CASE 
ರಾಜ್ಯ

ಹುಕ್ಕೇರಿ ಗಲಾಟೆ, 21 ಜನರ ವಿರುದ್ಧ ಪ್ರಕರಣ ದಾಖಲು

ಹುಕ್ಕೇರಿ: ಪಟ್ಟಣದ ನಾಕಾ ನಂ.1ರಲ್ಲಿ ಭಾನುವಾರ ರಾತ್ರಿ ಐಪಿಎಲ್ ೈನಲ್ ಪಂದ್ಯದ ನೇರ ಪ್ರಸಾರ ವೀಕ್ಷಣೆ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐಪಿಎಲ್ ೈನಲ್ ಪಂದ್ಯ ಮುಗಿದ ಬಳಿಕ ಕೆಲವರು ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕ ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ಗಲಾಟೆ ಮಾಡಿ, ಶಾಂತಿಭಂಗ ಮಾಡಿದ ಹಿನ್ನೆಲೆಯಲ್ಲಿ ನೇಹಲ್ ಮೋಮಿನ್, ರಮೇಶ ಕಲ್ಲವಡ್ಡರ, ಮನೋಹರ ಕಲ್ಲವಡ್ಡರ, ಅಕ್ಬರ್ ಪೀರಜಾದೆ, ಹಮೀದ್ ಮುಲ್ಲಾ, ಕ್ೈ ಮುಲ್ಲಾ, ಆದಿಲ್ ಮೋಮಿನ್, ನಿಶಾಲ್ ಮುಲ್ಲಾ, ನಾಸೀರ್ ಪೀರಜಾದೆ ಸೇರಿದಂತೆ 9 ಆರೋಪಿಗಳನ್ನು ಬಂಧಿಸಲಾಗಿದ್ದು. ಇನ್ನೂ 12 ಜನ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಹುಕ್ಕೇರಿ ಪೊಲೀಸ್ ಠಾಣೆ ಎಎಸ್‌ಐ ಸಿ.ಎಲ್.ಘಸ್ತಿ ಕರ್ತವ್ಯದಲ್ಲಿ ಇದ್ದು, ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ ಎಂದು ಪ್ರಕರಣದಲ್ಲಿ ನಮೂದಿಸಲಾಗಿದೆ.