ಪಿಯು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ನೆಲಮಂಗಲದ ಹೊಯ್ಸಳ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಗೌರಿಶಂಕರ್​, ಪದವಿ ಕಾಲೇಜು ಪ್ರಾಂಶುಪಾಲ ಎಚ್​.ಆರ್​.ಗೋಪಾಲ್​ ಇದ್ದರು. 
ರಾಜ್ಯ

ಹೊಯ್ಸಳ ಕಾಲೇಜಿಗೆ ಶೇ.99.72 ಫಲಿತಾಂಶ / NELAMANGAL

ನೆಲಮಂಗಲ : ದ್ವೀತಿಯ ಪಿಯು ಪರೀೆಯಲ್ಲಿ ನಗರದ ಹೊಯ್ಸಳ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎ.ಬಿಂದೂ (ವಿಜ್ಞಾನ ವಿಭಾಗ) 597 ಅಂಕ ಪಡೆದು ರಾಜ್ಯಕ್ಕೆ 3ನೇ ರ್ಯಾಂಕ್​ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿ ಜಿ.ಪ್ರಾರ್ಥನಾ 594 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ಹಾಗೂ ವಿಜ್ಞಾನದಲ್ಲಿ 736 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 374 ಮಂದಿ ಅತ್ಯುನ್ನತ ಶ್ರೇಣಿ, 356 ವಿದ್ಯಾರ್ಥಿಗಳು ಪ್ರಥಮ, ಐವರು ದ್ವೀತಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕಾಲೇಜಿಗೆ ಶೇ.99.72 ಫಲಿತಾಂಶ ದೊರೆತಿದೆ ಎಂದು ಪ್ರಾಂಶುಪಾಲ ಗೌರಿಶಂಕರ್​ ತಿಳಿಸಿದ್ದಾರೆ.
ಸಿಹಿ ಹಂಚಿ ಸಂಭ್ರಮಾಚರಣೆ: ಹೊಯ್ಸಳ ಕಾಲೇಜಿಗೆ ಉತ್ತಮ ಲಿತಾಂಶ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿಹಂಚಿ ಸಂಭ್ರಮಿಸಿದ್ದಲ್ಲದೇ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜು ಆರಂಭದಿಂದಲೂ ಕಷ್ಟಪಟ್ಟು ಓದಿರುವ ವಿದ್ಯಾರ್ಥಿಗಳು, ಉಪನ್ಯಾಸಕರ ಶ್ರಮದ ಜತೆಗೆ ಪಾಲಕರ ಸಹಕಾರದಿಂದಾಗಿ ಉತ್ತಮ ಫಲಿತಾಂಶ ದೊರೆತಿದೆ. ಜತೆಗೆ ಭವಿಷ್ಯದಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ಮಾಡಿ ಹೆಚ್ಚು ವಿದ್ಯಾರ್ಥಿಗಳನ್ನು ಇಂಜಿನಿಯರಿಂಗ್​, ಮೆಡಿಕಲ್​ ಕೋರ್ಸ್​ಗಳಿಗೆ ಸೇರುವಂತೆ ಮಾಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆ ಮಾಡಲಿದೆ ಎಂದು ಪ್ರಾಂಶುಪಾಲ ಗೌರಿಶಂಕರ್​ ತಿಳಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ಡಾ.ಟಿ.ರಾಮಕೃಷ್ಣಪ್ಪ, ಹೊಯ್ಸಳ ಪದವಿ ಕಾಲೇಜು ಪ್ರಾಂಶುಪಾಲ ಎಚ್​.ಆರ್​. ಗೋಪಾಲ್​, ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಪೂರ್ಣಿಮಾ, ಅನಿಲ್​.ಜಿ. ಹರೀಶ್​, ಮಹದೇವಪ್ಪಗೌಡ, ಗೀತಾ, ವಿಶ್ವಾಸ್​, ಅಭಿಷೇಕ್​ ಮಧೂಸೂದನ್​, ಜ್ಞಾನೇಶ್ವರ್​ ಇದ್ದರು.