Housewife's throat slit, marriage certificate stolen
ಚಿಕ್ಕಬಳ್ಳಾಪುರ: ನಗರದ ಕಂದವಾರಪೇಟೆಯಲ್ಲಿ ತಡರಾತ್ರಿ ಅಪರಿಚಿತರು ಗೃಹಿಣಿ ಕತ್ತು ಕುಯ್ದು ಕೊಲೆ ಮಾಡಿದ ಬಳಿಕ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾರೆ. "
ಸುಪಾರಿ ಕೊಲೆ ಆರೋಪ
ಕಳೆದ ನಾಲ್ಕು ವರ್ಷಗಳ ಹಿಂದೆ ಚುಂಚನಕಟ್ಟೆಯ ಪುಷ್ಪಲತಾ ಹಾಗೂ ಚಿಕ್ಕಬಳ್ಳಾಪುರ ನಗರದ ಕಂದವಾರಪೇಟೆಯ ಭರತ್ವಿವಾಹವಾಗಿತ್ತು. ದಂಪತಿ ನಡುವೆ ಸದಾ ಗಲಾಟೆಗಳು ನಡೆಯುತ್ತಿದ್ದವು. ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಸಂಧಾನ, ಪಂಚಾಯಿತಿಗಳ ಮೂಲಕ ಇಬ್ಬರ ಮನವೊಲಿಸಲಾಗಿತ್ತು. ಆದರೂ ಹೊಂದಾಣಿಕೆಯಾಗಿಲ್ಲ. ಪುಷ್ಪಲತಾಗೆ ಊಟದಲ್ಲಿ ಆರೋಗ್ಯ ಕೆಡಿಸುವ, ಕೊಲೆ ಮಾಡುವ ವಿಚಾರವಾಗಿ ಮನೆಯಲ್ಲಿ ಚರ್ಚೆಗಳು ನಡೆದಿದ್ದು, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು. ಇದರ ನಡುವೆ ದೇವಸ್ಥಾನಕ್ಕೆ ಹೋಗುವ ನೆಪದಲ್ಲಿ ಮನೆಯಲ್ಲಿ ಪುಷ್ಪಲತಾರನ್ನು ಬಿಟ್ಟು ಹೋಗಿ, ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಬೆಂಗಳೂರಿನ ಚುಂಚನಕಟ್ಟೆಯ ಮಹೇಶ್ ಹಾಗೂ ಲ್ಮ ದಂಪತಿ ಪುತ್ರಿ ಪುಷ್ಪಲತಾ (25) ಮೃತೆ. ಮೃತಳ ಪಾಲಕರು ಆಕೆಯ ಗಂಡನ ಮನೆಯವರು ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪತಿ ಭರತ್ ಜತೆ ಮೃತ ಪುಷ್ಪಲತಾ "
ಪ್ರಕರಣದ ತನಿಖೆಯಾಗಲಿ
ದಂಪತಿಯ ನಡುವೆ ಕೌಟುಂಬಿಕ ಕಲಹವಿದ್ದರೂ ಸುಪಾರಿ ಕೊಟ್ಟು ಕೊಲೆ ಮಾಡುವ ಹಂತಕ್ಕೆ ಹೋಗುವವರಲ್ಲ. ಎಲ್ಲರ ಮನೆಯಲ್ಲೂ ಭಿನ್ನಾಭಿಪ್ರಾಯಗಳು ಇರುತ್ತವೆ. ದೇವಸ್ಥಾನಕ್ಕೆ ಹೋಗುವುದರ ಬಗ್ಗೆ ಗಮನ ಸೆಳೆದಾಗ ಪುಷ್ಪಲತಾ ಬರಲು ಒಪ್ಪಿಕೊಳ್ಳಲಿಲ್ಲ. ಮಗಳ ಜತೆ ಮನೆಯಲ್ಲಿ ಉಳಿದುಕೊಂಡಿದು,್ದ ನಾವು ಪ್ರವಾಸದಲ್ಲಿದ್ದಾಗ ಕೊಲೆಯ ಮಾಹಿತಿ ತಿಳಿಯಿತು. ಪ್ರಕರಣದ ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿೆಯಾಗಲಿ ಎಂದು ಮೃತಳ ಅತ್ತೆ ವಿಜಯಮ್ಮ ತಿಳಿಸಿದ್ದಾರೆ.
ಗುರುವಾರ ತಡರಾತ್ರಿ ಮನೆಗೆ ಅಪರಿಚಿತರು ಬಂದು ಕತ್ತು ಕೊಯ್ದು ಬಳಿಕ ಮೈ ಮೇಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದೇ ವೇಳೆ ಮನೆಯಲ್ಲಿದ್ದ ಮೃತಳ ನಾದಿನಿ ಭವ್ಯಾಗೆ ಮತ್ತು ಬರಿಸುವ ಔಷಧ ನೀಡಿ, ಬಾಯಿಗೆ ಬಟ್ಟೆ ತುರುಕಿದ್ದಾರೆ ಎನ್ನಲಾಗಿದೆ.
"
ಮದುವೆಯಾದಾಗಿನಿಂದಲೂ ಮಗಳು ಪುಷ್ಪಲತಾಗೆ ವರದಣೆ ಕಿರುಕುಳ ನೀಡಲಾಗುತ್ತಿತ್ತು. ಇದರ ನಡುವೆ ಅಳಿಯ ಭರತ್ಗೆ ಬೇರೆ ಮದುವೆ ಮಾಡಿಸಲು ಸಹ ಯತ್ನಿಸಲಾಗಿತ್ತು. ಈಗ ಯೋಜನೆ ರೂಪಿಸಿ, ಸುಫಾರಿ ಕೊಟ್ಟು ಕೊಲೆ ಮಾಡಿಸಲಾಗಿದೆ. > ಲಕ್ಷ್ಮೀ, ಮೃತಳ ತಾಯಿ
ಈ ಪ್ರಕರಣವು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಗೃಹಿಣಿ ಕೊಲೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಗರಠಾಣೆ ಪೊಲೀಸರು ಸ್ಥಳ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.